ಜೆರುಸಲೇಮ – ಕಳೆದ ವರ್ಷ ಅಕ್ಟೋಬರ್ ೭ ರಂದು ಹಮಾಸದಿಂದ ನಡೆದಿರುವ ಭಯೋತ್ಪಾದಕ ದಾಳಿಯ ನಂತರ ಇಸ್ರೇಲ್ ಗಾಜಾದಲ್ಲಿ ಸೈನಿಕ ಕಾರ್ಯಾಚರಣೆ ಆರಂಭಿಸಿತು. ಇಸ್ರಯಿಲ್ ಹಮಾಸ್ ಯುದ್ಧದಿಂದ ಇಸ್ರೇಲ್ ನಲ್ಲಿನ ಪ್ಯಾಲೆಸ್ಟೈನ್ ಕಾರ್ಮಿಕರಿಗೆ ಅವರ ದೇಶಕ್ಕೆ ವಾಪಸ ಕಳುಹಿಸಿರುವ ಇಸ್ರೇಲ್ ಗೆ ಕೃಷಿ, ಕಟ್ಟಡ ಕಾಮಗಾರಿ, ಸ್ವಚ್ಛತೆ, ವೃದ್ಧರ ಸೇವೆ, ಮುಂತಾದ ಕೆಲಸಕ್ಕಾಗಿ ವಿದೇಶದಲ್ಲಿನ ಕಾರ್ಮಿಕರ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಭಾರತದ ಜೊತೆಗೆ ನಡೆದಿರುವ ಒಪ್ಪಂದದ ಪ್ರಕಾರ ಇಸ್ರೇಲ್ ನಲ್ಲಿ ೪೨ ಸಾವಿರ ಕಾರ್ಮಿಕರನ್ನು ಕರೆದುಕೊಂಡು ಹೋಗುವ ಪ್ರಸ್ತಾವ ಇತ್ತು. ಇಲ್ಲಿಯವರೆಗೆ ಕೇವಲ ೧ ಸಾವಿರ ಭಾರತೀಯ ಕಾರ್ಮಿಕರು ಇಸ್ರೇಲ್ ಗೆ ತಲುಪಿದ್ದಾರೆ, ಎಂದು ಇಸ್ರಾಯಿಲಿನ ನಿರಾಶ್ರಿತ ಇಲಾಖೆ ಹೇಳಿದೆ .