ಸಂದೇಶಖಾಲಿಯಂತಹ ಪ್ರಕರಣ ಘಟಿಸುವುದು ಇದು ರಾಜ್ಯದ ವಿಫಲತೆ ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಸಂದೇಶಖಾಲಿ (ಬಂಗಾಲ)ಯಲ್ಲಿ ಆಡಳಿತಾರೂಢ ಪಕ್ಷದಿಂದ ಹಿಂದೂ ಮಹಿಳೆಯರ ಮೇಲೆ ನಡೆದ ಲೈಂಗಿಕ ಅತ್ಯಾಚಾರದ ಪ್ರಕರಣ

ಡೆಹರಾಡೂನ್ (ಉತ್ತರಾಖಂಡ) – ಜ್ಯೋತಿಷ್ಯಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಬಂಗಾಲದ ಸಂದೇಶಖಾಲಿ ಇಲ್ಲಿ ಮಹಿಳೆಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರ ಕುರಿತು ಹೇಳಿಕೆ ನೀಡಿದರು. ಶಂಕರಾಚಾರ್ಯರಿಗೆ ಈ ಕುರಿತು ಪ್ರಶ್ನೆ ಕೇಳಿದಾಗ ಅವರು, ಇಂತಹ ಘಟನೆ ಘಟಿಸುವುದು, ಇದು ರಾಜ್ಯದ ವಿಫಲತೆ ಆಗಿದೆ. ಮೂಲತಹ ರಾಜ್ಯದ ಸ್ಥಾಪನೆ ಏಕೆ ಆಯಿತು, ದುರ್ಬಲರ ಮೇಲೆ ದೌರ್ಜನ್ಯ ನಡೆಯಬಾರದೆಂದು, ಆದರೆ ಮಾತಾ ಭಗಿನಿಯರು ನೀವು (ರಾಜಕಾರಣಿಗಳು) ಅವರನ್ನು ರಕ್ಷಣೆ ಮಾಡಬೇಕು ಎಂದು ಅಪೇಕ್ಷಿಸುತ್ತಾರೆ; ಆದರೆ ಅವರ ಮೇಲೆ ಅತ್ಯಾಚಾರ ಮತ್ತು ಅನ್ಯಾಯ ಆಗುತ್ತಿದ್ದರೆ, ಅದು ರಾಜ್ಯದ ವಿಫಲತೆ ಆಗಿದ್ದು ಈ ಕೃತ್ಯ ಅಸ್ವಿಕಾರಾರ್ಹವಾಗಿದೆ. ವಿಶೇಷವಾಗಿ ಯಾವಾಗ ಒಬ್ಬ ತಾಯಿ ಅಥವಾ ಸಹೋದರಿ (ಮಮತಾ ಬ್ಯಾನರ್ಜಿ) ರಾಜ್ಯವನ್ನು ಆಳುತ್ತಿದ್ದರೆ ಆಗ ಅಲ್ಲಿಯ ಈ ಅಂಶಗಳು ಗಂಭೀರವಾಗುತ್ತವೆ.

ಸಂದೇಶಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮುಸಲ್ಮಾನ ನಾಯಕ ಮತ್ತು ಅವನ ಕಾರ್ಯಕರ್ತರು ಇಲ್ಲಿಯ ಹಿಂದೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಘಟಿಸಿದ್ದವು. ಈ ಪ್ರಕರಣದ ಶೋಧ ನಡೆಸಿರುವ ಕೇಂದ್ರ ತನಿಖಾ ದಳವು ಶೇಖ ಶಾಹಾಜಹಾನನ್ನು ಬಂಧಿಸಿದ್ದಾರೆ.