|
ಭೋಪಾಲ್ (ಮಧ್ಯಪ್ರದೇಶ) – ರಾಜ್ಯದ ಗುನಾ ಜಿಲ್ಲೆಯಲ್ಲಿ ಅಯಾನ ಪಠಾಣ ಹೆಸರಿನ ಎಂಬ ಮುಸ್ಲಿಂ ಯುವಕ ಓರ್ವ ಹಿಂದೂ ಮುಸ್ಲಿಂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದನು. ಇದಕ್ಕೆ ಯುವತಿಯ ತಾಯಿ ವಿರೋಧಿಸಿದ್ದಳು. ಇದರಿಂದ ಯುವತಿಯು ಮನೆಬಿಟ್ಟು ಪಕ್ಕದಲ್ಲಿ ವಾಸಿಸುತ್ತಿದ್ದ ಅಯಾನ ಬಳಿಗೆ ಹೋದಳು. ಅವನು ಅವಳಿಗೆ ಮನೆಯಲ್ಲಿ ಬಂಧಿಸಿ, ಅವಳ ಮೇಲೆ ಬಲಾತ್ಕಾರ ಮಾಡಿದನು. ಅವಳ ಪಿತ್ರಾರ್ಜಿತ ಸಂಪತ್ತನ್ನು ಅವನ ಹೆಸರಿಗೆ ಮಾಡಬೇಕೆಂದು ಒತ್ತಡ ಹೇರಿದನು. ಇದಕ್ಕೆ ಅವಳು ವಿರೋಧಿಸಿದಾಗ ಅವನು ಅವಳ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದನು. ಥಳಿಸಿದ ಬಳಿಕ ಗಾಯದ ಮೇಲೆ ಮೆಣಸಿನ ಪುಡಿಯನ್ನು ಎರಚುತ್ತಿದ್ದನು. 1 ತಿಂಗಳು ಈ ರೀತಿ ನಡೆಯುತ್ತಿತ್ತು. ಎಪ್ರಿಲ 16 ರಂದು ರಾತ್ರಿ ಅಯಾನ ಪುನಃ ಅವಳಿಗೆ ಅಮಾನವೀಯವಾಗಿ ಥಳಿಸಿದನು. ಆಗ ಅವಳು ಗಾಯಗೊಂಡಳು. ಅವಳು ಕೂಗಬಾರದೆಂದು ಅವಳ ತುಟಿಗೆ `ಫೆವಿಕ್ವಿಕ’ ಅಂಟಿಸಿದನು. ಕೊನೆಯಲ್ಲಿ ಅದೇ ರಾತ್ರಿ ಅವಳು ಮನೆಬಿಟ್ಟು ಓಡಿ ಹೋಗುವಲ್ಲಿ ಯಶಸ್ವಿಯಾದಳು. 5 ಕಿ.ಮೀ ನಡೆದುಕೊಂಡು ಹೋಗಿ ಅವಳು ಪೊಲೀಸ ಠಾಣೆ ತಲುಪಿದಳು. ಅವಳ ಗಂಭೀರ ಸ್ಥಿತಿಯನ್ನು ನೋಡಿ ಪೊಲೀಸರು ಅಯಾನ ವಿರುದ್ಧ ದೂರು ದಾಖಲಿಸಿ ಅವನನ್ನು ಬಂಧಿಸಿದರು. ಸಂತ್ರಸ್ತೆಯ ತಾಯಿಯು ಅವಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಳು.
ಘಟನೆ ಲವ್ ಜಿಹಾದ ಅಲ್ಲ ! – ಗುನಾದ ಹೆಚ್ಚುವರಿ ಪೊಲೀಸ ಅಧೀಕ್ಷಕ
`ಸನಾತನ ಪ್ರಭಾತ’ದ ಪ್ರತಿನಿಧಿಯು ಗುನಾ ಜಿಲ್ಲೆಯ ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಮಾನ ಸಿಂಹ ಠಾಕೂರ ಇವರೊಂದಿಗೆ ಸಂಪರ್ಕವನ್ನು ಸಾಧಿಸಿದಾಗ ಅವರು ಹೇಳಿಕೆ ನೀಡಿ, ಈ ಘಟನೆ ಲವ್ ಜಿಹಾದ ಅಲ್ಲ, ಸಂತ್ರಸ್ಥೆ ಬಡ ಕುಟುಂಬದವಳಾಗಿದ್ದಾಳೆ. ಅವಳು ಮತ್ತು ಅಯಾನ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಯಾನ `ಅವಳ ಸಂಪತ್ತು ಸಿಗಬೇಕು’ ಎಂದು ಅವಳನ್ನು ಥಳಿಸಿದನು ಎಂದು ಹೇಳಿದರು.
Madhya Pradesh: Ayan Pathan rapes Hindu woman, brutally assaults and tortures her for property, arrestedhttps://t.co/hY5rT07lwn
— OpIndia.com (@OpIndia_com) April 19, 2024
ಸಂಪಾದಕೀಯ ನಿಲುವುಮಹಿಳೆಯರ ಮೇಲೆ ದೌರ್ಜನ್ಯದ ಘಟನೆಗಳು ನಡೆಯಬಾರದು ಎಂದು ಇಂತಹ ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ನೀಡುವುದು ಆವಶ್ಯಕವಾಗಿದೆ ! |