|
ಬೆಂಗಳೂರು – ಪ್ರಧಾನಿ ಮೋದಿಯವರು 2 ಕೋಟಿ ಉದ್ಯೋಗಗಳ ಭರವಸೆ ನೀಡಿದ್ದರು; ಆದರೆ ಅದನ್ನು ಪೂರ್ಣ ಮಾಡಿಲ್ಲ. ‘ಮೋದಿ-ಮೋದಿ’ ಎಂದು ಕೂಗುತ್ತಿರುವ ಯುವ ಬೆಂಬಲಿಗರು ಮತ್ತು ವಿದ್ಯಾರ್ಥಿಗಳ ಕಪಾಳಕ್ಕೆ ಬಾರಿಸಬೇಕು ಎಂದು ಮಾ.25ರಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಸರಕಾರದ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಹಾಗೂ ಕರ್ನಾಟಕದ ಬಿಜೆಪಿ ನಾಯಕ ಅರ್. ಅಶೋಕ್ ಅವರು ಮಂತ್ರಿ ಶಿವರಾಜ್ ಅವರ ವಿರುದ್ಧ ಚುನಾವಣಾ ಆಯೋಗದಲ್ಲಿ ದೂರು ನೀಡಿದ್ದಾರೆ.
Slap the students who chant Modi slogans. – Shivraj Tangadagi, Karnataka Congress leader and State’s Culture Minister
Complaint by BJP to #ElectionCommission
Note the violent attitude of the Non-violent – Gandhian #Congress#LokSabhaElections2024 pic.twitter.com/XUmb4zod5S
— Sanatan Prabhat (@SanatanPrabhat) March 26, 2024
ಶಿವರಾಜ್ ತಂಗಡಗಿ ಮುಂದೆ ಮಾತನಾಡಿ, ಬಿಜೆಪಿ ಚುನಾವಣೆಗಾಗಿ ಸದ್ಯ ಪ್ರಚಾರ ನಡೆಸುತ್ತಿದೆ. ಈಗ ಅವರು ಯಾವ ಬಾಯಿಯಿಂದ ಮತ ಕೇಳುತ್ತಿದ್ದಾರೆ? ವಿದ್ಯಾರ್ಥಿಗಳು ಉದ್ಯೋಗ ಕೇಳಿದರೆ ತರಕಾರಿ ಮಾರಲು ಹೇಳುತ್ತಾರೆ. ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಖಾರವಾಗಿ ನುಡಿದರು.