BJP Candidate Attacked in WB : ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಮೇಲೆ ಸಮೂಹದಿಂದ ದಾಳಿ

ಬಿಜೆಪಿ ಮಹಿಳಾ ಅಭ್ಯರ್ಥಿ ಲಾಕೆಟ್ ಚಟರ್ಜಿ

ಕೋಲಕಾತ (ಬಂಗಾಳ) – ಬಂಗಾಳದ ಹೂಗಳಿ ಲೋಕಸಭಾ ಮತದಾನ ಕ್ಷೇತ್ರದ ಬಿಜೆಪಿ ಮಹಿಳಾ ಅಭ್ಯರ್ಥಿ ಲಾಕೆಟ್ ಚಟರ್ಜಿ ಅವರ ಮೇಲೆ ಎಪ್ರಿಲ್ 6 ರಂದು ಗುಂಪೊಂದು ದಾಳಿ ನಡೆಸಿದೆ. ಅವರು ಹೂಗಳಿಯ ಬಾನ್ಸುರಿಯಾ ಪ್ರದೇಶದ ದೇವಸ್ಥಾನವೊಂದರಲ್ಲಿ ನಡೆದ ಕಾಳಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ಆ ವೇಳೆ ಅವರ ವಾಹನದ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಲಾಕೆಟ್ ಚಟರ್ಜಿ ಅವರಿಗೆ ಗಾಯಗಳಾಗಿಲ್ಲ. ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರವಾಗಿದೆ. ಲಾಕೆಟ್ ಚಟರ್ಜಿ ಇವರ ಹೇಳಿಕೆಯ ಪ್ರಕಾರ, ಜನಸಮೂಹ ಎಲ್ಲಿಂದ ಬಂತು ಎಂದು ಸ್ಥಳೀಯ ಜನರಿಗೆ ಅಥವಾ ಪೊಲೀಸರಿಗೆ ತಿಳಿದಿಲ್ಲ. ಘಟನೆಯ ಸಮಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ನಾಯಕಿ ಉಪಸ್ಥಿತರಿದ್ದರು. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ವಾಹನಕ್ಕೆ ಎರಡು ಬಾರಿ ಡಿಕ್ಕಿ ಹೊಡೆದು ಮತ್ತು ವಾಹನದೊಳಗೆ ನುಗ್ಗಲು ಪ್ರಯತ್ನಿಸಿದ್ದಾನೆ. ಗುಂಪು ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಗುಂಪಿನಲ್ಲಿ ಭಾಗಿಯಾದವರನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಈ ಗುಂಪಿನೊಂದಿಗೆ ತೃಣಮೂಲ ಕಾಂಗ್ರೆಸ್ ನಾಯಕಿ ಶಿಲ್ಪಿ ಚಟರ್ಜಿ ಮತ್ತು ಅವರ ಪಕ್ಷದ ಕಾರ್ಪೊರೇಟರ್ ರಂಜಿತ್ ನಿಂತಿದ್ದರು. ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಲಾಕೆಟ್ ಚಟರ್ಜಿ ಇವರು ಶಿಲ್ಪಿ ಹಾಗೂ ಇತರ ಆರೋಪಿಗಳನ್ನು ಜೈಲಿಗೆ ಕಳುಹಿಸುವಂತೆ ಒತ್ತಾಯಿಸಿದ್ದಾರೆ.

(ಸೌಜನ್ಯ : Republic Bangla)

ಈ ದಾಳಿಯ ಹಿಂದಿನ ಉದ್ದೇಶ ಮತದಾರರನ್ನು ಗಾಬರಿಗೊಳಿಸುವುದಾಗಿದೆ. ಮತದಾರರು ಮತದಾನ ಮಾಡುವುದನ್ನು ತಡೆಯುವುದಕ್ಕಾಗಿ ಈ ದಾಳಿ ನಡೆಸಲಾಗಿದೆ. ವಿರೋಧಿಗಳ ಈ ಉದ್ದೇಶ ಸಫಲವಾಗುವುದಿಲ್ಲ. ಮಮತಾ ಬ್ಯಾನರ್ಜಿ ಅವರ ಬಂಗಾಳ ಪೊಲೀಸರು ಈ ವಿಷಯದಲ್ಲಿ ಮೌನವಾಗಿದ್ದಾರೆ, ಎಂದು ಬಿಜೆಪಿ ಆರೋಪಿಸಿದೆ.

ಸಂಪಾದಕೀಯ ನಿಲುವು

ಬಂಗಾಳ ಅಂದರೆ ಕಾನೂನು ಮತ್ತು ಸುವ್ಯವಸ್ಥೆಯ ಹದಗೆಟ್ಟಿರುವ ರಾಜ್ಯ !