ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಅಮೇರಿಕಾದ ವರದಿಯನ್ನು ತಿರಸ್ಕರಿಸಿದ ಭಾರತ

ಹಿಂದುಗಳ ಮೇಲಿನ ದಾಳಿಯ ಬದಲು ಮುಸಲ್ಮಾನ ಮತ್ತು ಕ್ರೈಸ್ತರ ಮೇಲಿನ ಆಪಾದಿತ ದಾಳಿಯ ಉಲ್ಲೇಖ

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಿಂದ ಮಾನವಾಧಿಕಾರದ ಬಗ್ಗೆ ಪ್ರಸಾರಗೊಳಿಸಿಲಾದ ೮೦ ಪುಟಗಳ ವರದಿಯನ್ನು ಭಾರತವು ತಳ್ಳಿ ಹಾಕಿದೆ. ಈ ವರದಿಯಲ್ಲಿ ಮಣಿಪುರದಲ್ಲಿನ ಹಿಂಸಾಚಾರದ ಉಲ್ಲೇಖ ಮಾಡಲಾಗಿದ್ದು ಅಲ್ಲಿ ಮಾನವಾಧಿಕಾರದ ಉಲ್ಲಂಘನೆ ಆಗುತ್ತಿದೆ ಎಂದು ಹೇಳಿದೆ.

ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣಧೀರ ಜೈಸ್ವಾಲ್ ಅವರಿಗೆ ಪತ್ರಕರ್ತರ ಸಭೆಯಲ್ಲಿ ಈ ಬಗ್ಗೆ ಕೇಳಿದಾಗ ಅವರು, ನಾವು ಈ ವರದಿಗೆ ಮಹತ್ವ ನೀಡುವುದಿಲ್ಲ ಮತ್ತು ನೀವು ಕೂಡ ಅದನ್ನೇ ಮಾಡಬೇಕು. ಈ ವರದಿಯಿಂದ ಕಂಡು ಬರುವುದು ಏನೆಂದರೆ ಅಮೇರಿಕಾಗೆ ಭಾರತದ ಕುರಿತಾದ ತಿಳುವಳಿಕೆ ಯೋಗ್ಯವಾಗಿಲ್ಲ ಎಂದು ಜೈಸ್ವಾಲ್ ಹೇಳಿದರು.

ಈ ವರದಿಯಲ್ಲಿ ಏನು ಇದೆ ?

೧. ಯು ಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರತಿವರ್ಷ ಮಾನವಾಧಿಕಾರದ ಉಲ್ಲಂಘನೆಯ ಸಂದರ್ಭದಲ್ಲಿ ವರದಿಯನ್ನು ಪ್ರಸಾರಗೊಳಿಸುತ್ತದೆ. ಈ ವರದಿಯಲ್ಲಿ ಚೀನಾ, ಬ್ರೆಜಿಲ್, ಬೇಲಾರುಸ್, ಮ್ಯಾನ್ಮಾರ್ ಮತ್ತು ಭಾರತ ಇವುಗಳ ಉಲ್ಲೇಖ ಮಾಡಲಾಗಿದೆ. ಇದರಲ್ಲಿ ಭಾರತದ ಬಗ್ಗೆ ಹೇಳಿರುವುದೇನೆಂದರೆ, ಮಣಿಪುರದಲ್ಲಿ ಮೈತೆಯಿ ಮತ್ತು ಕೂಕಿ ಜನಾಂಗದಲ್ಲಿ ಜಾತಿಯ ಹಿಂಸಾಚಾರ ನಡೆದಾಗ ಅಲ್ಲಿ ಮಾನವಾಧಿಕಾರದ ಉಲ್ಲಂಘನೆ ಆಗಿದೆ. ಮೇ ೩ ರಿಂದ ನವಂಬರ್ ೧೫.೨೦೨೩ ರ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ ೧೭೫ ಜನರು ಸಾವನ್ನಪ್ಪಿದ್ದು ೬೦ ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರವಾದರು.

೨. ಭಾರತದ ಭಾಜಪ ಸರಕಾರವು ಇಲ್ಲಿನ ಮುಸಲ್ಮಾನರ ಬಗ್ಗೆ ಭೇದ ಭಾವ ಮಾಡುತ್ತಿದೆ. ಭಾರತದಲ್ಲಿ ಕೂಡ ಅಲ್ಪಸಂಖ್ಯಾತರ ಮೇಲೆ ದಾಳಿ ಹೆಚ್ಚಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಮೋದಿ ಸರಕಾರ ಪತ್ರಕರ್ತರ ಬಾಯಿ ಮುಚ್ಚಿಸುವ ಮತ್ತು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತಿದೆ. ಜನರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಿಡುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಒಂದು ವರದಿ ಪ್ರಸಾರಗೊಳಿಸಿದ ಬಳಿಕ ಬಿಬಿಸಿಯ ಕಾರ್ಯಾಲಯದ ಮೇಲೆ ದಾಳಿ ನಡೆಸಲಾಗಿತ್ತು ಹಾಗೂ ರೌಡಿ ಅತೀಕ್ ಮಹಮ್ಮದ್ ಅವನು ಪೊಲೀಸರ ವಶದಲ್ಲಿರುವಾಗಲೇ ಹತ್ಯೆ ಮಾಡಲಾಯಿತು. (ಈ ಎಲ್ಲಾ ಉದಾಹರಣೆಗಳನ್ನು ನೋಡಿದರೆ ಅಮೇರಿಕಕ್ಕೆ ಹಿಂದುಗಳ ಮೇಲಿನ ದಾಳಿಯ ಬಗ್ಗೆ ಯಾವುದೇ ಅನುಕಂಪ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಿಂದುಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ನಡೆಯುವ ದಾಳಿಗಳು, ಕನ್ಹಯ್ಯಾಲಾಲ್ ಅವರನ್ನು ಮುಸಲ್ಮಾನರು ಶಿರಚ್ಛೇದ ಮಾಡಿದ್ದು, ಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ಹಿಂದುತ್ವನಿಷ್ಠರ ನಡೆದಿರುವ ಹತ್ಯೆಗಳು, ಕಾಶ್ಮೀರದಿಂದ ಪಲಾಯನ ಮಾಡಲು ಅನಿವಾರ್ಯಗೊಂಡ ಹಿಂದುಗಳು, ಬಾಂಗ್ಲಾದೇಶದಲ್ಲಿನ ಅಸುರಕ್ಷಿತ ಹಿಂದುಗಳು ಮುಂತಾದವುಗಳ ಬಗ್ಗೆ ಈ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ, ಹಾಗಾಗಿ ಈ ವರದಿಯ ವಿಶ್ವಾಸಾರ್ಹತೆ ಎಷ್ಟು ಇದೆ ಎಂಬುದು ಸ್ಪಷ್ಟವಾಗುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಅಮೇರಿಕಾದ ಭಾರತ ವಿರೋಧಿ ವರದಿಗೆ ರದ್ದಿಯ ಮೌಲ್ಯ ಕೂಡ ಬರುವುದಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಅಮೇರಿಕಾ ಭಾರತದ ಸಂದರ್ಭದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿರುವುದು ಕಳೆದ ಕೆಲವು ವರ್ಷಗಳಿಂದ ಕಂಡು ಬರುತ್ತಿದೆ. ಆದ್ದರಿಂದ ಅಮೇರಿಕಾ ಭಾರತದ ನಿಜವಾದ ಸ್ನೇಹಿತ ಆಗಲು ಎಂದಿಗೂ ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಿ !