ಅಮೇರಿಕ: ಹಿಂದೂಗಳ ಮೇಲಿನ ದಾಳಿಯಲ್ಲಿ ಗಮನಾರ್ಹ ಹೆಚ್ಛಳ

ಭಾರತೀಯ ಮೂಲದ ಸಂಸದರಿಂದ ಚಿಂತೆ ವ್ಯಕ್ತ

ವಾಷಿಂಗ್ಟನ್ – ಅಮೇರಿಕದಲ್ಲಿ ಹಿಂದೂ ಮತ್ತು ಹಿಂದೂ ದೇವಸ್ಥಾನಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆ ಭಾರತೀಯ ಮೂಲದ ಸಂಸದ ಶ್ರೀ. ಠಾಣೆದಾರ ಅವರು ಚಿಂತೆ ವ್ಯಕ್ತಪಡಿಸಿದ್ದಾರೆ. ‘ನ್ಯಾಷನಲ್ ಪ್ರೆಸ್ ಕ್ಲಬ್’ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಶ್ರೀ. ಠಾಣೆದಾರ್ ಮಾತನಾಡಿ, ಅಮೇರಿಕೆಯಲ್ಲಿ ಸದ್ಯ ಹಿಂದೂ ಧರ್ಮದ ಮೇಲಿನ ದಾಳಿಗಳು ಹೆಚ್ಚಾಗುತ್ತಿವೆ. ಆನ್‌ಲೈನ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕವೂ ತಪ್ಪು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ. ನಮ್ಮ ದೂರಿನ ಹೊರತಾಗಿಯೂ, ಅಮೇರಿಕ ಸರ್ಕಾರ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಸಿದ್ಧವಾಗಿಲ್ಲ. ಇದುವರೆಗು ನಡೆದ ದಾಳಿಯಲ್ಲಿ ಯಾರನ್ನೂ ಬಂಧಿಸಲಾಗಿಲ್ಲ. (ತಮ್ಮನ್ನು ಪ್ರಜಾಪ್ರಭುತ್ವದ ಗುತ್ತಿಗೆದಾರನೆಂದು ಹೇಳಿಕೊಳ್ಳುವ ಅಮೇರಿಕ ಸರ್ಕಾರಕ್ಕೆ ನಾಚಿಕೆಗೇಡು! – ಸಂಪಾದಕ)

ಸಂಸದ ಠಾಣೆದಾರರ ಹೇಳಿಕೆ:

1. ಹಿಂದೂ ಸಮಾಜದ ಮೇಲಿನ ದಾಳಿಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಅನಿಸುತ್ತದೆ. ಅಮೇರಿಕೆಯಲ್ಲಿರುವ ಹಿಂದೂ ಸಮಾಜ ಒಗ್ಗೂಡುವುದು ಇಂದಿನ ಕಾಲದ ಅಗತ್ಯವಾಗಿದೆ. ನಾನು ನಿಮ್ಮೊಂದಿಗೆ ದೃಢವಾಗಿ ನಿಲ್ಲುತ್ತೇನೆ.

2. ನಾನು ಬಾಲ್ಯದಿಂದಲೂ ಹಿಂದೂ ಧರ್ಮವನ್ನು ಆಚರಿಸುತ್ತಾ ಬೆಳೆದಿದ್ದೇನೆ. ಹಿಂದೂ ಧರ್ಮ ಅತ್ಯಂತ ಶಾಂತಿಪ್ರಿಯ ಧರ್ಮವಾಗಿದೆ. ಹಿಂದೂ ಧರ್ಮದಲ್ಲಿ ಇತರ ಧರ್ಮಗಳ ಮೇಲೆ ದಾಳಿ ಮಾಡಲಾಗುವುದಿಲ್ಲ. ಆದರೂ ಹಿಂದೂ ಸಮಾಜವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ತಪ್ಪಾಗಿ ಅರ್ಥೈಸಲಾಗುತ್ತಿದೆ. ಮತ್ತು ಕೆಲವೊಮ್ಮೆ ಅದನ್ನು ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗುತ್ತಿದೆ.

3. ಹಿಂದೂ ದೇವಸ್ಥಾನಗಳ ಮೇಲೆ ಯೋಜಿತ ರೀತಿಯಲ್ಲಿ ದಾಳಿಗಳು ನಡೆಯುತ್ತಿವೆ. ಇದರಿಂದಾಗಿ ಹಿಂದೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.