Azerbaijan Threatens India : ‘ನಾವು ಶಾಂತವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲವಂತೆ !’ – ಅಝರಬೈಜಾನ್ ನಿಂದ ಬೆದರಿಕೆ

ಭಾರತ ಮತ್ತು ಆರ್ಮೇನಿಯ ಸ್ನೇಹ ನೋಡಿ ಪಾಕಿಸ್ತಾನದ ಮಿತ್ರ ಅಝರಬೈಜಾನ್ ನಿಂದ ಬೆದರಿಕೆ

ಬಾಕು (ಅಝರಬೈಜಾನ್) – ಫ್ರಾನ್ಸ್, ಭಾರತ ಮತ್ತು ಗ್ರೀಸ್ ನಮ್ಮ ವಿರುದ್ಧ ಅರ್ಮೇನಿಯಾಗೆ ಸಹಾಯ ಮಾಡುತ್ತಿರುವಾಗ ನಾವು ಶಾಂತವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದನ್ನು ಅವರು ಬಹಿರಂಗವಾಗಿ ಮಾಡುತ್ತಿದ್ದಾರೆ. ಸಹಜವಾಗಿ ಅವರು ಇದರೊಂದಿಗೆ ಏನನ್ನಾದರೂ ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ನಾವು ಶಾಂತವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅಝರಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಬೆದರಿಕೆ ಹಾಕಿದ್ದಾರೆ. ಅಝರಬೈಜಾನ್ ಪಾಕಿಸ್ತಾನದ ಮಿತ್ರದೇಶವಾಗಿದ್ದು ಆತ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ್ದಾನೆ. ಇದಕ್ಕಾಗಿಯೇ ಭಾರತವು ಅಝರ್‌ಬೈಜಾನ್‌ನ ಸ್ನೇಹಿತ ಅರ್ಮೇನಿಯಾಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತಿದೆ.

ಭಾರತವು ಅಝರಬೈಜಾನ್ ಮತ್ತು ಅರ್ಮೇನಿಯಾ ಎರಡೂ ದೇಶಗಳ ಜೊತೆಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ. 2022 ರಲ್ಲಿ ಭಾರತವು ಅರ್ಮೇನಿಯಾಕ್ಕೆ ‘ಪಿನಾಕಾ’ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್‌ಗಳು, ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಕಾಶ್ಮೀರದ ವಿಷಯದಲ್ಲಿ ಭಾರತದ ನಿಲುವಿಗೆ ಅರ್ಮೇನಿಯಾದ ಬೆಂಬಲ ಇದೆ.

ಸಂಪಾದಕೀಯ ನಿಲುವು

‘ಅಂತಹ ಬೆದರಿಕೆಗಳಿಗೆ ನಾವು ಸೊಪ್ಪು ಹಾಕುವುದಿಲ್ಲ’, ಎಂದು ಭಾರತವು ಇಸ್ಲಾಮಿ ದೇಶ ಅಝರಬೈಜಾನ್‌ಗೆ ಹೇಳಬೇಕು !