ಶ್ರೀಲಂಕಾದಲ್ಲಿ ಇಸ್ಲಾಂ ಬಗ್ಗೆ ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ ಬೌದ್ಧ ಸನ್ಯಾಸಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ

ಬೌದ್ಧ ಸನ್ಯಾಸಿ ಗಾಲಗೋದಾತೆ ಜ್ಞಾನಸಾರಾ

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾದಲ್ಲಿ ಇಸ್ಲಾಂ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿದ ಪ್ರಕರಣದಲ್ಲಿ ಬೌದ್ಧ ಸನ್ಯಾಸಿ ಗಾಲಗೋದಾತೆ ಜ್ಞಾನಸಾರಾ (ವಯಸ್ಸು 49) ಅವರಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಸನ್ಯಾಸಿ 2016ರಲ್ಲಿ ಹೇಳಿಕೆ ನೀಡಿದ್ದರು. ಅದಕ್ಕಾಗಿ ಕ್ಷಮೆಯನ್ನೂ ಕೇಳಿದ್ದರು.

2012 ರಿಂದ ಮುಸ್ಲಿಮರ ವಿರುದ್ಧ ಗಾಲಗೋದಾತೆ ಜ್ಞಾನಸಾರಾ ಅಭಿಯಾನ ನಡೆಸುತ್ತಿದ್ದರು. ಮಾರ್ಚ್ 2016 ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಇಸ್ಲಾಂ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಜ್ಞಾನಸಾರಾ ಅವರನ್ನು 2018 ರಲ್ಲಿ ಬಂಧಿಸಲಾಯಿತು; ಆದರೆ ನಂತರ ಅವರಿಗೆ ರಾಷ್ಟ್ರಪತಿಗಳಿಂದ ಕ್ಷಮಾದಾನ ಸಿಕ್ಕಿತ್ತು.