Jaishankar Slams Foreign Media : ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಭಾರತದಲ್ಲಿನ ಚುನಾವಣೆಗಳ ಬಗ್ಗೆ ಟೀಕಿಸುವುದು ಎಂದರೆ ಮಾಹಿತಿಗಳ ಕೊರತೆ ! – ಡಾ. ಎಸ್ ಜೈಶಂಕರ್

ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಇವರಿಂದ ಛೀಮಾರಿ !

ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್

ಭಾಗ್ಯನಗರ (ತೆಲಂಗಾಣ) – ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಭಾರತೀಯ ಚುನಾವಣೆಯಲ್ಲಿ ತಮ್ಮ ರಾಜಕೀಯ ಆಟಗಾರರೆಂದು ತಿಳಿದಿದ್ದಾರೆ. ಅವರು ಪ್ರಜಾಪ್ರಭುತ್ವವನ್ನು ಟೀಕೆಸುತ್ತಿದ್ದರೆ, ಅವರಲ್ಲಿ ಮಾಹಿತಿಯ ಕೊರತೆಯಿಂದ ಅಲ್ಲ. ಬದಲಾಗಿ ಅವರಿಗೆ, ಅದರಿಂದ ಭಾರತದ ಚುನಾವಣೆಯ ಮೇಲೆ ಪರಿಣಾಮ ಬೀರುವುದು ಎಂದು ಅನಿಸುತ್ತದೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ವಿದೇಶಿ ಪ್ರಸಾರ ಮಾಧ್ಯಮಗಳನ್ನು ಖಂಡಿಸಿದರು.

ವಿದೇಶಾಂಗ ಸಚಿವ ಜೈ ಶಂಕರ್ ಇವರು ಮಾತು ಮುಂದುವರಿಸಿ, ವಿದೇಶದಲ್ಲಿನ ಒಂದು ಲೇಖನದಲ್ಲಿ, ‘ಭಾರತದಲ್ಲಿ ಎಷ್ಟೊಂದು ಉಷ್ಣತೆ ಇರುವ ಸಮಯದಲ್ಲಿ ಚುನಾವಣೆ ಏಕೆ ನಡೆಸುತ್ತಾರೆ ? ಎಂದು ಬರೆದಿದ್ದರು. ಇದರ ಬಗ್ಗೆ ನಾನು ಹೇಳುವುದೇನೆಂದರೆ, ಈ ಬಿಸಿಲಿನಲ್ಲಿ ಕೂಡ ಭಾರತದಲ್ಲಿ ಮತದಾನದ ಪ್ರಮಾಣ ನಿಮಗಿಂತಲೂ ಹೆಚ್ಚಾಗಿದೆ. ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚು ಮತದಾನದ ದಾಖಲೆ ಇದೆ. ಭಾರತದ ರಾಜಕಾರಣ ಈಗ ಅಂತರ್ರಾಷ್ಟ್ರೀಯ ಮಟ್ಟಕ್ಕೇ ತಲುಪಿದೆ. ವಿದೇಶಿ ಮಾಧ್ಯಮಗಳು ಅದನ್ನು ಕದಡುವ ಅವಶ್ಯಕತೆ ಇದೆ ಎಂದು ಅವರಿಗೆ ಅನಿಸುತ್ತದೆ. ಅವರ ಭ್ರಮೆ ದೂರಗೊಳಿಸುವ ಸಮಯ ಬಂದಿದೆ, ಇದು ಕೇವಲ ಆತ್ಮ ವಿಶ್ವಾಸದಿಂದ ಆಗಬಹುದು ಎಂದು ಹೇಳಿದರು.

ಮುಂಬಯಿ ದಾಳಿಯ ನಂತರ ಕಾಂಗ್ರೆಸ್ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ !

೨೦೦೮ ರ ಮುಂಬಯಿ ಮೇಲಿನ ಜಿಹಾದಿ ಭಯೋತ್ಪಾದಕ ದಾಳಿಯ ಬಗ್ಗೆ ವಿದೇಶಾಂಗ ಸಚಿವರು, ಈ ದಾಳಿಯ ನಂತರ ಕಾಂಗ್ರೆಸ್ ಸರಕಾರವು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತಾವು ನಿಷ್ಕ್ರಿಯರಾಗಿದ್ದೀರಿ; ಕಾರಣ ಪಾಕಿಸ್ತಾನದ ಮೇಲೆ ದಾಳಿ ಮಾಡದೆ ಇರುವುದೆ ದೇಶಗಳಿಗಾಗಿ ಹೆಚ್ಚು ಲಾಭದಾಯಕವಾಗಿದೆ ಎಂದು ಸರಕಾರಕ್ಕೆ ವಿಶ್ವಾಸ ಇತ್ತು. ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಶ್ಚಿಮಾತ್ಯ ಮಾಧ್ಯಮಗಳು ಯಾವಾಗಲೂ ಸ್ವತಃ ಹೆಚ್ಚು ತಿಳುವಳಿಕೆ ಇರುವವರು ಎಂದು ತಿಳಿದುಕೊಳ್ಳುತ್ತಾರೆ. ಭಾರತದ ಬಗ್ಗೆ ಅವರಿಗೆ ಹೆಚ್ಚು ದ್ವೇಷ ಮತ್ತು ಪೂರ್ವಗ್ರಹ ಇರುವುದು, ಇದು ಯಾವಾಗಲೂ ಕಂಡು ಬರುತ್ತದೆ ಇಂತಹವರನ್ನು ಖಂಡಿಸುವುದರ ಜೊತೆಗೆ ಭಾರತದಲ್ಲಿ ನಿಷೇದ ಹೇರುವುದು ಆವಶ್ಯಕವಾಗಿದೆ !