ಬ್ರಹ್ಮಧ್ವಜಕ್ಕೆ ಬೇವಿನ ಎಲೆಯ ಮಾಲೆ ಹಾಕುತ್ತಾರೆ. ಬೇವಿನ ಎಲೆ ಇದು ಸತ್ವ ಲಹರಿಗಳ ಪ್ರತೀಕವಾಗಿದೆ. ಈಶ್ವರಿ ತತ್ವ ಸೆಳೆದುಕೊಳ್ಳುವ ಕ್ಷಮತೆ ಮಾವಿನ ಎಲೆಯ ನಂತರ ಬೇವಿನ ಎಲೆಯಲ್ಲಿ ಹೆಚ್ಚಾಗಿ ಇರುತ್ತದೆ. ಈ ದಿನದಂದು ಬೇವಿನ ಚಿಗುರು ಎಲೆಯ ಮೂಲಕ ವಾತಾವರಣದಲ್ಲಿ ಪಸರಿಸಿರುವ ಪ್ರಜಾಪತಿ ಲಹರಿ ಸೆಳೆದುಕೊಳ್ಳುತ್ತದೆ. ಜೀವಗಳಿಗೆ ಬೇವಿನ ಎಲೆಯ ಮಾಧ್ಯಮದಿಂದ ಸೂಕ್ಷ್ಮ ರೂಪದಲ್ಲಿ ಪ್ರಜಾಪತಿ ಲಹರಿಗಳು ಸಿಗುತ್ತವೆ.
ಮಿತ್ರರೇ, ಯುಗಾದಿಯಂದು ಇವನ್ನು ಅವಶ್ಯ ಮಾಡಿ !೧. ಯುಗಾದಿಯಂದು ವರ್ಷಾರಂಭ ಮಾಡಲು ಎಲ್ಲರನ್ನು ಪ್ರವೃತ್ತಗೊಳಿಸಿ ೨. ಶಿಕ್ಷಕರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ಯುಗಾದಿಯ ಮಹತ್ವದ ಬಗ್ಗೆ ವ್ಯಾಖ್ಯಾನಗಳನ್ನು ಆಯೋಜಿಸಲು ಪ್ರೇರೇಪಿಸಿ. ಈ ದಿನವನ್ನು ‘ಸಂಸ್ಕೃತಿ ದಿನ’ (ಕಲ್ಚರಲ್ ಡೇ) ಎಂದು ಆಯೋಜಿಸುವಂತೆ ಕೇಳಿ. ನೋಟೀಸ್ ಬೋರ್ಡ್ ಮೇಲೆ ಯುಗಾದಿಯ ಶುಭಾಶಯಗಳನ್ನು ತಿಳಿಸಲು ಮತ್ತು ಯುಗಾದಿಯ ಮಹತ್ವವನ್ನು ತಿಳಿಸುವಂತಹ ಲೇಖನಗಳನ್ನು ಅಂಟಿಸಲು ಪ್ರವೃತ್ತಗೊಳಿಸಿ. ೩. ನಿಮ್ಮ ಮನೆಯ ಮುಂದೆ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಿ. |