ಹೌರಾದಲ್ಲಿ ರಾಮನವಮಿ ಮೆರವಣಿಗೆ ಅನುಮತಿ ನಿರಾಕರಿಸಿದ ಬಂಗಾಳ ಪೊಲೀಸರು !

  • ಜನಸಂದಣಿ ಇಲ್ಲದ ಮಾರ್ಗದಲ್ಲಿ ಮಾತ್ರ ಯಾತ್ರೆಗೆ ಅವಕಾಶ !

  • ಪ್ರತಿ ವರ್ಷ 50 ಸಾವಿರ ಉಪಸ್ಥಿತಿಯಲ್ಲಿ ನಡೆಯುವ ಮೆರವಣಿಗೆಗೆ 200 ಜನರಲ್ಲಿ ಮುಗಿಸುವಂತೆ ಆದೇಶ !

  • ಕಳೆದ ವರ್ಷ ಮೆರವಣಿಗೆಯ ಮೇಲೆ ಮತಾಂಧ ಮುಸ್ಲಿಮರಿಂದ ದಾಳಿ !

ಹೌರಾ (ಬಂಗಾಳ) – ಪ್ರತಿ ವರ್ಷ ರಾಮ ನವಮಿಯ ಸಂದರ್ಭದಲ್ಲಿ, ಇಲ್ಲಿನ ಪ್ರಖರ ಹಿಂದುತ್ವನಿಷ್ಠ ಸಂಘಟನೆಯಾದ ‘ಅಂಜನಿ ಪುತ್ರ ಸೇನೆ’ಯಿಂದ ಭವ್ಯವಾದ ಮೆರವಣಿಗೆಯನ್ನು ಕೈಗೊಳ್ಳಲಾಗುತ್ತದೆ. ಈ ವರ್ಷ ಏಪ್ರಿಲ್ 17 ರಂದು ರಾಮನವಮಿ ಇದ್ದು, ಅಂದು ಮೆರವಣಿಗೆಯನ್ನು ಆಯೋಜಿಸಲಾಗಿದೆ. ಆದರೆ, ಬಂಗಾಳ ಪೊಲೀಸರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸರು, ಯಾತ್ರೆಯ ಮಾರ್ಗ ಬದಲಿಸಿದರೆ ಮಾತ್ರ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಯಾತ್ರೆಯಲ್ಲಿ 200 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುವುದು. ಇದರ ವಿರುದ್ಧ ‘ಅಂಜನಿ ಪುತ್ರ ಸೇನೆ’ ಕೊಲಕಾತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದೆ ಎಂದು ಸೇನೆಯ ಸಂಸ್ಥಾಪಕ ಕಾರ್ಯದರ್ಶಿ ಸುರೇಂದ್ರ ಕುಮಾರ್ ವರ್ಮಾ ಅವರು ‘ಸನಾತನ ಪ್ರಭಾತ್’ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಈ ನಿಟ್ಟಿನಲ್ಲಿ ಹೌರಾ ಪ್ರದೇಶದ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ. ಸಾಬರಿ ರಾಜ ಕುಮಾರ ಇವರನ್ನು ಸಂಪರ್ಕಿಸಿದಾಗ, ಚುನಾವಣಾ ಸಭೆ ಇದೆ ಎಂದು ಹೇಳಿ ಉತ್ತರ ನೀಡಲು ನಿರಾಕರಿಸಿದರು.

‘ಅಂಜನಿ ಪುತ್ರ ಸೇನೆ’ಯ ಸಂಸ್ಥಾಪಕ ಕಾರ್ಯದರ್ಶಿ ಸುರೇಂದ್ರ ಕುಮಾರ್ ವರ್ಮಾ

1. ಕಳೆದ ವರ್ಷದ ರಾಮನವಮಿ ಮೆರವಣಿಗೆಯಲ್ಲಿ ಮತಾಂಧ ಮುಸ್ಲಿಮರು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದರು. ಹಿಂದೂಗಳನ್ನು ರಕ್ಷಿಸುವಲ್ಲಿ ಬಂಗಾಳ ಪೊಲೀಸರು ವಿಫಲರಾಗಿದ್ದಾರೆ ಎಂದು ವರ್ಮಾ ನಮ್ಮ ವರದಿಗಾರರಿಗೆ ತಿಳಿಸಿದ್ದಾರೆ. ವಾಸ್ತವವಾಗಿ, ಅವರು ಹಿಂಸೆಯನ್ನು ತಡೆಯಬೇಕು. ಬದಲಾಗಿ ಪ್ರತಿಸಲದ ‘ಜಿಟಿ ರಸ್ತೆ’ ಮೆರವಣಿಗೆ ತೆಗೆಯುವ ಬದಲು ಜನವಸತಿ ಇಲ್ಲದ ‘ಫೋರ್ಸೋರ್ ರೋಡ್’ ಇಂದ ಮೆರವಣಿಗೆ ತೆಗೆದುಕೊಳ್ಳುವಂತೆ ಹೇಳುತ್ತಿದ್ದಾರೆ. ಅಲ್ಲದೆ ನಮಗೆ ನೀತಿ ಸಂಹಿತೆ ಕಾರಣ ನೀಡಲಾಗುತ್ತಿದೆ.

