ಜಗತ್ತಿನ ಉತ್ಪತ್ತಿಯ ಬಗ್ಗೆ ಮಹತ್ವದ ಸಂಶೋಧನೆ ಮಾಡಿದ್ದರು !
ಲಂಡನ್ (ಇಂಗ್ಲೆಂಡ್) – ಬ್ರಿಟಿಷ್ ಭೌತಶಾಸ್ತ್ರಜ್ಞ ಮತ್ತು ‘ದೈವೀ ಕಣ’ದ ಶೋಧನೆಗಾಗಿ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಪೀಟರ್ ಹಿಗ್ಸ್ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ‘ಹಿಗ್ಸ್-ಬೋಸಾನ್ ಕಣ’, ಅಂದರೆ ‘ದೈವೀ ಕಣ’ವನ್ನು ಕಂಡುಹಿಡಿದ್ದರು. ಈ ಆವಿಷ್ಕಾರವು ಬಿಗ್ ಬ್ಯಾಂಗ್ ನಂತರ ಬ್ರಹ್ಮಾಂಡವನ್ನು, ಅಂದರೆ ಭಾರವಾದ ವಸ್ತುವನ್ನು ಹೇಗೆ ನಿರ್ಮಾಣವಾಯಿತು ಎಂಬುದನ್ನು ವಿವರಿಸಲು ಸಹಾಯ ಮಾಡಿತು. ಈ ಆವಿಷ್ಕಾರಕ್ಕಾಗಿ ಅವರಿಗೆ 2013 ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.
(ಸೌಜನ್ಯ – WION)
ಅವರ ಸಾವಿನ ಬಗ್ಗೆ ಮಾಹಿತಿ ನೀಡುವಾಗ ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯವು, ಏಪ್ರಿಲ್ 8 ರಂದು ಅನಾರೋಗ್ಯದ ನಂತರ ಪೀಟರ್ ತನ್ನ ಮನೆಯಲ್ಲಿ ಕೊನೆಯುಸಿರೆಳೆದರು ಎಂದು ಹೇಳಿದೆ. ಈ ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದರು.
ಹಿಗ್ಸ್ ಅವರ ಸಂಶೋಧನೆಯ ಸಂಕ್ಷಿಪ್ತ ವಿವರ !
ಸುದ್ದಿ ವಾಹಿನಿ ‘ಬಿಬಿಸಿ’ಯ ಪ್ರಕಾರ, 1960 ರ ದಶಕದಲ್ಲಿ, ಹಿಗ್ಸ್ ಮತ್ತು ಇತರ ಭೌತಶಾಸ್ತ್ರಜ್ಞರು ವಿಶ್ವವು ಯಾವುದರಿಂದ ಆಗಿದೆ ?, ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಆ ಸಮಯದಲ್ಲಿ ಹಿಗ್ಸ್ ಬರೆದ ಪ್ರಬಂಧವನ್ನು 1964 ರಲ್ಲಿ ಪ್ರಕಟಿಸಲಾಯಿತು; ಆದರೆ ಅದು ಆ ಸಮಯದಲ್ಲಿ ಅನೇಕರಿಗೆ ಅರ್ಥವಾಗಿರಲಿಲ್ಲ. ಅವರು 2006 ರಲ್ಲಿ ಎಡಿನ್‌ಬರ್ಗ್ ವಿಶ್ವವಿದ್ಯಾಲಯದಿಂದ ನಿವೃತ್ತರಾದರು. 2012 ರಲ್ಲಿ, ಹಿಗ್ಸ್ ಅವರ ಸಂಶೋಧನೆಯ ಆಧಾರದ ಮೇಲೆ, ವಿಜ್ಞಾನಿಗಳು ಅಂತಿಮವಾಗಿ ಪ್ರತ್ಯಕ್ಷ ಮಾಹಿತಿಯನ್ನು ಪಡೆದರು. ಅದಕ್ಕೆ ‘ಹಿಗ್ಸ್ ಬೋಸನ್’ ಎಂದು ಹೆಸರಿಸಲಾಯಿತು. ಜುಲೈ4, 2012 ರಂದು, ಕಣದ ಅಸ್ತಿತ್ವವನ್ನು ದೃಢೀಕರಿಸಲಾಗಿದೆ ಎಂದು ಘೋಷಿಸಲಾಯಿತು. 2012 ರವರೆಗೂ, ಈ ಕಣವು ವಿಜ್ಞಾನದಲ್ಲಿ ಕೇವಲ ಪರಿಕಲ್ಪನೆಯಾಗಿತ್ತು.
ಪೀಟರ್ ಹಿಗ್ಸ್ 1929 ರಲ್ಲಿ ನ್ಯೂಕ್ಯಾಸಲ್‌ನಲ್ಲಿ ಜನಿಸಿದರು. ಶಾಲೆಯ ನಂತರ, ಹಿಗ್ಸ್ ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು. ಆ ಸಮಯದಲ್ಲಿ ಅವರು ಸೈದ್ಧಾಂತಿಕ ಭೌತಶಾಸ್ತ್ರದ ಹೊಸ ಆಯ್ಕೆಯನ್ನು ಆರಿಸಿಕೊಂಡರು. ನೊಬೆಲ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಅವರಿಗೆ ನೀಡಿ ಗೌರವಿಸಲಾಗಿದೆ.
‘ಗಾಡ್ ಪಾರ್ಟಿಕಲ್’ ಮತ್ತು ಭಾರತ !
