India Lauded by IMF & World Bank : ಭಾರತದ ಅಧ್ಯಕ್ಷತೆಯಲ್ಲಿ ನಡೆದ ‘ಜಿ-20’ ಪರಿಷತ್ತಿಗೆ ‘ಐ.ಎಂ.ಎಫ್.’ ಮತ್ತು ವಿಶ್ವ ಬ್ಯಾಂಕ್‌ನಿಂದ ಮೆಚ್ಚುಗೆ

ವಾಷಿಂಗ್ಟನ್ – ಭಾರತದ ಅಧ್ಯಕ್ಷತೆಯಲ್ಲಿ ನಡೆದ `ಜಿ-20’ ಪರಿಷತ್ತಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್.) ಮತ್ತು ವಿಶ್ವ ಬ್ಯಾಂಕ್ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿವೆ. ‘ಐ.ಎಂ.ಎಫ್.’ ಮತ್ತು ವಿಶ್ವಬ್ಯಾಂಕ್ ವಾರ್ಷಿಕ ಸಭೆ ಅಮೇರಿಕೆಯಲ್ಲಿ ನಡೆಯುತ್ತಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಅವರು ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಭಾರತದ ಆರ್ಥಿಕ ವ್ಯವಹಾರ ಸಚಿವ ಅಜಯ ಸೇಠ ಮತ್ತು ಭಾರತೀಯ ರಿಸರ್ವ್ ಬ್ಯಾಂಕ ಮುಖ್ಯಸ್ಥ ಶಕ್ತಿಕಾಂತ ದಾಸ ಅವರಂತಹ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಭಾರತದ ನೇತೃತ್ವದ ‘ಜಿ-20’ ಪರಿಷತ್ತು ಜಾಗತಿಕ ವಿಷಯಗಳ ಬಗ್ಗೆ ಒಮ್ಮತ ಮೂಡಿಸಿರುವ ಬಗ್ಗೆ ಆಶ್ಚರ್ಯಕರವಾಗಿದೆಯೆಂದು ಈ ಸಭೆಯಲ್ಲಿ ಹೇಳಲಾಗಿದೆ.

ಭಾರತೀಯ ಆರ್ಥಿಕತೆಯ ಬಗ್ಗೆಯೂ ಮೆಚ್ಚುಗೆ !

ಈ ಸಭೆಯಲ್ಲಿ ‘ಹಣಕಾಸಿನ ನೀತಿಗಳಿಂದ ಭಾರತ ಸೇರಿದಂತೆ ಉದಯೋನ್ಮುಖ ಆರ್ಥಿಕತೆಗಳಲ್ಲಿ ಆರ್ಥಿಕ ಸ್ಥಿರತೆಯನ್ನು ರಕ್ಷಿಸಲಾಗುತ್ತದೆ’ ಎಂದು ಹೇಳುವ ಮೂಲಕ ಭಾರತಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಈ ಸಭೆಯಲ್ಲಿ ಹವಾಮಾನ ಬದಲಾವಣೆಯನ್ನು ಎದುರಿಸಲು ಹಣಪೂರೈಕೆ ಹೇಗೆ ಮಾಡಬೇಕು? ಎನ್ನುವ ವಿಷಯದ ಮೇಲೆ ಚರ್ಚೆ ನಡೆಯಿತು. ಸಧ್ಯಕ್ಕೆ ಬ್ರಾಝೀಲನ ಅಧ್ಯಕ್ಷತೆಯಡಿಯಲ್ಲಿ ‘ಜಿ-20’ ಪರಿಷತ್ತು ನಡೆಯಲಿದೆ. ಏಪ್ರಿಲ್ 17 ಮತ್ತು 18 ರಂದು ‘ಜಿ-20’ ಹಣಕಾಸು ಮಂತ್ರಿಗಳು ಮತ್ತು ಕೇಂದ್ರೀಯ ಬ್ಯಾಂಕ ಗವರ್ನರ್‌ಗಳ ಸಭೆ ನಡೆಯಿತು. ಆ ಸಮಯದಲ್ಲಿ, ಆರ್ಥಿಕ ವ್ಯವಹಾರ ಸಚಿವ ಅಜಯ ಸೇಠ ಅವರು ಅಮೇರಿಕ, ಬ್ರಿಟನ, ಸೌದಿ ಅರೇಬಿಯಾ, ಜಪಾನ, ಬ್ರಾಜಿಲ ಮತ್ತು ದಕ್ಷಿಣ ಆಫ್ರಿಕಾದ ಆರ್ಥಿಕ ವ್ಯವಹಾರ ಸಚಿವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ಆಯೋಜಿಸಿದರು.