ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಆರೋಪ
ಇಸ್ಲಾಮಾಬಾದ್ (ಪಾಕಿಸ್ತಾನ) – ದಕ್ಷಿಣ ಏಷ್ಯಾದ ಅತಿದೊಡ್ಡ ದೇಶವಾದ ಭಾರತವು ಪ್ರಸ್ತುತ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುತ್ತದೆ. ಇದು ಈ ಪ್ರದೇಶದ ಭದ್ರತೆಗೆ ಅಪಾಯವಾಗಿದೆ ಎಂದು ಪಾಕಿಸ್ತಾನ ವಿಶ್ವಸಂಸ್ಥೆಯ ಆಯೋಗದ ಸಭೆಯಲ್ಲಿ ಮಿಥ್ಯಾರೋಪವನ್ನು ಮಾಡಿದೆ.
1. ಪಾಕಿಸ್ತಾನದ ಪ್ರತಿನಿಧಿ ಮುನೀರ ಅಕ್ರಮ ಮಾತನಾಡಿ, ಭಾರತವು ‘ಕೋಲ್ಡ್ ಸ್ಟಾರ್ಟ್’ ನಂತಹ (ಯುದ್ಧ ನಡೆದರೆ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಲು ಸೈನ್ಯವನ್ನು ಸಿದ್ಧಗೊಳಿಸುವುದು) ಯುದ್ಧವನ್ನು ಎದುರಿಸುವ ನೀತಿಯನ್ನು ಸ್ವೀಕರಿಸಿದೆ. ಇದರಿಂದ ಪಾಕಿಸ್ತಾನದ ಮೇಲೆ ಅಕಸ್ಮಿಕವಾಗಿ ಆಕ್ರಮಣವಾಗುವ ಅಪಾಯ ಹೆಚ್ಚಾಗಿದೆ. ಇಂದು ಭಾರತ ಶಸ್ತ್ರಾಸ್ತ್ರ ಖರೀದಿಯಲ್ಲಿ ಮುಂಚೂಣಿಯಲ್ಲಿದೆ. ಅನೇಕ ದೇಶಗಳು ಅದಕ್ಕೆ ಕ್ಷಿಪಣಿ, ಪರಮಾಣು ಅಸ್ತ್ರ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಭಾರತ ಪಾಕಿಸ್ತಾನದ ವಿರುದ್ಧ ನಿರಂತರವಾಗಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ. ಅಂತರಾಷ್ಟ್ರೀಯ ಸಮುದಾಯವು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. 20 ವರ್ಷಗಳ ಹಿಂದೆ, ದಕ್ಷಿಣ ಏಷ್ಯಾವನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತಗೊಳಿಸುವ ಭರವಸೆಯನ್ನು ನೀಡಲಾಗಿತ್ತು. ಹೀಗಿರುವಾಗಲೂ ಒಂದು ದೇಶ (ಭಾರತ) ಪರಮಾಣು ಪರೀಕ್ಷೆ ನಡೆಸಿತು. ಇದರಿಂದಾಗಿ ನಮಗೂ ಪರಮಾಣು ಶಸ್ತ್ರಾಸ್ತ್ರ ನಿರ್ಮಾಣ ಮಾಡುವ ಆವಶ್ಯಕತೆಯುಂಟಾಯಿತು ಎಂದು ಹೇಳಿದರು.
2. ಜಮ್ಮು ಮತ್ತು ಕಾಶ್ಮೀರದ ವಿಷಯದ ಬಗ್ಗೆ ಮುನೀರ ಅಕ್ರಮ ಮಾತನಾಡಿ, ಹಲವು ದಶಕಗಳ ವಿವಾದಗಳಿಂದ ಎರಡೂ ದೇಶಗಳ ಸೇನೆಗಳು ಎದುರು ಬದುರು ನಿಂತಿವೆ. ಅವರ ಬಳಿ ಮಾರಣಾಂತಿಕ ಶಸ್ತ್ರಾಸ್ತ್ರಗಳಿವೆ. ಇದರಿಂದಾಗಿ ಈ ಪ್ರದೇಶದ ಭದ್ರತೆ ಹದಗೆಟ್ಟಿದೆ. ಕಾಶ್ಮೀರದಲ್ಲಿ ನಿರಂತರವಾಗಿ ಜನರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದು ಹೇಳಿದರು.
ಸಂಪಾದಕೀಯ ನಿಲುವುಇದಕ್ಕೆ ಕಳ್ಳನಿಗೊಂದು ಪಿಳ್ಳೆನೆವ ! ಎಂದು ಹೇಳುತ್ತಾರೆ, ಪಾಕಿಸ್ತಾನ ಸ್ವಾತಂತ್ರ್ಯದ ಬಳಿಕ ಇಲ್ಲಿಯವರೆಗೆ ಭಾರತದ ಮೇಲೆ 4 ಬಾರಿ ದಾಳಿ ನಡೆಸಿ, ಸೋಲಿನ ರುಚಿ ಕಂಡಿದೆ. ಆದರೂ ಈ ರೀತಿ ಗದ್ದಲ ಮಾಡುತ್ತದೆ. ಇದರಿಂದ ಅದು ಎಷ್ಟು ಕುತಂತ್ರ ಮಾಡುತ್ತದೆ ಎಂಬುದು ಗಮನಕ್ಕೆ ಬರುತ್ತದೆ ! |