ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಇವರ ರಾಮನಾಥಿ, ಗೋವಾದ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ !
ರಾಮನಾಥಿ (ಗೋವಾ) – ಸರ್ವೋಚ್ಚ ನ್ಯಾಯಾಲಯದ ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಇವರು ಮಂಗಳವಾರ, ಏಪ್ರಿಲ್ 9 ರಂದು ಯುಗಾದಿಯ ಶುಭಮುಹೂರ್ತದಂದು ಇಲ್ಲಿಯ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಹಿಂದೂ ಧರ್ಮದ ಪ್ರಸಾರ ಕಾರ್ಯದ ಮಾಹಿತಿಯನ್ನು ಅತ್ಯಾಸಕ್ತಿಯಿಂದ ತಿಳಿದುಕೊಂಡರು. ಅವರೊಂದಿಗೆ ಗೋವಾದ ಪ್ರಸಿದ್ಧ ಹಿಂದುತ್ವನಿಷ್ಠ ಉದ್ಯಮಿ ಶ್ರೀ. ಜಯಂತ ಮಿರಿಂಗಕರ ಉಪಸ್ಥಿತರಿದ್ದರು. ಸನಾತನ ಸಾಧಕ ಶ್ರೀ. ನಿಶಾದ ದೇಶಮುಖ ಅವರು ಅವರಿಗೆ ಆಶ್ರಮದ ನಡೆಯುತ್ತಿರುವ ಕಾರ್ಯದ ಪರಿಚಯ ಮಾಡಿಕೊಟ್ಟರು.
ತದನಂತರ ನಡೆದ ಒಂದು ಅನೌಪಚಾರಿಕ ಸಮಾರಂಭದಲ್ಲಿ ಸನಾತನ ಪ್ರಭಾತ ನಿಯತಕಾಲಿಕೆಯ ನೂತನ ಸಮೂಹ ಸಂಪಾದಕರಾದ ಶ್ರೀ. ಯೊಗೇಶ ಜಲತಾರೆಯವರು ನ್ಯಾಯವಾದಿ ಉಪಾಧ್ಯಾಯ ಇವರಿಗೆ ಹಾರ ಹಾಕಿ, ಶಾಲು ಮತ್ತು ಶ್ರೀಫಲವನ್ನು ಹಾಗೂ ಉಡುಗೊರೆಯನ್ನು ನೀಡಿ ಗೌರವಿಸಿದರು.
.@AshwiniUpadhyay ji visited our head office in Goa today.
Our editor-in-chief Yogesh Jaltare ji and he had a cordial discussion on various issues pertaining to the Rashtra and Hindu Dharma.
Ashwini ji spoke about Hindu Rashtra amongst other things.
He was warmly felicitated. pic.twitter.com/B7IXkMqjTu
— Sanatan Prabhat (@SanatanPrabhat) April 9, 2024
ಹಾಗೆಯೇ ಶ್ರೀ. ಮಿರಿಂಗಕರ ಇವರನ್ನು ಕೂಡ ನ್ಯಾಯವಾದಿ ಜಲತಾರೆಯುವರು ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಉಪಾಧ್ಯ ಅವರು, ಆಶ್ರಮದಲ್ಲಿ ನಡೆಯುತ್ತಿರುವ ಕಾರ್ಯ ಅನುಪಮವಾಗಿದೆ. ಇಲ್ಲಿ ಅಗಾಧ ಪ್ರಮಾಣದಲ್ಲಿ ಸಾತ್ವಿಕತೆ ಇದ್ದು, ಈಶ್ವರೀ ಚೈತನ್ಯದ ಅನುಭೂತಿ ಬರುತ್ತದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಡೆಯುತ್ತಿರುವ ಕಾರ್ಯಗಳು ಬಹಳ ಸ್ಪೂರ್ತಿ ನೀಡುತ್ತದೆ ಎಂದು ಹೇಳಿದರು.
ನ್ಯಾಯವಾದಿ ಉಪಾಧ್ಯಾಯ ಇವರು ಹಿಂದೂ ಸಾಂಸ್ಕೃತಿಕ ಪೀಠದ ಪರವಾಗಿ ಯುಗಾದಿಯ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಗೋವಾಗೆ ಬಂದಿದ್ದರು. ಆಶ್ರಮವನ್ನು ನೋಡಿದ ಬಳಿಕ ಅವರು ಈ ಕಾರ್ಯಕ್ರಮಕ್ಕೆ ತೆರಳಿದರು. ಅವರು `ರಾಮರಾಜ್ಯ ಮತ್ತು ಭಾರತೀಯ ಸಂವಿಧಾನ’ ಈ ವಿಷಯದ ಮೇಲೆ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದರು.