ವಿಶಾಖಪಟ್ಟಣಂ (ಆಂಧ್ರಪ್ರದೇಶ) – ಇಲ್ಲಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಾರ್ಚ್ 29 ರಂದು ಕಾಲೇಜಿನ ಹಾಸ್ಟೆಲ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ತನ್ನ ತಂದೆಗೆ ಕಳುಹಿಸಿದ ಸಂದೇಶದಲ್ಲಿ ತಾನು ಲೈಂಗಿಕ ಕಿರುಕುಳದಿಂದ ತೊಂದರೆ ಅನುಭವಿಸುತ್ತಿರುವುದಾಗಿ ತಿಳಿಸಿದ್ದಾಳೆ. ಸಂದೇಶದಲ್ಲಿ, ಕ್ಷಮಿಸಿ ಅಪ್ಪಾ, ನಾನು ಲೈಂಗಿಕ ಕಿರುಕುಳದ ಬಗ್ಗೆ ಕಾಲೇಜು ಅಥವಾ ಪೊಲೀಸರಿಗೆ ವರದಿ ಮಾಡಲಾರೆ ಯಾಕೆಂದರೆ ನನ್ನನ್ನು ಶೋಷಣೆ ಮಾಡಿದವರ ಬಳಿ ನನ್ನ ಛಾಯಾಚಿತ್ರಗಳಿವೆ. ದೂರು ಬಂದರೆ ಆ ಛಾಯಾ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಬಹುದು. ಇದರಿಂದ ನಿಮಗೆ ತೊಂದರೆ ಆಗಬಹುದು.
1. ಈ ಘಟನೆ ಕುರಿತು ಕಾಲೇಜಿನ ಪ್ರಾಂಶುಪಾಲರು ಮಾತನಾಡುತ್ತಾ ಹಾಸ್ಟೆಲ್‌ನಲ್ಲಿ ಲೈಂಗಿಕ ಕಿರುಕುಳದ ಸಮಸ್ಯೆ ಉದ್ಭವಿಸುವುದಿಲ್ಲ ಹುಡುಗಿಯರ ಹಾಸ್ಟೆಲ್‌ಗೆ ಹುಡುಗರಿಗೆ ಪ್ರವೇಶವಿಲ್ಲ. ನಾವು ಎಲ್ಲಾ ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತೇವೆ. ಹಾಸ್ಟೆಲ್‌ಗೆ ಮಹಿಳಾ ವಾರ್ಡನ್ ಕೂಡ ಇದ್ದಾರೆ, ಅವರು ಅದನ್ನು ನೋಡಿಕೊಳ್ಳುತ್ತಾರೆ.
2. ಮೃತ ವಿದ್ಯಾರ್ಥಿನಿಯ ತಂದೆಯ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ವಿಚಾರಣೆ ನಡೆಸಲಾಗುತ್ತಿದೆ.
ಸಂಪಾದಕೀಯ ನಿಲುವುಕಾಲೇಜು ಹಾಸ್ಟೆಲ್‌ನಲ್ಲಿ ವಾಸವಾಗಿರುವ ವಿದ್ಯಾರ್ಥಿನಿಯರ ಬಗ್ಗೆ ಕಾಲೇಜು ಆಡಳಿತ ಮಂಡಳಿ ಗಮನಹರಿಸಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ! |