ಬ್ರಿಟನ್‌: 400 ಹಿಂದೂ ದೇವಾಲಯಗಳ ಭದ್ರತೆಗೆ 50 ಕೋಟಿ ರೂಪಾಯಿ ನಿಬಂದನೆ !

ಹಿಂದೂ ದೇವಾಲಯಗಳಿಗಿಂತ ಇಸ್ಲಾಮಿಕ್ ಸಂಸ್ಥೆಗಳಿಗೆ ಕೊಟ್ಟ ನಿಧಿಯೇ ಹೆಚ್ಚು

ಲಂಡನ್ (ಬ್ರಿಟನ್) – ಹಿಂದೂಗಳ ಬೇಡಿಕೆಯ ನಂತರ ಬ್ರಿಟನ್ ಸರಕಾರವು ಅಲ್ಲಿನ ದೇವಾಲಯಗಳ ಭದ್ರತೆಗಾಗಿ 50 ಕೋಟಿ ರೂಪಾಯಿ ನೀಡಲಾಗುವುದು ಎಂದು ಘೋಷಿಸಿದೆ. ಬ್ರಿಟನ್‌ನಲ್ಲಿ 400 ಕ್ಕೂ ಹೆಚ್ಚು ಹಿಂದೂ ದೇವಾಲಯಗಳಿವೆ. ಸರಕಾರ ನೀಡುವ ಈ ಅನುದಾನದಿಂದ ಈ ದೇವಾಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಅಲ್ಲದೆ, ದೇವಸ್ಥಾನಗಳ ಮೇಲಿನ ದಾಳಿ ಪ್ರಕರಣಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಪೊಲೀಸರಿಗೆ ತರಬೇತಿ ನೀಡಲು ಈ ಹಣವನ್ನು ಖರ್ಚು ಮಾಡಲಾಗುವುದು. 2022 ರಲ್ಲಿ, ಬ್ರಿಟನ್‌ನಲ್ಲಿನ ಅನೇಕ ದೇವಾಲಯಗಳ ಮೇಲೆ ದಾಳಿ ನಡೆದಿತ್ತು.

ಧಾರ್ಮಿಕ ಸ್ಥಳಗಳ ಭದ್ರತೆಗೆ ಧನ ಸಹಾಯ ನೀಡುವಲ್ಲಿ ತಾರತಮ್ಯ !

2 ವರ್ಷಗಳ ಹಿಂದೆ ಬ್ರಿಟಿಷ್ ಸರಕಾರವು ಧಾರ್ಮಿಕ ಸ್ಥಳಗಳ ಭದ್ರತೆಗಾಗಿ 300 ಕೋಟಿ ರೂಪಾಯಿ ನಿಧಿಯನ್ನು ಘೋಷಿಸಿತ್ತು. ಇದರಲ್ಲಿನ ಹೆಚ್ಚಿನ ಹಣವನ್ನು ಇಸ್ಲಾಮಿಕ್ ಸಂಸ್ಥೆಗಳಿಗಾಗಿ ಖರ್ಚು ಮಾಡಲಾಗಿದ್ದು, ಇತರ ಧಾರ್ಮಿಕ ಸಂಸ್ಥೆಗಳಿಗಾಗಿ ಕೇವಲ 35 ಕೋಟಿ ರೂಪಾಯಿ ನೀಡಲಾಗಿದೆ. ಈ ಪೈಕಿ ಗುರುದ್ವಾರಗಳಿಗೆ 7 ಕೋಟಿ ರೂಪಾಯಿ, ಹಿಂದೂ ದೇವಾಲಯಗಳಿಗೆ ಕೇವಲ 2.5 ಕೋಟಿ ರೂಪಾಯಿ ಸಹಾಯ ಸಿಕ್ಕಿದೆ. ಹೀಗಾಗಿ ಬ್ರಿಟನ್‌ನಲ್ಲಿರುವ ಹಿಂದೂಗಳಲ್ಲಿ ಈ ಬಗ್ಗೆ ಅಸಮಾಧಾನವಿದೆ. ‘ಧಾರ್ಮಿಕ ಸಂಸ್ಥೆಗಳ ಭದ್ರತೆಗಾಗಿ ಧನಸಹಾಯ ನೀಡುವಲ್ಲಿ ತಾರತಮ್ಯ ಮಾಡುವುದು ಸೂಕ್ತವಲ್ಲ’, ಎಂದು ಅನೇಕ ಹಿಂದೂಗಳ ಅಭಿಪ್ರಾಯವಾಗಿದೆ.

ಸಂಪಾದಕೀಯ ನಿಲುವು

ಇಸ್ಲಾಮಿಕ್ ಸಂಸ್ಥೆಗಳಿಗೆ 200 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದರೆ, 400 ದೇವಾಲಯಗಳ ಭದ್ರತೆಗೆ ಕೇವಲ 50 ಕೋಟಿ ರೂಪಾಯಿ ನೀಡಿದ್ದು ಅತ್ಯಂತ ಕಡಿಮೆ ಅನುದಾನವಾಗಿದೆ. ಅಲ್ಲಿನ ಪ್ರಧಾನಿ ರಿಷಿ ಸುನಕ್ ಈ ಬಗ್ಗೆ ವಿಚಾರ ಮಾಡಬೇಕಿದೆ.