ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ: ವಿಜ್ಞಾನಿಗಳ ಅಂದಾಜು!

ನವದೆಹಲಿ – ಕ್ಯಾನ್ಸರ್ ಇದು ಜಾಗತಿಕ ಮಟ್ಟದಲ್ಲಿ ಜನರ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಕ್ಯಾನ್ಸರ್ ರೋಗದಿಂದ ಸಾಯುತ್ತಾರೆ. ೨೦೫೦ ರ ವೇಳೆಗೆ ಕ್ಯಾನ್ಸರ್ ರೋಗಿಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆಯಾಗುವುದೆಂದು ತಜ್ಷರು ಅಂದಾಜಿಸಿದ್ದಾರೆ. ಕ್ಯಾನ್ಸರ್ ರೋಗದ ಅಂಕಿಅಂಶಗಳ ಪ್ರಕಾರ ೨೦೨೨ ರಲ್ಲಿ ವಿಶ್ವದಾದ್ಯಂತ ಅಂದಾಜು ಎರಡು ಕೋಟಿ ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ೯೭ ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ೨೦೫೦ ರ ತನಕ ಕ್ಯಾನ್ಸರ್ ರೋಗಿಗಳ ಸಂಖ್ಯೆ ಪ್ರತಿ ವರ್ಷ ೩ ಕೋಟಿ ೫೦ ಲಕ್ಷದ ತನಕ ತಲುಪಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಕಳೆದ ದಶಕಗಳ ಅಂಕಿಅಂಶಗಳ ಪ್ರಕಾರ ಭಾರತದಲ್ಲಿಯೂ ಕೂಡ ಈ ಗಂಭೀರ ಮತ್ತು ಜೀವನ್ಮರಣ ಮಾರಣಾಂತಿಕ ಕಾಯಿಲೆಯ ಪ್ರಕರಣಗಳು ವರ್ಷನಾನುವರ್ಷ ವೇಗವಾಗಿ ಹೆಚ್ಚುತ್ತಿವೆ. ಸಂಶೋಧಕರ ಪ್ರಕಾರ, ಈ ದಶಕದ ಅಂತ್ಯದ ವೇಳೆಗೆ ದೇಶದಲ್ಲಿ ಕ್ಯಾನ್ಸರ್ ರೋಗಿಗಳಲ್ಲಿ ಶೇಕಡಾ ೧೨ ರಷ್ಟು ಹೆಚ್ಚಳವನ್ನು ನಿರಿಕ್ಷಿಸಲಾಗಿದೆ.

೧. ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಹೊಸಹೊಸ ಶೋಧನೆಗಳಿಂದ ಅವಿಷ್ಕಾರಗಳಿಂದ ಕ್ಯಾನ್ಸರ್ ಈಗ ವಾಸಿಯಾಗದ ಕಾಯಿಲೆಯಾಗಿ ಉಳಿದಿಲ್ಲವಾದರೂ, ಈ ರೋಗಕ್ಕೆ ತಗಲುವ ವೈದ್ಯಕೀಯ ವೆಚ್ಚ ಸಾಮಾನ್ಯ ಜನರ ಕೈಗೆಟಕುವುದು ಕಠಿಣವಾಗಿದೆ.

೨. ಇತ್ತೀಚೆಗೆ ಘೋಷಿಸಲಾದ ಸಾಂಕ್ರಾಮಿಕವಲ್ಲದ ರೋಗಗಳ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಮಾಣವು ಖಂಡಿತವಾಗಿಯೂ ಆಘಾತಕಾರಿಯಾಗಿದೆ ಎಂದು ತೋರಿಸುತ್ತಿದೆ.

೩. ವರ್ಷ ೨೦೨೦ ರಲ್ಲಿ ಭಾರತದಲ್ಲಿ ೧೨ ಲಕ್ಷ ಕ್ಯಾನ್ಸರ್ ರೋಗದ ಪ್ರಕರಣಗಳು ವರದಿಯಾಗಿತ್ತು, ಅದರಲ್ಲಿ ೯ ಲಕ್ಷ ೩೦ ಸಾವಿರ ರೋಗಿಗಳು ಪ್ರಾಣ ಕಳೆದುಕೊಂಡಿದ್ದರು.

೪. ಭಾರತದಲ್ಲಿ ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಾಶಯ (ಅಂಡಾಶಯ)ದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿವೆ ಇನ್ನು ಪುರುಷರಲ್ಲಿ ಶ್ವಾಸಕೋಶ, ಬಾಯಿ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯ ಹೆಚ್ಚಿವೆ.

೫. ಹೆಚ್ಚಿನ ರೋಗಿಗಳಲ್ಲಿ ಕ್ಯಾನ್ಸರ್‌ ಅನ್ನು ಕೊನೆಯ ಹಂತದಲ್ಲಿ ಗುರುತಿಸಲಾಗುತ್ತದೆ.ಇದರಿಂದ ರೋಗಿಗೆ ಚಿಕಿತ್ಸೆ ನೀಡಲು ತುಂಬಾ ಕಷ್ಟವಾಗುತ್ತದೆ.