Patanjali asked to Apologies: ಜಾಹೀರಾತಿನ ಗಾತ್ರದಷ್ಟು ಕ್ಷಮಾಯಾಚನೆ ಮುದ್ರಿಸಲಾಗಿದೆಯೇ ? – ಸರ್ವೋಚ್ಚ ನ್ಯಾಯಾಲಯ

ತಥಾಕಥಿತ ಜಾಹೀರಾತನ್ನು ಪ್ರಸಾರ ಮಾಡಿದ್ದಕ್ಕಾಗಿ ‘ಪತಂಜಲಿ’ ವಿರುದ್ಧ ಅರ್ಜಿ !

ನವ ದೆಹಲಿ – ಯೋಗಋಷಿ ರಾಮದೇವ ಬಾಬಾ ಮತ್ತು ಆಚಾರ್ಯ ಬಾಲಕೃಷ್ಣ ಅವರು ಒಂದು ವಾರದೊಳಗೆ ಸಾರ್ವಜನಿಕರಿಂದ ಬೇಷರತ್ ಕ್ಷಮೆ ಕೇಳಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶ ಕುರಿತು ‘ಪತಂಜಲಿ’ ಕೆಲವು ಪತ್ರಿಕೆಗಳಲ್ಲಿ ಕ್ಷಮೆಯಾಚಿಸುವ ಪತ್ರವನ್ನು ಪ್ರಕಟಿಸಿದೆ. ಆದರೆ, ಸರ್ವೋಚ್ಚ ನ್ಯಾಯಾಲಯವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಇಬ್ಬರೂ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನ್ಯಾಯಮೂರ್ತಿಗಳಾದ ಹಿಮಾ ಕೊಹಲೀ ಮತ್ತು ಅಹಸಾನುದ್ದೀನ್ ಅಮಾನುಲ್ಲಾ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಯುತ್ತಿದೆ. ಏಪ್ರಿಲ್ 22 ರಂದು ಪತಂಜಲಿ ಹಲವಾರು ಪತ್ರಿಕೆಗಳಲ್ಲಿ ಕ್ಷಮಾಯಾಚನೆಯನ್ನು ಪ್ರಕಟಿಸಿತ್ತು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಇರುವಾಗಲೇ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿ ಪತ್ರಿಕಾಗೋಷ್ಠಿ ನಡೆಸಿ, ಇದಕ್ಕೆ ಸಂಬಂಧಿಸಿದಂತೆ ಕ್ಷಮಾಯಾಚನೆಯನ್ನು ಪ್ರಕಟಿಸಲಾಗಿತ್ತು.

ಈ ಕ್ಷಮಾಯಾಚನೆಯ ಬಗ್ಗೆ ಪತಂಜಲಿ ಪರ ವಕೀಲ ಮುಕುಲ್ ರೋಹತಗಿಯವರು ನ್ಯಾಯಾಲಯಕ್ಕೆ, ಜಾಹೀರಾತಿಗೆ 10 ಲಕ್ಷ ರೂಪಾಯಿ ವೆಚ್ಚವಾಗಿದೆ ಮತ್ತು 67 ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಎಂದಿದ್ದಾರೆ. ಈ ಕುರಿತು ನ್ಯಾಯಾಲಯವು, ಈ ಕ್ಷಮೆಯಾಚನೆಯು ನೀವು ಮಾಡಿದ ಜಾಹೀರಾತಿನ ಗಾತ್ರದಷ್ಟು ಇದೆಯೇ ? ಎಂದು ಕೇಳಿದೆ. ಏಪ್ರಿಲ್ 30 ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಂದು ಪ್ರಕಟಿಸಿದ ಕ್ಷಮಾದಾನದ ಕ್ಲಿಪ್ಪಿಂಗ್‌ಗಳನ್ನು ಆ ಸಂದರ್ಭದಲ್ಲಿ ಸಲ್ಲಿಸುವಂತೆ ಸೂಚಿಸಿದೆ.
ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡಿದೆ ಎಂದು ಆರೋಪಿಸಿ ಪತಂಜಲಿ ವಿರುದ್ಧ ‘ಭಾರತೀಯ ವೈದ್ಯಕೀಯ ಸಂಸ್ಥೆ’ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ.