ರೋಮ್(ಇಟಲಿ) : ‘ಗುಡ್ ಫ್ರೈಡೆ‘ ನಿಮಿತ್ತ ೧೨ ಮಹಿಳಾ ಕೈದಿಗಳ ಪಾದ ತೊಳೆದ ಪೋಪ್ ಫಾನ್ಸಿಸ್ !

(‘ಗುಡ್ ಫ್ರೈಡೆ‘ ದಿನದಂದು ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಲಾಗಿತ್ತು)

ರೋಮ್(ಇಟಲಿ) – ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಶುಭ ಶುಕ್ರವಾರದಂದು ರೋಮ್‌ನ ರೆಬಿಬಿಯಾ ಜೈಲಿನಲ್ಲಿದ್ಧ ೧೨ ಮಹಿಳಾ ಕೈದಿಗಳ ಪಾದಗಳನ್ನು ತೊಳೆದು ಅವರ ಪಾದಗಳಿಗೆ ಮುತ್ತಿಟ್ಟರು. ಪೋಪ್ ಅವರು ವೀಲ್ ಚೇರ್‌ನಲ್ಲಿ ಕುಳಿತಿದ್ದರು ಮತ್ತು ಮಹಿಳಾ ಕೈದಿಗಳು ಎತ್ತರದ ವೇದಿಕೆಯಲ್ಲಿದ್ದ ಬೆಂಚಿನ ಮೇಲೆ ಕುಳಿತಿದ್ದರು. ಪೋಪ್‌ರವರು ಕೈದಿಗಳ ಪಾದಗಳನ್ನು ತೊಳೆಯುವಾಗ ಕೈದಿಗಳ ಕಣ್ಣಲ್ಲಿ ನೀರು ತುಂಬಿತ್ತು. ಪೋಪ್‌ರವರು ನಿಧಾನವಾಗಿ ಕೈದಿಗಳ ಕಾಲುಗಳ ಮೇಲೆ ನೀರನ್ನು ಸುರಿದರು ಮತ್ತು ಸಣ್ಣ ಟವೆಲ್‌ನಿಂದ ಪಾದಗಳನ್ನು ಒರೆಸಿದರು, ನಂತರ ಮಹಿಳೆಯರ ಎರಡೂ ಪಾದಗಳಿಗೆ ಮುತ್ತಿಟ್ಟು ವಿಧಿ ಪೂರ್ಣಗೊಳಿಸಿದರು.

ಎಲ್ಲಾ ಧರ್ಮಗುರುಗಳು ಕಪಟತನದಿಂದ ದೂರವಿರಬೇಕು ! – ಪೋಫ್ ಫ್ರಾನ್ಸಿಸ್

ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದ ಪೋಪ್ ಫ್ರಾನ್ಸಿಸ್, ಎಲ್ಲಾ ಧರ್ಮಗುರುಗಳು ಕಪಟತನದಿಂದ ದೂರವಿರಬೇಕು. ಸಾಮಾನ್ಯ ಜನರಿಗೆ ಪಾದ್ರಿಯು ಏನು ಉಪದೇಶಿಸುತ್ತಾನೋ, ಅದನ್ನು ಅವನು ತನ್ನ ಆಧ್ಯಾತ್ಮಿಕ ಜೀವನದಲ್ಲಿಯೂ ಪಾಲನೆ ಮಾಡಬೇಕು. (ಪಾದ್ರಿಗಳನ್ನು ‘ಕಾಮುಕ’ ಎಂದು ಜಗತ್ತಿನಲ್ಲಿ ಗುರುತಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಪಾದ್ರಿಗಳು ಮಹಿಳೆ-ಮಕ್ಕಳ ಮೇಲೆ ಲೈಂಗಿಕ ಶೋಷಣೆ ಮಾಡಿದಾಗ ಪೋಪ್ ಅವರು ಕ್ಷಮೆ ಕೇಳಬೇಕಾಗಿ ಬಂದಿತ್ತು. ಈ ಬಗ್ಗೆ ಪಾದ್ರಿಗಳು ಅವಲೋಕನ ಮಾಡುವ ಅವಶ್ಯಕತೆ ಇದೆ !-ಸಂಪಾದಕರು)