|
ಪುತ್ತೂರು – ಬಜರಂಗದಳದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಭರತ್ ಕುಮಾರ್ ಕುಮ್ಡೇಲ್ ಅವರನ್ನು ಬೀದರ್ ಜಿಲ್ಲೆಯಿಂದ ಉಚ್ಚಾಟನೆ ಮಾಡಿ ಕಾಂಗ್ರೆಸ್ ಸರಕಾರ ನೋಟಿಸ್ ಜಾರಿ ಮಾಡಿತ್ತು ಈ ಕ್ರಮದ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತ್ತು.
ಭರತ್ ಕುಮ್ಮೇಲುರವರು ಈ ಆದೇಶವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿ, ಅರ್ಜಿ ಸಲ್ಲಿಸಿದ್ದರು. ಭರತ್ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಆಲಿಸಿದ ಕರ್ನಾಟಕ ಉಚ್ಚ ನ್ಯಾಯಾಲಯ ಹಿಂದೂಪರ ಹೋರಾಟಗಾರ ಭರತ್ ಕುಮ್ಮೆಲು ಇವರ ಗಡೀಪಾರು ಆದೇಶ ರದ್ದುಪಡಿಸಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಏಕ ಸದಸ್ಯ ಪೀಠ ಆದೇಶ ಮಾಡಿದೆ.
ಜನ ಕಾಂಗ್ರೆಸ್‌ಗೆ ಸ್ಥಾನ ತೋರಿಸುತ್ತಾರೆ !
ಈ ವೇಳೆ ವಿಎಚ್‌ಪಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಮಾತನಾಡಿ, ಬಾಂಬ್ ಸ್ಫೋಟ ನಡೆಸುವ ಭಯೋತ್ಪಾದಕರನ್ನು ‘ಸಹೋದರರು’ ಎಂದು ಕರೆಯುವ ಸಂಪ್ರದಾಯ ಹೊಂದಿರುವ ಕಾಂಗ್ರೆಸ್ ನಾಯಕರು ದೇಶಭಕ್ತ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗಡಿಪಾರು ಮಾಡುತ್ತಾರೆ. ಇದು ಕಾಂಗ್ರೆಸ್‌ನ ಕೀಳು ಮನಸ್ಥಿತಿಯಾಗಿದೆ. ಕಾಂಗ್ರೆಸ್ ಸರಕಾರದ ಇಂತಹ ಹಿಂದೂ ವಿರೋಧಿ ಕೃತ್ಯವನ್ನು ವಿಎಚ್‌ಪಿ ಮತ್ತು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಈಗ ಜನರು ಕಾಂಗ್ರೆಸ್ ತನ್ನ ಸ್ಥಾನವನ್ನು ತೋರಿಸುತ್ತಾರೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಗಡಿಪಾರು ಮಾಡುವ ಕೀಳು ಮನಸ್ಥಿತಿ ಖಂಡನೀಯವಾಗಿದೆ ಎಂದು ಹೇಳಿದರು.
ಚುನಾವಣೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ಮೇಲೆ ಒತ್ತಡ ಹೇರಲು ಯತ್ನ!
ವಿಎಚ್‌ಪಿ ಪ್ರಾಂತೀಯ ಗೋರಕ್ಷಣಾ ಮುಖ್ಯಸ್ಥ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಲೋಕಸಭೆ ಚುನಾವಣೆಯ ಕಾರಣ ನೀಡಿ ಕಾಂಗ್ರೆಸ್ ಸರಕಾರ ಹಿಂದೂ ಸಂಘಟನೆಗಳ ಮೇಲೆ ಒತ್ತಡ ಹೇರುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನತೆ ಈಗ ಸರಿಯಾದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಜರಂಗದಳ, ವಿಎಚ್‌ಪಿ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು ಹಿಂದೂಗಳ ಮೇಲಿನ ದಾಳಿಗಳ ವಿರುದ್ಧ ಹೆಗಲಿಗೆ ಹೆಗಲು ಕೊಟ್ಟು ವಿರೋಧಿಸಬೇಕು. ಹಿಂದೂ ಸಂಘಟನೆಯಾದರೆ ಮಾತ್ರ ಹಿಂದೂಗಳ ಮೇಲಿನ ಇಂತಹ ಅನ್ಯಾಯಗಳನ್ನು ತಡೆಯಲು ಸಾಧ್ಯ ಎಂಬುದನ್ನು ಹಿಂದೂಗಳು ಅರಿಯಬೇಕು ! |