CRPF Officer Dismissed: ನಕಲಿ ಟ್ರ್ಯಾಕ್ ಸೂಟ್‌ ಮಾರಾಟ ಪ್ರಕರಣ; ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅಧಿಕಾರಿ ವಜಾ!

ನೋಯ್ಡಾ (ಉತ್ತರ ಪ್ರದೇಶ) – ಫೋರ್ಸ್ ಗ್ರೂಪ್ ಸೆಂಟರ್‌ನಲ್ಲಿ ನಕಲಿ ಟ್ರ್ಯಾಕ್ ಸೂಟ್‌ಗಳನ್ನು ( ವ್ಯಾಯಾಮ ಮಾಡುವುದಕ್ಕಾಗಿ ಅಥವಾ ಕ್ರೀಡಾ ಆಟಗಳಿಗಾಗಿ ಉಪಯೋಗಿಸುವ ಒಂದು ಬಗೆಯ ಉಡುಪು) ಮಾರಾಟ ಮಾಡಿದ ಆರೋಪದ ಮೇಲೆ ನೋಯ್ಡಾ ದಲ್ಲಿನ ಗ್ರೂಪ್ ಸೆಂಟರ್ ನ ಉಪ ಮಹಾ ನಿರ್ದೇಶಕ ಹರ್ವಿಂದರ್ ಸಿಂಗ್ ಕಲಶ್ ಅವರನ್ನು ದೇಶದ ಅತಿದೊಡ್ಡ ಕೇಂದ್ರೀಯ ಅರೆಸೇನಾ ಪಡೆಯ ಕೇಂದ್ರೀಯ ಮೀಸಲು ಪೊಲೀಸ್ ಪಡೆ ತೆಗೆದುಹಾಕಿದೆ. ಇವರ ಜೊತೆಗೆ ಹಲವಾರು ನೌಕರರನ್ನು(ಸಿಬ್ಬಂದಿ ಯನ್ನು) ಕೂಡ ಅಮಾನತುಗೊಳಿಸಲಾಗಿದೆ. ನಕಲಿ ಸೂಟ್ ಮಾರಾಟ ಪ್ರಕರಣದ ತನಿಖೆಯನ್ನು ಹಿರಿಯ ಅಧಿಕಾರಿಗಳಿಗೆ ವಹಿಸಲಾಗಿತ್ತು. ತನಿಖಾ ವರದಿಯ ಆಧಾರದ ಮೇಲೆ ಹರ್ವಿಂದರ್ ಸಿಂಗ್ ಕಲಶ್ ಅವರನ್ನು ತೆಗೆದುಹಾಕಲು ಆದೇಶ ನೀಡಲಾಗಿದೆ.

ಸಂಪಾದಕೀಯ ನಿಲುವು

ಕೇವಲ ಅಧಿಕಾರದಿಂದವಜಾಗೊಳಿಸಿದರೆ ಪ್ರಯೋಜನವೇನು? ಇಂತವರ ವಿರುದ್ಧ ದೂರು ದಾಖಲಿಸಿ ಜೈಲಿಗೆ ಹಾಕಬೇಕು!