Dubai Flood : ದುಬೈನಲ್ಲಿ ಧಾರಾಕಾರ ಮಳೆ !

ಓಮನ್ ಮತ್ತು ಬಹರೀನ್‌ನಲ್ಲೂ ಪ್ರವಾಹ

ದುಬೈ (ಯುನೈಟೆಡ್ ಅರಬ್ ಎಮಿರೇಟ್ಸ್) – ಏಪ್ರಿಲ್ 16 ರಂದು ಬಂದ ಭಾರೀ ಮಳೆಯಿಂದಾಗಿ ದುಬೈ ನಗರದಲ್ಲಿ ಪ್ರವಾಹ ಉಂಟಾಗಿದೆ. ವಿಮಾನ ನಿಲ್ದಾಣ, ರೈಲ್ವೆ ಮತ್ತು ಮೆಟ್ರೋ ರಸ್ತೆಗಳು ಎಲ್ಲೆಂದರಲ್ಲಿ ನೀರಿನ ಹೊಳೆ ಹರಿಯುತ್ತಿದೆ. ಮಳೆ ಬಂದ ಮರುದಿನವೂ ಕೂಡ ಈ ನೆರೆ ನೀರು ಕಡಿಮೆ ಆಗಲಿಲ್ಲ. ಮಳೆಯಿಂದಾಗಿ ಇಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅನೇಕ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. ಸರ್ಕಾರವು ಅಲ್ಲಿನ ಶಾಲೆಗಳಿಗೆ ರಜೆ ನೀಡಿದೆ, ನಾಗರಿಕರು ಅಗತ್ಯವಿದ್ದರೆ ಮಾತ್ರ ಹೊರಗೆ ಬರುವಂತೆ ಸೂಚನೆ ನೀಡಲಾಗಿದೆ.

ಈ ಪ್ರವಾಹ ಪರಿಸ್ಥಿತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಲ್ಲಿನ ವಾಣಿಜ್ಯ ಸಂಕೀರ್ಣಗಳಲ್ಲಿ ಮೊಣಕಾಲುದ್ಧ ನೀರು ನಿಂತಿದೆ. ಬಹರೀನ್, ಓಮನ್, ಅಬುಧಾಬಿ ಮತ್ತು ಶಾರ್ಜಾದಲ್ಲೂ ಪ್ರವಾಹದ ಪರಿಸ್ಥಿತಿ ನಿರ್ಮಾಣ ಆಗಿದೆ. ಪ್ರವಾಹಕ್ಕೆ ಸಿಲುಕಿ ಓಮನ್‌ನಲ್ಲಿ ಹದಿನೆಂಟು ಜನರು ಸಾವನ್ನಪ್ಪಿದ್ದಾರೆ.