2. 2019ರಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಮೆರವಣಿಗೆ ನಡೆಸಲು ಅವಕಾಶ ನೀಡಲಾಗಿತ್ತು. ನಾವು ಕಳೆದ 10 ವರ್ಷಗಳಿಂದ ಈ ಯಾತ್ರೆಯನ್ನು ತೆಗೆಯುತ್ತಿದ್ದೇವೆ. ಮೊದಲ ವರ್ಷವೇ 2 ಸಾವಿರ ಹಿಂದೂಗಳು ಭಾಗವಹಿಸಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಈ ಸಂಖ್ಯೆ 50 ಸಾವಿರಕ್ಕೂ ಹೆಚ್ಚಿದೆ. ಆದರೆ, ನಮಗೆ ಕೇವಲ 200 ಹಿಂದೂಗಳೊಂದಿಗೆ ಮೆರವಣಿಗೆ ಮಾಡಲು ಆದೇಶ ನೀಡಲಾಗಿದೆ. ಇದರ ವಿರುದ್ಧ ಕೊಲಕಾತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ. ನಾವು ನ್ಯಾಯಾಲಯವನ್ನು ನಂಬುತ್ತೇವೆ ಎಂದು ಹೇಳಿದರು.

ಕಳೆದ ವರ್ಷ ರಾಮ ನವಮಿಯಂದು ಏನಾಗಿತ್ತು ?

30 ಮಾರ್ಚ್ 2023 ರ ಸಂಜೆ, ಹೌರಾದ ಶಿವಪುರ ಪ್ರದೇಶದಲ್ಲಿ ಶ್ರೀರಾಮ ನವಮಿಯ ಸಂಜೆ ನಡೆಸಿದ ಮೆರವಣಿಗೆಯ ಮೇಲೆ ಮತಾಂಧ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದರು ಮತ್ತು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹಚ್ಚಿದರು. ಮರುದಿನವೂ ಇಲ್ಲಿನ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಎರಡೂ ಸಂದರ್ಭಗಳಲ್ಲಿ, ಸ್ಥಳದಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳ ಉಪಸ್ಥಿತಿಯ ಹೊರತಾಗಿಯೂ, ಮತಾಂಧ ಮುಸ್ಲಿಮರು ಹಿಂಸಾಚಾರವನ್ನು ಮುಂದುವರೆಸಿದ್ದರು. ಈ ವೇಳೆ ಪೊಲೀಸರ ವಾಹನಗಳಿಗೂ ಬೆಂಕಿ ಹಚ್ಚಿದ್ದರು. ಬಂಗಾಳ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದೆ. ಈ ಪ್ರಕರಣದಲ್ಲಿ 26 ಫೆಬ್ರವರಿ 2024 ರಂದು 16 ಮತಾಂಧ ಮುಸ್ಲಿಮರನ್ನು ಎನ್.ಐ.ಎ. ಬಂಧಿಸಿದೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿರುವ ಬಂಗಾಳದಲ್ಲಿ ಇದಕ್ಕಿಂತ ಬೇರೆ ಏನಾಗುತ್ತದೆ ? ಶ್ರೀ ರಾಮಲಲ್ಲಾ ಅಯೋಧ್ಯೆಯಲ್ಲಿ ವಿರಾಜಮಾನ ಮಾಡಿದರೂ, ಅವರ ರಾಷ್ಟ್ರದ ಹಿಂದೂಗಳಿಗೆ ಅವರ ಸ್ವಂತ ಮೆರವಣಿಗೆಗಳನ್ನು ತೆಗೆದುಕೊಳ್ಳಲು ಅನುಮತಿ ನಿರಾಕರಿಸಲಾಗಿದೆ, ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ಇದರಿಂದ ರಾಮರಾಜ್ಯವನ್ನು ಅಂದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಬಿಟ್ಟರೆ ಬೇರೆ ಪರ್ಯಾಯವಿಲ್ಲ ಎಂದು ತಿಳಿಯಿರಿ!

ಈ ರೀತಿಯಾಗಿ ಕಾನೂನು ರುಪಿಸಲು ಹೌರಾ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿ?