Insult of Hindu Deities: ನಾಟಕದ ಲೇಖಕ ಮತ್ತು ನಿರ್ದೇಶಕರ ವಿರುದ್ಧ ದೂರು ದಾಖಲು

ಸೀತಾ ಮಾತೆ ಮತ್ತು ಶ್ರೀ ಹನುಮಾನ್ ಇವರನ್ನು ಅವಮಾನಿಸುವ ನಾಟಕ ಪ್ರದರ್ಶಿಸಿದ ಪ್ರಕರಣ

ಪುದ್ದುಚೆರಿ – ಪುದ್ದುಚೆರಿ ಕಾಲೇಜಿನಲ್ಲಿ ಕೆಲ ದಿನಗಳ ಹಿಂದೆ ಪ್ರದರ್ಶನಗೊಂಡಿದ್ದ ಹಿಂದೂ ವಿರೋಧಿ ‘ಸೋಮಯಾನಂ’ ನಾಟಕದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪ್ರದರ್ಶನ ಕಲಾ ವಿಭಾಗದ’ ಮುಖ್ಯಸ್ಥರನ್ನು ಹುದ್ದೆಯಿಂದ ವಜಾಗೊಳಿಸಿದೆ. ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ‘ಇಜಿನಿ 2014’ ರ ಸಂದರ್ಭದಲ್ಲಿ ಈ ನಾಟಕವನ್ನು ಪ್ರದರ್ಶಿಸಲಾಯಿತು. ಅದರಲ್ಲಿ ಸೀತಾಮಾತೆ ಮತ್ತು ಶ್ರೀ ಹನುಮಾನ್ ಇವರ ಅವಮಾನ ಮಾಡಲಾಗಿತ್ತು. ಇದರ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಸ್ತೆಗಿಳಿದು ತೀವ್ರ ಪ್ರತಿಭಟನೆ ನಡೆಸಿತು. ಈ ನಾಟಕದ ವಿರುದ್ಧ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಪೊಲೀಸರು ಈ ನಾಟಕದ ನಿರ್ದೇಶಕ ಮತ್ತು ಚಿತ್ರಕಥೆಗಾರ ಲೇಖಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕಾಲೇಜಿನ ಸಹಾಯಕ ಕುಲಸಚಿವ ಡಿ. ನಂದಗೋಪಾಲ್ ಮಾತನಾಡಿ, ‘ಕಾಲೇಜಿನಲ್ಲಿ ಶಾಂತಿಯುತ ಹಾಗೂ ಭ್ರಾತೃತ್ವದ ವಾತಾವರಣ ನಿರ್ಮಿಸಲು ನಾವು ಕಟಿ ಬದ್ಧರಾಗಿದ್ದೇವೆ. ಕಾಲೇಜಿನ ಪರಿಸರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಕೃತ್ಯಮುಚ್ಚಿಡುವುದನ್ನು ನಾವು ಸಹಿಸುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.