ಉತ್ತರಪ್ರದೇಶದಲ್ಲಿನ ಸಿದ್ದಾರ್ಥ ನಗರದಿಂದ ಚೀನಾದ ಇಬ್ಬರು ನುಸುಳುಕೋರರ ಬಂಧನ !

ಸಿದ್ದಾರ್ಥನಗರ (ಉತ್ತರಪ್ರದೇಶ) – ಭಾರತದಲ್ಲಿ ಅಕ್ರಮವಾಗಿ ನುಸುಳಿದ್ದ ಚೀನಾದ ಇಬ್ಬರು ನಾಗರಿಕರನ್ನು ಸಿದ್ಧಾರ್ಥನಗರದಲ್ಲಿನ ಬಾಭನಿ ತಿರಾಹೆ ಇಲ್ಲಿಂದ ಬಂಧಿಸಲಾಗಿದೆ. ಇದರಲ್ಲಿ ಓರ್ವ ಚೀನಾ ಮಹಿಳೆಯು ಇದ್ದಾಳೆ. ಇವರಿಬ್ಬರು ನೇಪಾಳ ಮೂಲಕ ಕಾಕರಹವಾ ಗಡಿಯಿಂದ ಭಾರತದೊಳಗೆ ನುಸಳುವ ಪ್ರಯತ್ನದಲ್ಲಿದ್ದರು. ಬಂಧಿಸಿರುವ ನುಸುಳುಕೋರ ಝೋವು ಪೂಲಿನ್ ಇವನು ಚೀನಾದಲ್ಲಿನ ಸಿಚುವಾನಲ್ಲಿ ಮತ್ತು ನುಸುಳಿರುವ ಮಹಿಳೆ ಯುವಾನ್ ಯೂಹಾನದಲ್ಲಿನ ಹುಯಾಂಜಿನಬಾವ ಇಲ್ಲಿಯ ನಿವಾಸಿಯಾಗಿದ್ದಾಳೆ. ಆರೋಪಿಯಿಂದ ೨ ಪಾಸ್ಪೋರ್ಟ್, ೧ ನೇಪಾಳಿ ‘ಟೂರಿಸ್ಟ್ ವೀಸಾ’ , ೨ ಮೊಬೈಲ್, ೩ ನೇಪಾಳಿ ಮತ್ತು ೩ ಚೈನೀಸ್ ಸಿಮ್ ಕಾರ್ಡ್, ೨ ಚಿಕ್ಕ ಬ್ಯಾಗಿನಲ್ಲಿ ವಿವಿಧ ರೀತಿಯ ಒಟ್ಟು ೯ ಕಾರ್ಡುಗಳು ವಶಪಡಿಸಿಕೊಳ್ಳಲಾಗಿದೆ. ಸಿದ್ಧಾರ್ಥನಗರ ಪೊಲೀಸರ ವಿಚಾರಣೆಯಲ್ಲಿ ಇಬ್ಬರೂ ಚೀನಾದ ನಿವಾಸಿಗಳೆಂದು ಬೆಳಕಿಗೆ ಬಂದಿದೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.

ಸಂಪಾದಕೀಯ ನಿಲುವು

ನುಸುಳುಕೊರರು ಭಾರತದಲ್ಲಿ ನುಸುಳುವ ಧೈರ್ಯ ಮಾಡದಂತೆ, ಭಾರತವು ಎಲ್ಲಾ ನುಸುಳುಕೋರರ ವಿರುದ್ಧ ಕಾರ್ಯಾಚರಣೆ ನಡೆಸಬೇಕು !