|
ಬುಲಢಾಣಾ – ಛತ್ರಪತಿ ಶಿವಾಜಿ ಮಹಾರಾಜರ ತಿಥಿಯ ಪ್ರಕಾರ ಮಾರ್ಜ್ ೨೮ ರಂದು ಜಯಂತಿ ಇತ್ತು. ಅದರ ಪ್ರಯುಕ್ತ ಶಿವಾಜಿ ಮಹಾರಾಜ ಜಯಂತಿ ಉತ್ಸವ ಸಮಿತಿಯ ವತಿಯಿಂದ ನಾಂದುರಾದಲ್ಲಿ ಬೆಳಿಗ್ಗೆ ಬೈಕ್ ರ್ಯಾಲಿ ಹಾಗೂ ಸಂಜೆ ಮೆರವಣಿಗೆಯ ಆಯೋಜನೆ ಮಾಡಿದ್ದರು. ಶಾಸಕ ರಾಜೇಶ ಎಕಡೆ ಇವರ ನೇತೃತ್ವದಲ್ಲಿ ಬೆಳಗ್ಗೆ ಬೈಕ್ ರ್ಯಾಲಿ ನಡೆಯಿತು. ಅದರ ನಂತರ ಸಂಜೆ ಅಂಬಾದೇವಿ ಗಡ ದೇವಗಡ ಇಲ್ಲಿಂದ ಮೆರವಣಿಗೆಗೆ ಆರಂಭವಾಯಿತು. ಮೆರವಣಿಗೆ ಮೋತಿಪುರಾ ಪ್ರದೇಶದಿಂದ ಹೋಗುತ್ತಿರುವಾಗ ಅನಿರೀಕ್ಷಿತವಾಗಿ ಕೆಲವು ದುಷ್ಕರ್ಮಿಗಳು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಕಲ್ಲುತೂರಾಟದಲ್ಲಿ ಮೋದಿಪುರ ಇಲ್ಲಿಯ ರಾಜ ಸಂತೋಷ ಸೋನೋನೆ ಈ ಯುವಕ ಗಾಯಗೊಂಡನು. ಆ ಸಮಯದಲ್ಲಿ ಕೆಲವು ಪೋಲಿಸ ಸಿಬ್ಬಂದಿಗಳಿಗೂ ಕೂಡ ಕಲ್ಲಿನ ಏಟು ಬಿದ್ದಿತು. (ಪೊಲೀಸರೇ ಸುರಕ್ಷಿತವಾಗಿ ಇಲ್ಲದಿದ್ದರೆ, ಜನರ ರಕ್ಷಣೆ ಹೇಗೆ ಮಾಡುವರು ? ಹಿಂದೂಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿ ನಡೆಸುವ ಧೈರ್ಯ ಕಳೆದ ಅನೇಕ ವರ್ಷಗಳಿಂದ ತೋರಿಸುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಯಿಸುವುದಕ್ಕಾಗಿ ಈಗ ಹಿಂದೂಗಳು ಸಮರೋಪಾದಿಯಲ್ಲಿ ಕಾನೂನಿನ ಪ್ರಕಾರ ಪ್ರಯತ್ನ ಮಾಡಬೇಕು. ಈ ಮುಂದೆ ಯಾವುದೇ ಸಮಾಜಘಾತಕರು ಈ ರೀತಿಯ ಧೈರ್ಯ ತೋರಿಸಬಾರದು, ಅಂತಹ ಪರಿಸ್ಥಿತಿ ನಿರ್ಮಾಣವಾಗಬೇಕು ? – ಸಂಪಾದಕರು)
ಪೊಲೀಸ ಠಾಣೆಯ ಮುಖ್ಯಸ್ಥ ವಿಲಾಸ್ ಪಾಟೀಲ್ ಇವರು ಆಯೋಜಕರಿಗೆ ತಿಳಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ ನಂತರ ಮೆರವಣಿಗೆ ಪುನಃ ನಡೆಯಿತು; ಆದರೆ ವಾರದ ಸಂತೆಯಿಂದ ಬರುವ ರಸ್ತೆಯಲ್ಲಿ ಮತ್ತೆ ದೊಡ್ಡ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಯಿತು. ಅದರ ನಂತರ ಇನ್ನೊಂದು ಗುಂಪು ಕೂಡ ಕಲ್ಲು ತೂರಾಟ ನಡೆಸಿರುವುದರಿಂದ ಎಲ್ಲಾ ಕಡೆ ಗದ್ದಲ ಶುರುವಾಯಿತು. ಘಟನೆಯ ನಂತರ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಲಾಸ್ ಪಾಟೀಲ್ ಇವರು ತಕ್ಷಣ ಘಟನೆ ತಲುಪಿ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದರು. ಈ ಪ್ರಕರಣದಲ್ಲಿ ನಾಂದುರಾ ಪೋಲಿಸ ಠಾಣೆಯಲ್ಲಿ ೧೦೦ ಜನರ ವಿರುದ್ಧ ದೂರು ದಾಖಲಿಸಿ ಇಲ್ಲಿಯವರೆಗೆ ಪೊಲೀಸರು ೧೬ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಇತರ ಆರೋಪಿಗಳ ಶೋಧ ಮುಂದುವರೆಸಿದ್ದಾರೆ.
ಸಂಪಾದಕೀಯ ನಿಲುವುಮಹಾರಾಷ್ಟ್ರದಲ್ಲಿಯೇ ಛತ್ರಪತಿಯ ಜಯಂತಿಯ ಪ್ರಯುಕ್ತ ನಡೆದಿರುವ ಮೆರವಣಿಗೆಯ ಮೇಲೆ ಕಲ್ಲುತೂರಾಟ ನಡೆಯುವುದು ಪೊಲೀಸರಿಗೆ ನಾಚಿಕೆಗೆಡು ! |