ಆಯುರ್ವೇದದ ಮಹತ್ವ

ಹಿಂದುಸ್ಥಾನವು ಆಯುರ್ವೇದದ ಜನ್ಮಸ್ಥಾನವಾಗಿದ್ದು ಪುರಾತನ ದೇವಕಾಲದಿಂದ ಇಲ್ಲಿಯವರೆಗೆ ಶಾಶ್ವತವಾಗಿ ಉಳಿದಿದೆ. ಆಯುರ್ವೇದ ಶಾಸ್ತ್ರವು ಮನುಷ್ಯನಲ್ಲಿನ ಯಾವುದೇ ರೋಗವನ್ನು ಮೂಲ ಸಹಿತ ನಾಶ ಮಾಡುವಂತಹ ರಾಮಬಾಣವಾಗಿದೆ. ಋಷಿಮುನಿಗಳು ಬೇರೆ ಬೇರೆ ವನಸ್ಪತಿಗಳ ಅಧ್ಯಯನ ಮತ್ತು ಸ್ವಚಿಕಿತ್ಸೆ ಮಾಡಿಕೊಂಡು ಆಯುರ್ವೇದವು ತಯಾರಾಗಿದೆ. ಇತಿಹಾಸ ಕಾಲದ ರಾಜರು ಅರಮನೆಗಳಲ್ಲಿ ಅಥವಾ ಆಸ್ಥಾನದಲ್ಲಿ ಆಯುರ್ವೇದಾಚಾರ್ಯರನ್ನು ನೇಮಿಸುತ್ತಿದ್ದರು, ಎಂಬುದು ನಮಗೆ ಕಂಡು ಬರುತ್ತದೆ. ಹೃದ್ರೋಗ ಉಂಟಾಗುವುದರ ಕಾರಣಗಳೇನು ? ಇದನ್ನು ಕೂಡ ಆಯುರ್ವೇದದಲ್ಲಿ ನೀಡಲಾಗಿದೆ. ಮುಖ್ಯವೆಂದರೆ ಆಯುರ್ವೇದದಿಂದ ಹೃದ್ರೋಗವೂ ಗುಣವಾಗುತ್ತದೆ.

– ಶ್ರೀ. ಪ್ರಕಾಶ ಶಿಂಪಿ, ಸೊಲ್ಲಾಪುರ