‘ಉಷ್ಣತೆಯ ಕೇಂದ್ರ’ವಾದ ನಾಗ್ಪುರ ಮತ್ತು ಪುಣೆ !
ನವ ದೆಹಲಿ – ಒಡಿಶಾ, ಜಾರ್ಖಂಡ್, ಬಿಹಾರ, ಬಂಗಾಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಬಿಸಿಗಾಳಿ ಹೆಚ್ಚಾಗಿದೆ. ಏಪ್ರಿಲ್ ಮೊದಲ ವಾರದಲ್ಲಿಯೇ ಬಿಹಾರದ ಬಕ್ಸರ್ ನಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಮತ್ತೊಂದೆಡೆ, ಭಾರತೀಯ ಹವಾಮಾನ ಇಲಾಖೆಯು ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆ ನೀಡಿದೆ. ಇದಲ್ಲದೇ ಗುಡ್ಡಗಾಡು ರಾಜ್ಯಗಳಲ್ಲಿ ಹಿಮಪಾತ ಮುಂದುವರಿಯಲಿದೆ ಎನ್ನಲಾಗಿದೆ.
ಹವಾಮಾನ ಇಲಾಖೆ ನೀಡಿದ ಮಾಹಿತಿ:
1. ಮಧ್ಯಪ್ರದೇಶದ 33 ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದೆ.
2. ಬಿಹಾರದ 24 ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಲಿದೆ. ರಾಜ್ಯದ ಬಕ್ಸರ್ ನಲ್ಲಿ 42 ಡಿಗ್ರಿ ತಾಪಮಾನ ದಾಖಲಾಗಿದೆ. ಏಪ್ರಿಲ್ 10 ರಿಂದ ರಾಜಧಾನಿ ಪಾಟಲಿಪುತ್ರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿಯ ಅಲೆ ಉಂಟಾಗುವ ಸಾಧ್ಯತೆ ಇದೆ.
3. ಛತ್ತೀಸ್‌ಗಢದ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಗಡಿ ದಾಟಿದೆ.
4. ಜಾರ್ಖಂಡ್ ರಾಜ್ಯದಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ, ಕನಿಷ್ಠ ತಾಪಮಾನ 24 ಡಿಗ್ರಿ ಇರುವ ಸಾಧ್ಯತೆ ಇದೆ.
5. ಹರಿಯಾಣದಲ್ಲಿ ಏಪ್ರಿಲ್ 10ರವರೆಗೆ ಹವಾಮಾನದಲ್ಲಿ ಬದಲಾವಣೆ ಕಂಡುಬರಲಿದೆ.
6. ಕಳೆದ 10 ವರ್ಷಗಳಲ್ಲಿ ದೇಶದ 9 ಪ್ರಮುಖ ನಗರಗಳಲ್ಲಿ ಸಸ್ಯವರ್ಗ ಮತ್ತು ಜಲಸಂಪನ್ಮೂಲ ಇಳಿಕೆಯಾಗಿದೆ. ಜೈಪುರ, ಕರ್ಣಾವತಿ, ನಾಗ್ಪುರ, ಪುಣೆ ಮತ್ತು ಚೆನ್ನೈ ನಗರಗಳ ಶೇ 80 ರಷ್ಟು ಪ್ರದೇಶಗಳು ‘ಉಷ್ಣತೆಯ ಕೇಂದ್ರ’ಗಳಾಗಿವೆ.
7. ಏಪ್ರಿಲ್‌ನಿಂದ ಜೂನ್‌ವರೆಗೆ ಸರಾಸರಿ ಉಷ್ಣತೆಗಿಂತ ಎರಡು ಪಟ್ಟು ಹೆಚ್ಚು ಉಷ್ಣತೆ ಇರಲಿದೆ ಹವಾಮಾನ ಇಲಾಖೆ ಮುನ್ಸೂಚಿಸಿದೆ. ಈ ಮೇಲಿನ ನಗರಗಳಲ್ಲಿ ಕಳೆದ 6 ವರ್ಷಗಳಲ್ಲಿ ಬೇಸಿಗೆಯ ಮೇಲ್ಮೈ ತಾಪಮಾನ 42 ರಿಂದ 45 ಡಿಗ್ರಿಗಳಷ್ಟು ದಾಖಲಾಗಿವೆ.