‘ಗಾಡ್ ಪಾರ್ಟಿಕಲ್’ ಶೋಧಕಾರ್ಯದಲ್ಲಿ ಭಾರತವೂ ಕೊಡುಗೆ ನೀಡಿದೆ. ‘ಹಿಗ್ಸ್ ಬೋಸನ್’ ಹೆಸರಿನಲ್ಲಿ ‘ಹಿಗ್ಸ್’ ಎಂಬ ಹೆಸರು ಪೀಟರ್ ಹಿಗ್ಸ್ ಅವರಿಂದ ಬಂದಿದೆ. ಅದರೊಂದಿಗೆ ‘ಬೋಸನ್’ ಎಂಬ ಹೆಸರು ಭಾರತೀಯ ವಿಜ್ಞಾನಿ ಸತ್ಯೇಂದ್ರ ನಾಥ್ ಬೋಸ್ ಅವರ ಹೆಸರಿನೊಂದಿಗೆ ಸಂಬಂಧ ಹೊಂದಿದೆ. ಜುಲೈ 2012 ರಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ಲೇಖನವು ಬೋಸ್ ಅವರನ್ನು ‘ಫಾದರ್ ಆಫ್ ಗಾಡ್ ಪಾರ್ಟಿಕಲ್’ ಎಂದು ಹೇಳಲಾಗಿತ್ತು.
ಅಂದಿನ 19ನೇ ಶತಮಾನದಲ್ಲಿ ಕಲ್ಕತ್ತಾದಲ್ಲಿ ಜನಿಸಿದ ಸತ್ಯೇಂದ್ರ ಬೋಸ್ ಅವರು ‘ಕ್ವಾಂಟಮ್ ಮೆಕ್ಯಾನಿಕ್ಸ್’ ಮತ್ತು ಗಣಿತ ಭೌತಶಾಸ್ತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದರು. ಬೋಸ್ ಅವರು ‘ಕ್ವಾಂಟಮ್ ಸ್ಟ್ಯಾಟಿಸ್ಟಿಕ್ಸ್’ ಕುರಿತು ಒಂದು ಪ್ರಬಂಧವನ್ನು ಬರೆದರು ಮತ್ತು ಅದನ್ನು 1924 ರಲ್ಲಿ ಆಲ್ಬರ್ಟ್ ಐನ್‌ಸ್ಟೈನ್‌ಗೆ ಕಳುಹಿಸಿದರು. ಬೋಸ್ ಅವರ ಕೃತಿಯ ಮಹತ್ವವನ್ನು ಮನಗಂಡ ಐನ್ ಸ್ಟೀನ್ ಅದನ್ನು ಜರ್ಮನ್ ಜರ್ನಲ್ ನಲ್ಲಿ ಪ್ರಕಟಿಸಿದರು. ಈ ನಿಯತಕಾಲಿಕದಲ್ಲಿ ‘ಬೋಸಾನ್’ ಎಂಬ ಪದವನ್ನು ಮೊದಲ ಬಾರಿಗೆ ಬಳಸಲಾಯಿತು. ಸತ್ಯೇಂದ್ರ ನಾಥ್ ಬೋಸ್ ಅವರ ಸಂಶೋಧನೆಗೆ ಐನ್‌ಸ್ಟೈನ್ ಅವರೇ ‘ಬೋಸನ್’ ಎಂದು ಹೆಸರಿಟ್ಟರು. ಬೋಸ್ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮವಿಭೂಷಣ’ ನೀಡಲಾಯಿತು.
‘ಹಿಗ್ಸ್ ಬೋಸನ್’ ಪ್ರಾಮುಖ್ಯತೆ !
‘ಬಿಬಿಸಿ’ ವರದಿಯನುಸಾರ “ಹಿಗ್ಸ್ ಬೋಸಾನ್ ಕಣಗಳಿಗೆ ತೂಕವನ್ನು ನೀಡುತ್ತದೆ” ಎಂದು ಲಿವರ್‌ಪೂಲ್ ವಿಶ್ವವಿದ್ಯಾಲಯದಲ್ಲಿ ಕಣ ಭೌತಶಾಸ್ತ್ರವನ್ನು ಕಲಿಸುವ ತಾರಾ ಸಿಯರ್ಸ್ ಹೇಳುತ್ತಾರೆ. ಇದು ತುಂಬಾ ಸಾಮಾನ್ಯವಾಗಿದೆ; ಆದರೆ ಕಣಗಳಿಗೆ ತೂಕವಿಲ್ಲದಿದ್ದರೆ ನಕ್ಷತ್ರಗಳು ರೂಪುಗೊಳ್ಳುತ್ತಿರಲಿಲ್ಲ. ಯಾವುದೇ ಗೆಲಕ್ಸಿಗಳು ಮತ್ತು ಪರಮಾಣುಗಳಿಲ್ಲದಿದ್ದರೆ, ವಿಶ್ವವು ಬೇರೆಯೇ ಆಗಿರುತ್ತದೆ.”
Physicist Peter Higgs has passed away at the age of 94. The Higgs particle, often called the God particle, is named after him.
Higgs was awarded the 2013 physics prize for the theory of how particles acquire mass.
Watch our interview with him: https://t.co/GnWRXnsyGx pic.twitter.com/kMHJV81ntR
— The Nobel Prize (@NobelPrize) April 10, 2024