ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ‘ಎಂ.ಡಿ.ಎಚ್.’ ಮತ್ತು ‘ಎವರೆಸ್ಟ್’ ಮಸಾಲೆಗಳ ಮೇಲೆ ನಿಷೇಧ

  • ಮಸಾಲೆಯಿಂದ ಕ್ಯಾನ್ಸರ್‌ ಆಗುವ ಸಾಧ್ಯತೆ ಎಂದು ದಾವೆ

  • ಈ ಮಸಾಲೆಗಳ ತಪಾಸಣೆಯನ್ನು ಭಾರತದಲ್ಲಿಯೂ ಮಾಡಲಾಗುತ್ತದೆ

 

ನವದೆಹಲಿ – ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಯಾವಾಗಲೂ ಮಸಾಲೆಗಳನ್ನು ಖರೀದಿಸುವಾಗ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ಯಾಕೇಜ್ ಮಾಡಿದ ಮಸಾಲೆಗಳನ್ನು ಖರೀದಿಸಲು ಒತ್ತಾಯಿಸುತ್ತದೆ; ಆದರೆ ಸಿಂಗಾಪುರದ ನಂತರ ಹಾಂಕಾಂಗ್‌ನಲ್ಲಿ ಭಾರತದ 2 ಸಂಸ್ಥೆಗಳ 4 ಮಸಾಲೆಗಳನ್ನು ನಿಷೇಧಿಸಲಾಗಿದೆ. ಈ ಮಸಾಲೆಗಳು ಕ್ಯಾನ್ಸರ್‍‌ಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

(ಸೌಜನ್ಯ – The Indian Express)

1. ಹಾಂಗ್‌ಕಾಂಗ್‌ನ ಆಹಾರ ಮತ್ತು ಪರಿಸರ ನೈರ್ಮಲ್ಯ ಇಲಾಖೆಯ ಆಹಾರ ಸುರಕ್ಷತೆ ಕೇಂದ್ರದ ವರದಿಯ ಪ್ರಕಾರ, ‘ಎಂಡಿಹೆಚ್’ ಮತ್ತು ‘ಎವರೆಸ್ಟ್’ ಈ ಪ್ರಸಿದ್ಧ ಮಸಾಲೆಗಳ ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್, ಕ್ಯಾನ್ಸರ್ ಉಂಟುಮಾಡುವ ಕೀಟನಾಶಕವು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ‘ಎಂ.ಡಿ.ಎಚ್.ನ ಮದ್ರಾಸ್ ಕರಿ ಪುಡಿ, ಸಾಂಬಾರ್ ಮಸಾಲಾ ಮಿಕ್ಸ್ಡ್ ಮಸಾಲಾ ಪೌಡರ್, ಕರಿ ಪುಡಿ ಮಿಶ್ರಿತ ಮಸಾಲಾ ಪೌಡರ್ ಮತ್ತು ‘ಎವರೆಸ್ಟ್ ಫಿಶ್ ಕರಿ ಮಸಾಲಾ’ ಎಂಬ 4 ಮಸಾಲೆಗಳಲ್ಲಿ ಹೆಚ್ಚು ಕಂಡುಬಂದಿದೆ. ಆದರೆ, ಮೇಲಿನ ಎರಡೂ ಸಂಸ್ಥೆಗಳು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

2. ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಈ ಮಸಾಲೆಗಳನ್ನು ನಿಷೇಧಿಸಿದ ನಂತರ, ಭಾರತದ ‘ಎಫ್.ಎಫ್.ಎಸ್.ಎಸ್.ಐ.’ ಕೂಡ ಪರೀಕ್ಷೆಗಾಗಿ ಈ ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸಿದೆ. ನೇಪಾಳ ಕೂಡ ಈ ಕ್ರಮ ಕೈಗೊಂಡಿದೆ.

‘ಎಥಿಲೀನ್ ಆಕ್ಸೈಡ್’ ಎಂದರೇನು ?

‘ನ್ಯಾಶನಲ್ ಕ್ಯಾನ್ಸರ್ ಇನ್ಸಿಟ್ಯೂಟ್’ನ ಪ್ರಕಾರ, ‘ಎಥಿಲೀನ್ ಆಕ್ಸೈಡ್’ ಸುಡುವ ಬಣ್ಣರಹಿತ ಅನಿಲವಾಗಿದೆ. ಇದಕ್ಕೆ ಸಿಹಿ ವಾಸನೆ ಇದೆ. ಇದನ್ನು ಕೀಟನಾಶಕ ಮತ್ತು ಸೋಂಕುನಿವಾರಕವಾಗಿ ಬಹಳ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ. ಈ ಕೀಟನಾಶಕವನ್ನು ಅನೇಕ ವಸ್ತುಗಳನ್ನು ಉಳಿಸಲು ಬಳಸಲಾಗುತ್ತದೆ. ಈ ಕಾರಣಕ್ಕಾಗಿ ತಂಬಾಕು, ಕೆಲವು ವೈದ್ಯಕೀಯ ಉತ್ಪನ್ನಗಳು, ಸೌಂದರ್ಯವರ್ಧಕಗಳು ಮತ್ತು ಜೇನುಸಾಕಣೆಯಲ್ಲಿ ಬಳಸುವ ಕೆಲವು ಉಪಕರಣಗಳು ಸಹ ಅದರ ಅಂಶಗಳನ್ನು ಒಳಗೊಂಡಿರಬಹುದು. ‘ಎಥಿಲೀನ್ ಆಕ್ಸೈಡ್’ನ ಸಂಪರ್ಕಕ್ಕೆ ಬರುವ ವಿವಿಧ ರೀತಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇವುಗಳಲ್ಲಿ ‘ಲಿಂಫೋಮಾ’, ‘ಲ್ಯುಕೇಮಿಯಾ’, ಹೊಟ್ಟೆಯ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಸೇರಿವೆ.