|
ನವದೆಹಲಿ – `ನೆಸ್ಲೆ’ ಸಂಸ್ಥೆಯ ಚಿಕ್ಕ ಮಕ್ಕಳ ಖಾದ್ಯ ಪದಾರ್ಥದಲ್ಲಿ (ಬೇಬಿ ಫುಡ್ ನಲ್ಲಿ) ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಕಂಡು ಬಂದಿದೆಯೆಂದು `ಪಬ್ಲಿಕ್ ಆಯ್’ ಈ ಸಂಕೇತಸ್ಥಳ ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ‘ಸಕ್ಕರೆ ಸೇವನೆ ಚಿಕ್ಕ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ರೀತಿ ಸಕ್ಕರೆ ಬಳಕೆ ಮಾಡುವುದರಿಂದ ಮಕ್ಕಳಲ್ಲಿ ದೀರ್ಘಕಾಲದ ಕಾಯಿಲೆಗಳು ಮತ್ತು ಬೊಜ್ಜು ಹೆಚ್ಚಾಗುವ ಸಾಧ್ಯತೆಯಿದ್ದು, ಮಕ್ಕಳಲ್ಲಿ ಸಕ್ಕರೆ ತಿನ್ನುವ ಅಭ್ಯಾಸವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
1. ‘ನೆಸ್ಲೆ’ ಸಂಸ್ಥೆಯ ಉತ್ಪಾದನೆಯಲ್ಲಿ ಬಳಸುವ ಎಲ್ಲಾ ಪದಾರ್ಥಗಳನ್ನು ಆ ಪದಾರ್ಥಗಳ ಹೊದಿಕೆಯ ಮೇಲೆ ಸೂಚಿಸುತ್ತದೆ; ಆದರೆ ಸಕ್ಕರೆಯ ಉಪಯೋಗವನ್ನು ಮಾತ್ರ ಉಲ್ಲೇಖಿಸಿರುವುದಿಲ್ಲ. ಸಕ್ಕರೆಯ ಉಪಯೋಗದ ಮಾಹಿತಿ ನೆಸ್ಲೆಯಿಂದ ಮುಚ್ಚಿಡಲಾಗುತ್ತಿದೆಯೆಂದು ಕಂಡುಬರುತ್ತದೆ.
2. ಭಾರತದಲ್ಲಿ ತಯಾರಿಸಲಾದ ಎಲ್ಲಾ ‘ಸೆರೆಲಾಕ್’ ಮತ್ತು ‘ಬೇಬಿ ಪ್ರಾಡಕ್ಟ್ಸ’ ಗಳಲ್ಲಿ ನಿರ್ಧರಿಸಿರುವ ಪ್ರಮಾಣಾನುಸಾರ ಆಹಾರದಲ್ಲಿ ಸರಾಸರಿ 3 ಗ್ರಾಂ ಸಕ್ಕರೆಯನ್ನು ಹಾಕಲಾಗುತ್ತದೆ. ದಿನಕ್ಕೆ ಒಂದು ಬಾರಿ ಮಕ್ಕಳಿಗೆ ಎಷ್ಟು ಪ್ರಮಾಣದಲ್ಲಿ ಸೆರೆಲಾಕ್ ನೀಡಬೇಕು ಎಂದು ಈ ಸಂಸ್ಥೆಯ ಪ್ಯಾಕೆಟ್ ನಲ್ಲಿ ತಿಳಿಸಲಾಗುತ್ತದೆ.
3. ಆಫ್ರಿಕೆಯ ಇಥಿಯೋಪಿಯಾ ಮತ್ತು ಏಷ್ಯಾದ ಥೈಲ್ಯಾಂಡ್‌ನಂತಹ ದೇಶಗಳಲ್ಲಿ, 6 ಗ್ರಾಂ ವರೆಗೆ ಸಕ್ಕರೆ ಪ್ರಮಾಣ ಇರುವುದು ಕಂಡುಬಂದಿದೆ.
4. ವಿಶೇಷವೆಂದರೆ, ಜರ್ಮನಿ ಮತ್ತು ಬ್ರಿಟನ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಉತ್ಪನ್ನಗಳನ್ನು ಮಾರಾಟ ಮಾಡುವಾಗ, ಅವುಗಳಲ್ಲಿ ಸಕ್ಕರೆ ಇರುವುದಿಲ್ಲ. ಆದರೆ ‘ಭಾರತೀಯರಿಗೆ ಮೋಸ ಮಾಡಲಾಗುತ್ತಿದೆ’, ಎಂಬುದು ಇದರಿಂದ ತಿಳಿದುಬರುತ್ತದೆ.
ಸಂಪಾದಕೀಯ ನಿಲುವುಭಾರತ ಸರಕಾರವು ತಕ್ಷಣವೇ ಇದರ ಗಾಂಭೀರ್ಯತೆ ಅರಿತು ನೆಸ್ಲೆ ಸಂಸ್ಥೆಯ ಈ ಪದಾರ್ಥಗಳನ್ನು ನಿರ್ಬಂಧಿಸಬೇಕು ಮತ್ತು ಅದರ ಇನ್ನಿತರ ಪದಾರ್ಥಗಳ ತನಿಖೆ ನಡೆಸಬೇಕು. |