ಸಾಧಕರೇ, ಮನೆಯಲ್ಲಿದ್ದು ಸಾಧನೆ ಮಾಡುವ ತಂದೆ-ತಾಯಿ ಅಥವಾ ಸಂಬಂಧಿಕರ ಆಧ್ಯಾತ್ಮಿಕ ಉನ್ನತಿ ಆಗುವುದು ಗಮನಕ್ಕೆ ಬಂದರೆ, ಅದರ ಬಗ್ಗೆ ಲೇಖನ ಸನಾತನ ಪ್ರಭಾತದಲ್ಲಿ ಪ್ರಸಿದ್ಧಿಗೊಳಿಸಲು ಕಳುಹಿಸಿ !

ರಾಷ್ಟ್ರ ರಕ್ಷಣೆ ಮತ್ತು ಧರ್ಮರಕ್ಷಣೆ ಈ ಕಾರ್ಯ ಮತ್ತು ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಸನಾತನದ ಕೆಲವು ಸಾಧಕರು ಪೂರ್ಣ ವೇಳೆ ಸಾಧನೆ ಮಾಡುತ್ತಾರೆ. ಅವರಲ್ಲಿನ ಕೆಲವು ಸಾಧಕರು ಅಧ್ಯಾತ್ಮ ಪ್ರಸಾರದ ಸೇವೆ ಮಾಡುತ್ತಾರೆ, ಹಾಗೂ ಕೆಲವರು ಸನಾತನದ ಆಶ್ರಮದಲ್ಲಿ ಇದ್ದು ಅಲ್ಲಿ ಸೇವೆ ಮಾಡುತ್ತಾರೆ. ಅವರ ತಂದೆ ತಾಯಿ ಅಥವಾ ಇತರ ಸಂಬಂಧಿಕರು ಮನೆಯಲ್ಲಿ ಇದ್ದು ವಿವಿಧ ಸಾಧನಾ ಮಾರ್ಗದ ಪ್ರಕಾರ ಸಾಧನೆ ಮಾಡುತ್ತಿರುತ್ತಾರೆ. ಅವರು ಅನೇಕ ವರ್ಷ ನಿರಂತರ ಸಾಧನೆ ಮಾಡಿರುತ್ತಾರೆ, ಹಾಗೂ ತಮ್ಮ ಮಕ್ಕಳಿಗೆ ಪೂರ್ಣ ವೇಳೆ ಸಾಧನೆ ಮಾಡುವುದಕ್ಕಾಗಿ ಅನುಮತಿ ನೀಡಿರುವುದರಿಂದ ಅವರಿಂದ ದೊಡ್ಡ ತ್ಯಾಗವು ಆಗಿರುತ್ತದೆ. ಆದ್ದರಿಂದ ಅವರ ಮುಖ ತೇಜಸ್ವಿ ಕಾಣುವುದು, ಅವರಲ್ಲಿನ ಸ್ವಭಾವದೋಷದ ಪ್ರಮಾಣ ಕಡಿಮೆ ಆಗಿರುವುದು, ಪ್ರೇಮ ಭಾವ, ಈಶ್ವರಿ ಅನುಸಂಧಾನ ಮತ್ತು ಆನಂದ ಇದರಲ್ಲಿ ವೃದ್ಧಿ ಆಗಿರುವುದು ಮುಂತಾದ ಆಧ್ಯಾತ್ಮಿಕ ಉನ್ನತಿ ಕಾಣುವ ಬದಲಾವಣೆ ಅವರ ಸಂದರ್ಭದಲ್ಲಿ ಗಮನಕ್ಕೆ ಬಂದಿರುತ್ತದೆ. ಅವರ ಸಾಧನೆ ವೃದ್ಧಿ ಆಗಿರುವುದರಿಂದ ಮನೆಯ ವಾತಾವರಣದಲ್ಲಿ ಒಳ್ಳೆಯ ಬದಲಾವಣೆ ಆಗುತ್ತದೆ.

ಸಾಧಕರು ತಮ್ಮ ಮನೆಯಲ್ಲಿ ಇದ್ದು ಸಾಧನೆ ಮಾಡಿ ಆಧ್ಯಾತ್ಮಿಕ ಉನ್ನತಿ ಮಾಡಿಕೊಂಡಿರುವ ತಂದೆ ತಾಯಿ ಅಥವಾ ಇತರ ಸಂಬಂಧಿಕರ ಸಂದರ್ಭದ ಅಂಶಗಳನ್ನು ಬರೆದುಕೊಟ್ಟರೆ ಇತರ ಸಾಧಕರು ಮತ್ತು ಅವರ ಸಂಬಂಧಿಕರಿಗೆ ಇದರಿಂದ ಏನಾದರೂ ಕಲಿಯಲು ಸಿಗುವುದು ಮತ್ತು ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಲು ಅವರಿಗೆ ದಿಶೆ ಕೂಡ ಸಿಗುವುದು.

ಸಾಧಕರು ಮೇಲಿನ ಅಂಶಗಳನ್ನು ಮುಂದಿನ ಮಾದರಿಯಲ್ಲಿ ಬರೆದು ಕಳಿಸಬೇಕು.

೧. ತಂದೆ ತಾಯಿ/ಸಂಬಂಧಿಕರು ಇವರು ಮಾಡಿರುವ ಸಾಧನೆ

೨. ಸಾಧನೆ ಮಾಡುವಾಗ ಅವರಿಗೆ ಬಂದಿರುವ ಅನುಭೂತಿ

೩. ಅವರು ಪೂರ್ಣ ಸಮಯ ಸಾಧನೆ ಮಾಡಲು ತಮ್ಮ ಮಕ್ಕಳಿಗೆ ಸಾಧನೆಯಲ್ಲಿ ಮಾಡಿರುವ ಸಹಾಯ

೪. ತಂದೆ ತಾಯಿ/ಸಂಬಂಧಿಕರಲ್ಲಿ ಅರಿವಿಗೆ ಬಂದಿರುವ ಬದಲಾವಣೆ, ಹಾಗೂ ಅವರ ಸಾಧನೆಯಿಂದ ಮನೆಯಲ್ಲಿನ ವಾತಾವರಣದಲ್ಲಿ ಆಗಿರುವ ಬದಲಾವಣೆಯ ಅಂಶಗಳು ವೈಶಿಷ್ಟ ಪೂರ್ಣವಾಗಿ ಮತ್ತು ಸಂಕ್ಷಿಪ್ತವಾಗಿ ಇರಲಿ. ಲೇಖನದ ಜೊತೆಗೆ ಅವರ ಛಾಯಾಚಿತ್ರಗಳನ್ನು ಕೂಡ ಕಳುಹಿಸಿ.

ವಿಳಾಸ : [email protected]

ಪೋಸ್ಟಲ್‌ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಸನಾತನ ಆಶ್ರಮ, 24/B, ರಾಮನಾಥಿ, ಬಾಂದೀವಾಡೆ , ಫೊಂಡಾ, ಗೋವಾ, ಪಿನ್‌ ಕೋಡ್‌ ೪೦೩೪೦೧

– ಗ್ರಂಥ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ, (೨೮.೨.೨೦೨೪)