Youths in Contact with Terrorists: ಬಾಂಬ್ ಸ್ಫೋಟದ 2 ಪ್ರಮುಖ ಶಂಕಿತರೊಂದಿಗೆ ಸಂಪರ್ಕದಲ್ಲಿ ಹರ್ಮುಲ್ ಪ್ರದೇಶದಲ್ಲಿ 3 ಯುವಕರು !

ಬೆಂಗಳೂರು ಬಾಂಬ್ ಸ್ಫೋಟದ ಕೊಂಡಿ ಛತ್ರಪತಿ ಸಂಭಾಜಿನಗರ ತನಕ !

ಛತ್ರಪತಿ ಸಂಭಾಜಿನಗರ – ಕೆಲ ದಿನಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಬಾಂಬ್ ಸ್ಫೋಟದ ಶಂಕಿತ ಆರೋಪಿಗಳೊಂದಿಗೆ ಛತ್ರಪತಿ ಸಂಭಾಜಿನಗರದ ಹರ್ಮುಲ್ ಪ್ರದೇಶದ ಮೂವರು ಯುವಕರು ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಮೂವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ವಿಚಾರಣೆಗೆ ಒಳಪಡಿಸಿದೆ. ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಂಕಿತ ಭಯೋತ್ಪಾದಕರಾದ ಅಬ್ದುಲ್ ಮತೀನ್ ತಾಹಾ ಮತ್ತು ಮುಸವ್ವಿರ್ ಹುಸೇನ್ ಶಾಜಿಬ್ ಅವರೊಂದಿಗೆ ವರ್ಚುವಲ್ ಕರೆನ್ಸಿ (ಕ್ರಿಪ್ಟೋಕರೆನ್ಸಿ ಮೂಲಕ) ವ್ಯವಹರಿಸಿದ್ದಾರೆ ಎಂದು ಮೂವರ ಮೇಲೆ ಆರೋಪವಿದೆ. ವಿಚಾರಣೆಗೆ ಒಳಗಾದ ಮೂವರೂ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟಿದ್ದಾರೆ. ಆದರೂ ಲಕ್ಷಗಟ್ಟಲೆ ಆದಾಯ ಪಡೆಯುತ್ತಿರುವುದರಿಂದ 2 ವರ್ಷಗಳಿಂದ ತನಿಖಾ ಸಂಸ್ಥೆಗಳು ನಿಗಾ ವಹಿಸಿದೆ.

ಬೆಂಗಳೂರು ಸ್ಫೋಟಕ್ಕೆ ‘ಐಡಿ ಟೈಮರ್’ ಬಳಸಲಾಗಿದೆ. ಈ ಪ್ರಬಲ ಬಾಂಬ್ ಸ್ಫೋಟದಲ್ಲಿ 11 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಎನ್.ಐ.ಎ. ಮತ್ತು ದೆಹಲಿ ಪೊಲೀಸರ ತಂಡವು ಹರ್ಸುಲ್ ಪ್ರದೇಶದ 3 ಯುವಕರನ್ನು ಕೂಲಂಕಷವಾಗಿ ವಿಚಾರಣೆ ನಡೆಸಿತು. ಅವರ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಅವರು ಬಳಸುತ್ತಿದ್ದ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕಿತ ಭಯೋತ್ಪಾದಕರು ನಮಗೆ ತಿಳಿದಿಲ್ಲ ಎಂದು ಯುವಕರು ಹೇಳಿದ್ದಾರೆ. ಸುಮಾರು 8 ಗಂಟೆಗಳ ತನಿಖೆಯ ಬಳಿಕ ತಂಡ ಅಲ್ಲಿಂದ ನಿರ್ಗಮಿಸಿತು. ನಂತರ ಹೆಚ್ಚಿನ ತನಿಖೆಗಾಗಿ ಯುವಕರನ್ನು ಎ.ಟಿ.ಎಸ್. (ಭಯೋತ್ಪಾದನಾ ನಿಗ್ರಹ ದಳ) ಕಚೇರಿಗೆ ಕರೆಸಲಾಯಿತು.

ಪರಾರಿಯಾಗಿರುವ ಉಗ್ರರ ಮೇಲೆ 10 ಲಕ್ಷ ರೂಪಾಯಿ ಬಹುಮಾನ !

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಶಂಕಿತ ಉಗ್ರರ ಹೆಸರುಗಳನ್ನೂ ತನಿಖಾ ಸಂಸ್ಥೆ ಬಹಿರಂಗಪಡಿಸಿದೆ. ಅವರ ಹೆಸರು ಅಬ್ದುಲ್ ಮತೀನ್ ತಾಹಾ ಮತ್ತು ಮುಸವ್ವಿರ್ ಹುಸೇನ್ ಶಾಜಿಬ್ ಎಂದಾಗಿದೆ. ಅವರ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿದೆ. ಅವರು ‘ಕ್ರಿಪ್ಟೋಕರೆನ್ಸಿ’ಯಲ್ಲಿ ವ್ಯವಹರಿಸುತ್ತಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.