![](https://static.sanatanprabhat.org/wp-content/uploads/sites/5/2024/04/01061825/Gurudev_Rangoli_clr.jpg)
೧. ಸಾಧಕಿಯ ಹುಟ್ಟುಹಬ್ಬದ ನಿಮಿತ್ತ ಅವರ ಸೊಸೆಯು ಶ್ರೀಕೃಷ್ಣನ ರೂಪದ ಪರಾತ್ಪರ ಗುರು ಡಾ. ಆಠವಲೆಯವರ ರಂಗೋಲಿ ಬಿಡಿಸಿದಳು ಹಾಗೂ ಆ ರಂಗೋಲಿಯನ್ನು ನೋಡಿ ಸಾಧಕಿಯ ಭಾವಜಾಗೃತಿಯಾಗಿ ಅವರಿಂದ ಕೃತಜ್ಞತೆ ವ್ಯಕ್ತವಾಗುವುದು : ‘೯.೬.೨೦೨೧ ರಂದು ನನ್ನ ಹುಟ್ಟುಹಬ್ಬದ ನಿಮಿತ್ತ ನನ್ನ ಸೊಸೆ (ಸೌ. ಪ್ರಿಯಾ ಆಧಾನೆ, ವಯಸ್ಸು ೨೫) ಪರಾತ್ಪರ ಗುರು ಡಾ. ಆಠವಲೆಯವರ ಶ್ರೀಕೃಷ್ಣನ ರೂಪದ ರಂಗೋಲಿ ಬಿಡಿಸಿದಳು. ಮೊದಲು ನನ್ನ ಮಗ ನನ್ನ ಕಣ್ಣುಗಳನ್ನು ಮುಚ್ಚಿದನು. ಆಗ ನನ್ನಲ್ಲಿ ಗುರುಸ್ಮರಣೆ ಆರಂಭವಾಯಿತು. ನನಗೆ ಕಣ್ಮುಂದೆ ಗುರುದೇವರು ಕಾಣಿಸುತ್ತಿದ್ದರು. ನಾನು ಕಣ್ಣುತೆರೆದಾಗ ಸುಂದರವಾದ ರಂಗೋಲಿಯಲ್ಲಿ ಮಂದಹಾಸ ಬೀರುತ್ತಿರುವ ಗುರುದೇವರನ್ನು ನೋಡಿ ನನಗೆ ತುಂಬಾ ಆನಂದವಾಯಿತು ಹಾಗೂ ನನ್ನ ಭಾವಜಾಗೃತಿಯಾಯಿತು. ಹುಟ್ಟುಹಬ್ಬದ ದಿನ ನನಗೆ ಯಾವುದೇ ಉಡುಗೊರೆ ಬೇಡವಾಗಿತ್ತು, ಏಕೆಂದರೆ ‘ಆಪತ್ಕಾಲ ಇರುವುದರಿಂದ ಸುಮ್ಮನೆ ಖರ್ಚು ಬೇಡ’, ಎಂದು ನನಗೆ ಅನಿಸುತ್ತಿತ್ತು. ಸೊಸೆಯು ಈ ರಂಗೋಲಿ ಬಿಡಿಸಿದ ನಂತರ ನನಗೆ ಏನು ಬೇಕಿತ್ತೋ, ಅದು ಸಿಕ್ಕಿತು, ಅದಕ್ಕಾಗಿ ನನ್ನಿಂದ ಕೃಜ್ಞತೆಯು ವ್ಯಕ್ತವಾಯಿತು ಹಾಗೂ ನಾನು ಸೊಸೆಗೆ ಧನ್ಯವಾದವೆಂದು ಹೇಳಿದೆನು.
![](https://static.sanatanprabhat.org/wp-content/uploads/sites/5/2024/04/01061818/Sunita_Aadhane_H_C.jpg)
![](https://static.sanatanprabhat.org/wp-content/uploads/sites/5/2024/04/01061821/Priya_Adhane.jpg)
೨. ಸೊಸೆ ಶ್ರೀಕೃಷ್ಣನ ರೂಪದ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರವನ್ನು ಜಾಲತಾಣದಿಂದ ಪಡೆದುಕೊಂಡು ಅವಳು ತುಂಬಾ ಪ್ರಾರ್ಥನೆ ಮಾಡಿದ ನಂತರ ಅವಳಿಂದ ರಂಗೋಲಿ ಪೂರ್ಣವಾಯಿತು : ನಾನು ಸೊಸೆಗೆ ಕೇಳಿದೆ, ”ನನ್ನ ಹುಟ್ಟುಹಬ್ಬದಂದು ಈ ರಂಗೋಲಿ ಬಿಡಿಸಬೇಕೆಂದು ಯಾರಿಗೆ ಹೊಳೆಯಿತು ?’,” ಆಗ ಅವಳು ಹೇಳಿದಳು, ”ನಾನೇ ನಿರ್ಧರಿಸಿದೆ. ‘ನಿಮಗೆ ಗುರುದೇವರ ರಂಗೋಲಿ ನೋಡಿ ಆನಂದವಾಗಬಹುದು’, ಎಂದು ನನಗೆ ಅನಿಸಿತು.” ಸೊಸೆಯು ಜಾಲತಾಣದಿಂದ ಛಾಯಾಚಿತ್ರವನ್ನು ಹುಡುಕಿ ತೆಗೆದಳು. ಅವಳು ಗುರು ದೇವರ ಬಳಿ ಪ್ರಾರ್ಥನೆ ಮಾಡಿದಳು, ‘ಗುರುದೇವಾ, ಈ ರಂಗೋಲಿ ಬಿಡಿಸಲು ಸಹಾಯ ಮಾಡಿ. ಈ ರಂಗೋಲಿಯನ್ನು ನೋಡಿ ಅತ್ತೆಗೆ ಆನಂದ ವಾಗಬಹುದು.’ ಅವಳಿಗೆ ರಂಗೋಲಿ ಹಾಕುವಾಗ ಅದರಲ್ಲಿ ಗುರುದೇವರ ಕಣ್ಣುಗಳು ಮತ್ತು ಅವರ ಮುಖದ ಭಾವವನ್ನು ಚಿತ್ರಿಸಲು ಗೊತ್ತಾಗುತ್ತಿರಲಿಲ್ಲ. ಅವಳು ತುಂಬಾ ಪ್ರಾರ್ಥನೆ ಮಾಡಿದ ನಂತರ ಅವಳಿಗೆ ಅದು ಸಾಧ್ಯವಾಯಿತು.
– ಶ್ರೀಮತಿ ಸುನೀತಾ ಆಧಾನೆ, ಸಂಭಾಜಿನಗರ, ಮಹಾರಾಷ್ಟ್ರ (೯.೬.೨೦೨೧)