ಹಿಂದೂ ಮಹಿಳೆಯರಿಂದ ಶ್ರೀ ಕೃಷ್ಣಜನ್ಮಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿಯಲ್ಲಿನ ಕೃಷ್ಣ ಬಾವಿಯ ಪೂಜೆ !

ಮಥುರಾ (ಉತ್ತರ ಪ್ರದೇಶ) – ಹಿಂದೂ ಮಹಿಳೆಯರು ಇಲ್ಲಿಯ ಶ್ರೀ ಕೃಷ್ಣಜನ್ಮಭೂಮಿಯಲ್ಲಿನ ಶಾಹಿ ಈದ್ಗಾ ಮಸೀದಿಯಲ್ಲಿರುವ ಕೃಷ್ಣಭಾವಿಯ ಪೂಜೆ ಮಾಡಿದರು. ಶಿತಲಾ ಅಷ್ಟಮಿಯ ದಿನದಂದು ಮಹಿಳೆಯರು ಸಾಂಪ್ರದಾಯಿಕವಾಗಿ ಇಲ್ಲಿ ಪೂಜೆ ಮಾಡುತ್ತಾರೆ. ಈ ಕೃಷ್ಣ ಬಾವಿಯ ಪೂಜೆ ಮಾಡುವ ಅಧಿಕಾರಕ್ಕಾಗಿ ಈ ಹಿಂದೆ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಶ್ರೀ ಕೃಷ್ಣಜನ್ಮ ಭೂಮಿ ಮುಕ್ತಿ ನ್ಯಾಸದ ಅಧ್ಯಕ್ಷ ಮಹೇಂದ್ರ ಪ್ರತಾಪ ಸಿಂಹ ಇವರು ಅರ್ಜಿ ದಾಖಲಿಸಿದ್ದರು. ನ್ಯಾಯಾಲಯವು ಪೂಜೆಗೆ ಅನುಮತಿ ನೀಡಿತ್ತು.

(ಸೌಜನ್ಯ – Zee Uttar Pradesh UttaraKhand)

೧. ಸಿಕ್ಕಿರುವ ಮಾಹಿತಿಯ ಪ್ರಕಾರ ೩೪ ಹಿಂದೂ ಮಹಿಳೆಯರು ಏಪ್ರಿಲ್ ೧ ಬೆಳಗಿನ ಜಾವ ೫ ಗಂಟೆಗೆ ಕೃಷ್ಣ ಬಾವಿಯ ಹತ್ತಿರ ತಲುಪಿ ಶೀತಲ ಮಾತೆಯ ಪೂಜೆ ಮಾಡಿದರು. ಅವರಲ್ಲದೆ ಇತರ ಯಾರಿಗೂ ಕೂಡ ಅನುಮತಿ ನೀಡಲಾಗಿರಲಿಲ್ಲ. ಆದ್ದರಿಂದ ಪೂಜೆ ಮಾಡುವುದಕ್ಕಾಗಿ ಬಂದಿರುವ ಇತರ ೭ ಜನರನ್ನು ಪೊಲೀಸರು ವಶಕ್ಕೆ ಪಡೆದರು. ಈ ಜನರಲ್ಲಿ ಶ್ರೀ ಕೃಷ್ಣಜನ್ಮಭೂಮಿ ಸಂಘರ್ಷ ಟ್ರಸ್ಟಿನ ಅಧ್ಯಕ್ಷ ದಿನೇಶ್ ಶರ್ಮ ಇವರ ಸಮಾವೇಶ ಕೂಡ ಇದೆ. ಶೀತಲಾ ಅಷ್ಟಮಿಯ ದಿನದಂದು ಮಸೀದಿಗೆ ಹೋಗಿ ಪೂಜೆ ಮಾಡುವರು ಎಂದು ಈ ಜನರು ಮೊದಲೇ ಘೋಷಿಸಿದ್ದರು. ಈ ಪರಿಸರದಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿದೆ.

೨. ಇಲ್ಲಿಯ ಮಹಿಳೆಯರು ಹೋಳಿಯ ನಂತರ ಈ ಕೃಷ್ಣಬಾವಿಯ ಸ್ಥಳಕ್ಕೆ ಹೋಗಿ ಶೀತಲಾ ಮಾತೆಯ ಪೂಜೆ ಮಾಡುತ್ತಾರೆ. ಈ ಪೂಜೆ ಬಹಳ ದಿನಗಳಿಂದ ನಡೆಯುತ್ತಿದೆ; ಆದರೆ ಯಾವಾಗ ಹಿಂದೂಗಳು ಶ್ರೀ ಕೃಷ್ಣಜನ್ಮಭೂಮಿಯ ಸಮೀಕ್ಷೆ ನಡೆಸಲು ಆಗ್ರಹಿಸಿದರು, ಅಂದಿನಿಂದ ಮುಸಲ್ಮಾನರು ಇಲ್ಲಿ ಪೂಜೆ ನಡೆಯಬಾರದು, ಅದಕ್ಕಾಗಿ ಅಡೆತಡೆ ತರಲು ಆರಂಭಿಸಿದರು. ಕಳೆದ ವರ್ಷ ಕೂಡ ಹಾಗೆಯೇ ನಡೆದಿತ್ತು. ಈ ಬಾರಿ ಹಿಂದುಗಳಿಗಾಗಿ ಧಾರ್ಮಿಕ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದು ಭಗವಾನ್ ಶ್ರೀ ಕೃಷ್ಣನ ಮರಿ ಮೊಮ್ಮಗ ವಜ್ರನಾಭ ಎಂಬವರು ಕಟ್ಟಿದ್ದರು.