ಇತರ ಎಲೆಗಳಗಿಂತಲೂ ಮಾವಿನ ಎಲೆಯಲ್ಲಿ ಹೆಚ್ಚು ಸಾತ್ತ್ವಿಕತೆ ಇರುವುದ ರಿಂದ ಅವುಗಳಲ್ಲಿ ಈಶ್ವರಿತತ್ವ ಸೆಳೆಯುವ ಕ್ಷಮತೆ ಹೆಚ್ಚಾಗಿ ಇರುತ್ತದೆ. ಬ್ರಹ್ಮಧ್ವಜದ ತುದಿಗೆ ಮಾವಿನ ಎಲೆಗಳನ್ನು ಕಟ್ಟುತ್ತಾರೆ. ಈಶ್ವರನಿಂದ ಪ್ರಕ್ಷೇಪಿತವಾಗುವ ಲಹರಿ ಗಳನ್ನು ಸೆಳೆದು ಕೊಳ್ಳುವ ಕ್ಷಮತೆ ಮಾವಿನ ಚಿಗುರು ಎಲೆಯಲ್ಲಿ ಶೇಕಡ ೩೦ ಹಾಗೂ ಮಾವಿನ ಬಲತಿರುವ ಎಲೆಯಲ್ಲಿ ಶೇಕಡಾ ೧೦ ರಷ್ಟು ಇರುತ್ತದೆ. ಚಿಗುರು ಎಲೆಯಲ್ಲಿ ತೇಜತತ್ವ ಹೆಚ್ಚು ಇರುತ್ತದೆ, ಆದ್ದರಿಂದ ಪೂಜೆಯಲ್ಲಿ ಮಾವಿನ ಚಿಗುರು ಎಲೆಗಳನ್ನು ಬಳಸುತ್ತಾರೆ.