‘ಹಿಂದೂಗಳಿಗಾಗಿ ಎತ್ತಿದ ಧ್ವನಿ ನಿಲ್ಲಿಸಲಾಗುವುದಂತೆ !’ – ಬೆದರಿಕೆ

ರಾಜಸ್ಥಾನ: ಬಿಜೆಪಿ ಕಾರ್ಯಕರ್ತನಿಗೆ ಶಿರಚ್ಛೇದ ಮಾಡುವ ಬೆದರಿಕೆ!

ಕೋಟಾ (ರಾಜಸ್ಥಾನ) – ಇಲ್ಲಿನ ಉದ್ಯೋಗ ನಗರದಲ್ಲಿ ವಾಸಿಸುತ್ತಿರುವ ಬಿಜೆಪಿ ಕಾರ್ಯಕರ್ತ ಮನೋಜ್ ಕುಮಾರ ಎಂಬುವವರ ಮನೆಯ ಬಾಗಿಲಿಗೆ ಒಂದು ಪೇಪರ್ ಅಂಟಿಸಿರುವುದು ಪತ್ತೆಯಾಗಿದೆ. ಈ ಪೇಪರ್ ನಲ್ಲಿ, ‘ಗುಸ್ತಾಖ್-ಎ-ರಸೂಲ್’ ಗಾಗಿ (ಪ್ರವಾದಿ ಮುಹಮ್ಮದ್ ಪೈಗಂಬರ್ ರನ್ನು ಅವಮಾನ ಮಾಡುವವರಿಗೆ), ದೇಹದಿಂದ ತಲೆಯನ್ನು ಬೇರ್ಪಡಿಸುವುದು, ತಲೆಯಿಂದ ದೇಹವನ್ನು ಬೇರ್ಪಡಿಸುವುದು ಒಂದೇ ಒಂದು ಶಿಕ್ಷೆಯಾಗಿದೆ. ನೀವು ಹಿಂದೂಗಳ ಪರವಾಗಿ ಸಾಕಷ್ಟು ಧ್ವನಿ ಎತ್ತುತ್ತೀರಿ. ಈಗ ನಿಮ್ಮ ಧ್ವನಿಯನ್ನು ನಿಲ್ಲಿಸಲಾಗುವುದು. ನಾವು ಅಲ್ಲಾಹುವಿನ ಸೇವಕರು ಮತ್ತು ನಿಮ್ಮನ್ನು ಬಿಡುವುದಿಲ್ಲ. ಈಗ ನಿಮಗೆ ರಾಮ ಕಾಪಾಡುತ್ತಾನೋ ,ನೋಡೋಣ’ ಎಂದು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಮನೋಜ್ ಅವರ ಭದ್ರತೆಗಾಗಿ ಅವರ ಮನೆಯ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಸೈನಿ ತಿಳಿಸಿದ್ದಾರೆ. ತನಿಖೆಗಾಗಿ ತಂಡವನ್ನು ರಚಿಸಲಾಗಿದೆ.

ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ವೇಳೆ ನಗರದಲ್ಲಿ ಭಗವಾ ಧ್ವಜ ಹಾರಿಸುವ ವಿಚಾರವಾಗಿ ಕೆಲವರೊಂದಿಗೆ ವಿವಾದ ಉಂಟಾಗಿತ್ತು ಎಂದು ಮನೋಜ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಕೇಸರಿ ಧ್ವಜ ಧ್ವಜ ಹಾರಿಸುವಾಗ ಕೆಲವರು ದೇವಸ್ಥಾನದ ಬಳಿ ಕುರಿಗಳನ್ನು ಕಟ್ಟಿದ್ದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ಮತ್ತು ಹೊಡೆದಾಟ ನಡೆದಿತ್ತು. ಅದೇ ವೇಳೆಯಲ್ಲಿ ಜೀವ ತೆಗೆಯುವ ಮತ್ತು ಬಾಂಬ್ ಸ್ಫೋಟಿಸುವ ಬೆದರಿಕೆಗಳನ್ನು ಹಾಕಿದ್ದರು. ಆಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗಿನ ಬೆದರಿಕೆಯನ್ನು ಆಧರಿಸಿ ಈಗ ಈ ಹೊಸ ಬೆದರಿಕೆ ಹಾಕಿರುವ ಸಾಧ್ಯತೆ ಇದೆ ಎಂದು ಮನೋಜ್ ಅವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಇಂತಹ ಬೆದರಿಕೆ ಹಾಕುವ ಧೈರ್ಯ ಯಾರಿಗೂ ಬರಬಾರದು ಎಂದು ಹಿಂದೂಗಳಿಗೆ ಅನ್ನಿಸುವುದು!