Temple Renovation: ಪಂಢರಪುರದ ಪರಿವಾರ ದೇವತೆಗಳಲ್ಲಿ ಒಂದಾಗಿರುವ ಶ್ರೀ ಗಣಪತಿಯ ಮೂರ್ತಿಯನ್ನು ವಿಧಿವತ್ತಾಗಿ ಪೂಜಿಸದೇ ತೆಗೆದಿರುವ ಬಗ್ಗೆ ಭಕ್ತರಲ್ಲಿ ಅನುಮಾನ !

ದೇವಸ್ಥಾನಗಳ ಸರಕಾರಿಕರಣದ ದುಷ್ಪರಿಣಾಮ !

ಪಂಢರಪುರ – ರಾಜ್ಯದ ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನಕ್ಕೆ ರಾಜ್ಯ ಸರಕಾರವು 73 ಕೋಟಿ ರೂಪಾಯಿಗಳ ಯೋಜನೆಗೆ ಒಪ್ಪಿಗೆಯನ್ನು ಸೂಚಿಸಿದೆ. ಈ ನಿಧಿಯಿಂದ ದೇವಸ್ಥಾನದ ಸಮೂಹ ಮತ್ತು ಪರಿವಾರ ದೇವತೆಗಳನ್ನು ರಕ್ಷಿಸಲಾಗುತ್ತದೆ. ಇದರಲ್ಲಿ ಮೊದಲ ಹಂತದ ಕಾಮಗಾರಿ ಪ್ರಾರಂಭವಾಗಿದೆ. ಇದರಡಿಯಲ್ಲಿ ಎಪ್ರಿಲ್ 4 ರಂದು ನಾಮದೇವ ಮೆಟ್ಟಿಲಿನ ಹತ್ತಿರ ಪರಿವಾರ ದೇವತೆಗಳಲ್ಲಿ ಒಂದಾಗಿರುವ ಶ್ರೀ ಗಣಪತಿಯ ಮೂರ್ತಿಯನ್ನು ಯಾವುದೇ ಪೂಜೆಯನ್ನು ಮಾಡದೇ ತೆಗೆದಿರುವ ಬಗ್ಗೆ ಭಕ್ತರು-ವಾರಕರಿಗಳಿಗೆ ದಟ್ಟವಾದ ಸಂದೇಹವಿದೆ.

ಶ್ರೀಗಣಪತಿಯ ಮೂರ್ತಿಯು ಗ್ರಾಮದೇವತೆಯೆಂದು ಪ್ರಸಿದ್ಧವಾಗಿದ್ದು, ಅದನ್ನು ಪ್ರತಿಷ್ಠಾಪನೆ ಮಾಡುವಾಗ ವಿಧಿವತ್ತಾಗಿ ಪೂಜೆಯನ್ನು ಮಾಡಲಾಗಿತ್ತು. ‘ಈ ಹಿಂದೆಯೂ ದೇವಸ್ಥಾನದಲ್ಲಿರುವ ಶ್ರೀ ಮಹಾಲಕ್ಷ್ಮಿದೇವಿ, ಶ್ರೀ ಹನುಮಾನ ದೇವರ ಮೂರ್ತಿಗಳು ಎಲ್ಲಿವೆ?’ ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ. ದೇವಸ್ಥಾನ ಸಮಿತಿಯ ಈ ಹಿಂದಿನ ಉಸ್ತುವಾರಿಯನ್ನು ನೋಡಿದರೆ ಭಕ್ತರಲ್ಲಿ ಆಕ್ರೋಶದ ಅಲೆಯಿದ್ದು, ದೇವಸ್ಥಾನವನ್ನು ರಕ್ಷಿಸುವಾಗ ಯಾವುದೇ ಪರಿಸ್ಥಿತಿಯಲ್ಲಿ ಧರ್ಮಪರಂಪರೆಯನ್ನು ಪಾಲಿಸಬೇಕು ಎನ್ನುವುದು ಅವರ ಹೇಳಿಕೆಯಾಗಿದೆ.

ದೇವಸ್ಥಾನ ಸಮಿತಿಯವರು ವಿಧಿವತ್ತಾಗಿ ಪೂಜೆ ನೆರವೇರಿಸಿದ್ದರೆ ಅದರ ಛಾಯಾಚಿತ್ರಗಳನ್ನು ಪ್ರಸಾರ ಮಾಡಬೇಕು !- ಹ.ಭ.ಪ ವೀರ ಮಹಾರಾಜರು, ರಾಷ್ಟ್ರೀಯ ವಕ್ತಾರ, ವಾರಕರಿ ಸಂಪ್ರದಾಯ ಪಾಯಿಕ ಸಂಘ

ಈ ಸಂದರ್ಭದಲ್ಲಿ ವಾರಕರಿ ಸಂಪ್ರದಾಯ ಪಾಯಿಕ ಸಂಘದ ರಾಷ್ಟ್ರೀಯ ವಕ್ತಾರರಾದ ಹ.ಭ.ಪ. ವೀರ ಮಹಾರಾಜರು ಮಾತನಾಡಿ, ‘ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧಿಕಾರಿಗಳೊಂದಿಗೆ ನಮ್ಮ ಚರ್ಚೆಯಾಗಿದ್ದು, ಅವರು ವಿಧಿವತ್ತಾಗಿ ಪೂಜೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಒಂದು ವೇಳೆ ದೇವಸ್ಥಾನ ಸಮಿತಿಯು ಪೂಜೆಯನ್ನು ಮಾಡಿದ್ದರೆ, ಅದರ ಛಾಯಾಚಿತ್ರವನ್ನು ಅವರು ಪ್ರಸಾರ ಮಾಡಬೇಕು. ದೇವಸ್ಥಾನ ಸಮಿತಿಯು ಒಂದು ವೇಳೆ ಪೂಜೆಯನ್ನು ಮಾಡಿರದಿದ್ದರೆ, ಹಿಂದೂಗಳ ಧಾರ್ಮಿಕ ಕಾರ್ಯಗಳಲ್ಲಿ ಅನುಚಿತ ಹಸ್ತಕ್ಷೇಪವಿದೆಯೆಂದೇ ಹೇಳಬೇಕಾಗುವುದು ಎಂದು ಹೇಳಿದರು.