ಕುಂಕುಮ ಹಚ್ಚುವುದು ವಿವಾಹಿತ ಮಹಿಳೆಯ ಧಾರ್ಮಿಕ ಕರ್ತವ್ಯ ! – ಇಂದೋರ್ ಕೌಟುಂಬಿಕ ನ್ಯಾಯಾಲಯ

ಇಂದೋರ್ (ಮಧ್ಯಪ್ರದೇಶ) – ಇಲ್ಲಿಯ ಕೌಟುಂಬಿಕ ನ್ಯಾಯಾಲಯವು ಒಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ‘ವಿವಾಹಿತ ಮಹಿಳೆ ಕುಂಕುಮ ಹಚ್ಚುವುದು ಧಾರ್ಮಿಕ ಕರ್ತವ್ಯವಾಗಿದ್ದು ಮತ್ತು ಇದು ವಿವಾಹಿತ ಮಹಿಳೆಯ ಗುರುತಾಗಿದೆ’, ಎಂದು ಹೇಳುತ್ತಾ ಅವಳಿಗೆ ಕುಂಕುಮ ಹಚ್ಚಿಕೊಂಡು ತಕ್ಷಣವೇ ತನ್ನ ಗಂಡನ ಬಳಿಗೆ ಹೋಗುವಂತೆ ಆದೇಶಿಸಿದೆ. ಈ ಸಮಯದಲ್ಲಿ ನ್ಯಾಯಾಲಯವು ಅಸ್ಸಾಂನ ಗುವಾಹಟಿ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿದೆ. ‘ವಿವಾಹಿತಳು ಕುಂಕುಮ ಹಚ್ಚದಿರುವುದು, ಕ್ರೂರತ್ವವಾಗುವುದು’ ಎಂದು ಹೇಳಿತ್ತು.

1. ಇಂದೋರ್‌ನ ವ್ಯಕ್ತಿಯೊಬ್ಬರು ವೈವಾಹಿಕ ಸಂಬಂಧವನ್ನು ಮರುಸ್ಥಾಪಿಸಲು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಯಾವುದೇ ಕಾರಣವಿಲ್ಲದೆ ಕಳೆದ 5 ವರ್ಷಗಳಿಂದ ತನ್ನ ಪತ್ನಿ ತನ್ನಿಂದ ಬೇರ್ಪಟ್ಟಿದ್ದಾಳೆ ಎಂದು ಅರ್ಜಿದಾರರು ಹೇಳಿದ್ದಾರೆ. ಈಗ ಅವಳು ಕುಂಕುಮ ಹಚ್ಚುವುದನ್ನೂ ಬಿಟ್ಟಿದ್ದಾಳೆ.

2. ‘ಪತಿ ಮಾದಕ ಪದಾರ್ಥ ಸೇವಿಸಿ ವರದಕ್ಷಿಣೆಗಾಗಿ ಹಿಂಸಿಸುತ್ತಾನೆ ‘ಎಂದು ವಿವಾಹಿತೆಯು ಆರೋಪಿಸಿದ್ದಾಳೆ. ಈ ಸಂಬಂಧ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಈ ವೇಳೆ ನ್ಯಾಯಾಲಯ ಎರಡೂ ಕಡೆಯ ವಾದವಿವಾದವನ್ನು ಆಲಿಸಿತು.

3. ಅಲ್ಲಿ ಮಹಿಳೆ ತನ್ನ ಹೇಳಿಕೆಯನ್ನು ದಾಖಲಿಸಲು ನ್ಯಾಯಾಲಯಕ್ಕೆ ಬಂದಿದ್ದಳು. ಆ ವೇಳೆ ನೋಡಿದಾಗಲೂ ಆಕೆ ಕುಂಕುಮ ಹಚ್ಚಿರಲಿಲ್ಲ. ಈ ವಿಷಯದ ಬಗ್ಗೆ ನ್ಯಾಯಾಲಯವು ಆಕೆಯನ್ನು ಕೇಳಿದಾಗ ಅವಳು ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಇದಾದ ಬಳಿಕ ನ್ಯಾಯಾಲಯ ತೀರ್ಪು ನೀಡಿ ಆ ಮಹಿಳೆಗೆ ಕುಂಕುಮ ಹಚ್ಚಿಕೊಂಡು ಪತಿಯೊಂದಿಗೆ ಇರುವಂತೆ ಆದೇಶಿಸಿದೆ.