Baltimore Bride Collapse: ಅಮೇರಿಕಾದಲ್ಲಿ ಸರಕು ಸಾಗಣೆ ಹಡಗು ಬಡಿದು ಸೇತುವೆ ಕುಸಿತ

  • ಅಪಘಾತ ಸಂಭವಿಸಲಿದೆಯೆಂದು ಗಮನಕ್ಕೆ ಬರುತ್ತಲೇ, ಹಡಗಿನಲ್ಲಿದ್ದ ಸಿಬ್ಬಂದಿಯವರು ತಕ್ಷಣವೇ ಆಡಳಿತಕ್ಕೆ ಮಾಹಿತಿ ನೀಡಿದ್ದರಿಂದ ತಪ್ಪಿದ ದೊಡ್ಡ ಅನಾಹುತ !

  • ಅಮೇರಿಕಾ ಸರಕಾರದಿಂದ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಗಳ ಶ್ಲಾಘನೆ !

ಮೇರಿಲ್ಯಾಂಡ್ (ಅಮೆರಿಕಾ) – ಇಲ್ಲಿನ ಬಾಲ್ಟಿಮೋರ್‌ನ ಪಟಾಪ್‌ಸ್ಕಾಟ್ ನದಿಗೆ ನಿರ್ಮಿಸಲಾಗಿದ್ದ ‘ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಜ್’ ಈ ಸೇತುವೆಗೆ ಎರಡು ದಿನಗಳ ಹಿಂದೆ ಸರಕು ಸಾಗಣೆಯ ಹಡಗು ಬಡಿದಿದ್ದರಿಂದ, ಅದು ಕುಸಿಯಿತು. ಈ ಪ್ರಕರಣದಲ್ಲಿ ಅಮೇರಿಕಾ ಸರಕಾರವು ಈ ಹಡಗಿನ ಸಿಬ್ಬಂದಿಗಳನ್ನು ಹೊಗಳಿದ್ದಾರೆ. ಹಡಗು ಸೇತುವೆಗೆ ಬಡಿಯಲಿದೆ ಎಂಬುದು ಗಮನಕ್ಕೆ ಬಂದಾಗ, ಸಿಬ್ಬಂದಿಯವರು ತಕ್ಷಣವೇ ಆಡಳಿತಕ್ಕೆ ಮಾಹಿತಿಯನ್ನು ನೀಡಿದರು. ತದನಂತರ ಆಡಳಿತ ತಕ್ಷಣವೇ ಸೇತುವೆಯ ಮೇಲಿನ ವಾಹನ ಸಂಚಾರವನ್ನು ತಡೆದಿದ್ದರಿಂದ ದೊಡ್ಡ ಪ್ರಮಾಣದಲ್ಲಿ ನಡೆಯಲಿದ್ದ ಪ್ರಾಣಹಾನಿ ತಪ್ಪಿದಂತಾಗಿದೆ. ಈ ಅಪಘಾತದಲ್ಲಿ ಸಧ್ಯಕ್ಕೆ 6 ಜನರು ನಾಪತ್ತೆಯಾಗಿದ್ದು, ಅವರನ್ನು ಹುಡುಕಿದರೂ ಅವರು ಪತ್ತೆಯಾಗದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸರಕು ಸಾಗಣೆ ಹಡಗು ಸಿಂಗಾಪುರದಿಂದ ಶ್ರೀಲಂಕಾಕ್ಕೆ ಹೋಗುತ್ತಿತ್ತು. ಈ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಭಾರತೀಯರಾಗಿದ್ದಾರೆ.

ಬಾಲ್ಟಿಮೋರ್ ಪೊಲೀಸರು, ‘ಹಡಗು ಉದ್ದೇಶಪೂರ್ವಕವಾಗಿ ಫ್ರಾನ್ಸಿಸ್ ಸ್ಕಾಟ್ ಸೇತುವೆಯನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ.’ ಎಂದು ಹೇಳಿದೆ. ಅಮೇರಿಕಾದ ತನಿಖಾ ಇಲಾಖೆ ಎಫ್.ಬಿ.ಐ. ಕೂಡ ಈ ಅಪಘಾತದ ತನಿಖೆಯಲ್ಲಿ ಸೇರಿಕೊಂಡಿದೆ. ಈ ಅಪಘಾತ ಹೇಗಾಯಿತು ? ಇದರ ನಿಖರ ಕಾರಣವೇನು ? ಎನ್ನುವುದು ಇದುವರೆಗೂ ತಿಳಿಯಲಿಲ್ಲ.

ಸಂಪಾದಕೀಯ ನಿಲುವು

ಮಾನವನ ತಪ್ಪುಗಳಿಂದ ಸಂಭವಿಸುವ ಅಪಘಾತಗಳನ್ನು ತಡೆಯಲು, ಪ್ರತಿಯೊಬ್ಬರೂ ಸಾಧನೆಯನ್ನು ಮಾಡಿದರೆ, ದೇವರು ಅಂತಹ ಘಟನೆಗಳಾಗುವುದನ್ನು ತಪ್ಪಿಸುತ್ತಾನೆ !