Pak PM Ashamed of his Country: ಪಾಕಿಸ್ತಾನಗಿಂತಲೂ ಬಾಂಗ್ಲಾದೇಶ ಮುಂದೆ ಸಾಗುವುದನ್ನು ನೋಡಿ ಸ್ವಂತದ ಬಗ್ಗೆ ನಾಚಿಕೆ ಅನಿಸುತ್ತಿದೆ !

ಪಾಕಿಸ್ತಾನದ ಪ್ರಧಾನಿ ಶಹಾಬಾಜ್ ಶರೀಫ್ ಇವರ ಹೇಳಿಕೆ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಾಬಾಜ್ ಶರೀಫ್ ಇವರು ಸಿಂಧ ಸಿಎಂ ಹೌಸ್ ನಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುವಾಗ, ಬಾಂಗ್ಲಾದೇಶದ ಪ್ರಗತಿ ನೋಡಿ ನನಗೆ ನಾಚಿಕೆ ಅನಿಸುತ್ತಿದೆ.

೧. ೧೯೭೧ ರಲ್ಲಿ ಪಾಕಿಸ್ತಾನದಿಂದ ಬೇರ್ಪಟ್ಟು ಬಾಂಗ್ಲಾದೇಶದ ನಿರ್ಮಾಣವಾಯಿತು. ೫೩ ವರ್ಷಗಳಲ್ಲಿ ಬಾಂಗ್ಲಾದೇಶ ದಕ್ಷಿಣ ಏಷ್ಯಾದಲ್ಲಿ ಎರಡನೇ ಎಲ್ಲಕ್ಕಿಂತ ದೊಡ್ಡ ಅರ್ಥ ವ್ಯವಸ್ಥೆಯ ದೇಶವಾಗಿದೆ. ಬಾಂಗ್ಲಾದೇಶದ ಎಲ್ಲಾ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ೩೭ ಲಕ್ಷ ಕೋಟಿ ರೂಪಾಯಿಗಿಂತಲೂ ಮುಂದೆ ಹೋಗಿದೆ. ಇನ್ನೊಂದು ಕಡೆ ಪಾಕಿಸ್ತಾನದ ಅರ್ಥ ವ್ಯವಸ್ಥೆ ಸತತವಾಗಿ ಕುಸಿಯುತ್ತಿದೆ. ಅದರ ಜಿಡಿಪಿ ೨ ಲಕ್ಷ ಕೋಟಿ ರೂಪಾಯಿ ಇದೆ. ಬಾಂಗ್ಲಾದೇಶದ ಒಂದು ಟಕಾ (ಅಲ್ಲಿಯ ಕರೆನ್ಸಿ) ಪಾಕಿಸ್ತಾನದ ಎರಡು ರೂಪಾಯಿ ಎಷ್ಟು ಇದೆ.

೨. ೨೦೨೬ ರಲ್ಲಿ ಮೊದಲು ಬಾರಿ ಬಾಂಗ್ಲಾದೇಶದ ಜಿಡಿಪಿ ವಿಷಯದಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಆ ಸಮಯದಲ್ಲಿ ಬಾಂಗ್ಲಾದೇಶದ ಪ್ರತಿ ನಾಗರಿಕನ ದೇಶಾಂತರ್ಗತ ಉತ್ಪಾದನೆ ೧ ಲಕ್ಷ ೩೮ ಸಾವಿರ ರೂಪಾಯಿ ಇತ್ತು ಹಾಗೂ ಪಾಕಿಸ್ತಾನದ ಸಂಪೂರ್ಣ ದೇಶದಲ್ಲಿ ಪ್ರತಿಯೊಂದು ನಾಗರಿಕನ ಉತ್ಪಾದನೆ ೧ ಲಕ್ಷ ೨೨ ಸಾವಿರ ರೂಪಾಯಿ ಇತ್ತು. ಈಗ ಪಾಕಿಸ್ತಾನದ ಪ್ರತಿಯೊಂದು ನಾಗರಿಕನ ಜಿಡಿಪಿ ಸಮಾನವಾಗಿದೆ; ಆದರೆ ಬಾಂಗ್ಲಾದೇಶದ ಪ್ರತಿ ನಾಗರಿಕನ ಜಿಡಿಪಿ ೨ ಲಕ್ಷ ರೂಪಾಯಿಗಿಂತಲೂ ಮುಂದೆ ಹೋಗಿದೆ.

೩. ೧೯೭೨ ರಲ್ಲಿ ೭ ಬಾಂಗ್ಲಾದೇಶಿ ಟಕಾ ೧ ಅಮೇರಿಕನ್ ಡಾಲರಿಗೆ ಸಮಾನವಾಗಿತ್ತು. ಹಾಗೂ ಪಾಕಿಸ್ತಾನಿ ೪ ರೂಪಾಯಿ ಒಂದು ಡಾಲರಿಗೆ ಸಮಾನವಾಗಿತ್ತು. ಆದರೆ ಈಗ ಒಂದು ಡಾಲರಿನ ಬೆಲೆ ೧೦೯ ಟಕಾ ಮತ್ತು ೨೭೮ ಪಾಕಿಸ್ತಾನಿ ರೂಪಾಯಿ ಇದೆ.

ಸಂಪಾದಕೀಯ ನಿಲುವು

ಜನರ ಮತ್ತು ಮನಸ್ಸಿಗೆ ನಾಚಿಕೆ ಅನಿಸದಿರುವ ಪಾಕಿಸ್ತಾನಕ್ಕೆ ನಾಚಿಕೆ ಅನಿಸುತ್ತಿದೆ, ಎಂದರೆ ಇದು ಕೂಡ ಕಡಿಮೆ ಏನು ಅಲ್ಲ ! ಯಾವ ಬಾಂಗ್ಲಾದೇಶದ ಜನರ ಮೇಲೆ ಪಾಕಿಸ್ತಾನ ದೌರ್ಜನ್ಯ ನಡೆಸಿತು, ೨೫ ಲಕ್ಷ ಬಾಂಗ್ಲಾದೇಶಿ ಹಿಂದೂ ಮತ್ತು ಮುಸಲ್ಮಾನ ನಾಗರಿಕರ ಹತ್ಯೆ ಮಾಡಿತು, ಆ ಬಾಂಗ್ಲಾದೇಶ ಆರ್ಥಿಕ ಕ್ಷೇತ್ರದಲ್ಲಿ ಪಾಕಿಸ್ತಾನದಕ್ಕಿಂತಲೂ ಮುಂದೆ ಸಾಗುತ್ತಿದೆ ಹಾಗೂ ಪಾಕಿಸ್ತಾನ ದಿವಾಳಿತನದ ಕಡೆಗೆ ತಲುಪಿದೆ, ಇದೇ ಅದಕ್ಕೆ ದೊರೆತಿರುವ ಶಿಕ್ಷೆ ಆಗಿದೆ !