ಶ್ರೀಲಂಕಾದ ರಾಷ್ಟ್ರಾಧ್ಯಕ್ಷ ರಾನಿಲ ವಿಕ್ರಮಸಿಂಘೆ ಇವರ ಹೇಳಿಕೆ !
ಕೊಲಂಬೋ (ಶ್ರೀಲಂಕಾ) – ಶ್ರೀಲಂಕಾದ ರಾಷ್ಟ್ರಾಧ್ಯಕ್ಷ ರಾನಿಲ ವಿಕ್ರಮ ಸಿಂಘೆ ಇವರು ಭಾರತವನ್ನು ಹೊಗಳಿದ್ದು ‘ಭಾರತದ ಅನುಕರಣೆ ಮಾಡಿ ನಮ್ಮ ದೇಶ ಕೂಡ ಪ್ರಗತಿ ಸಾಧಿಸಬಹುದು’ ಎಂದು ಹೇಳಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
“Copying what India is doing”, says Sri Lanka Prez on Digital infrastructure; Explains ‘spoke with PM Modi..we would like to go with India’, highlighting India’s past, including discovering “Zero” pic.twitter.com/bjvOBvoWjZ
— Sidhant Sibal (@sidhant) March 26, 2024
ರಾಷ್ಟ್ರಾಧ್ಯಕ್ಷ ವಿಕ್ರಮಸಿಂಘೆ ಮಾತು ಮುಂದುವರೆಸುತ್ತಾ,
೧. ನಮಗೆ ತಾಂತ್ರಿಕ ಹಂತದಲ್ಲಿ ಮತ್ತು ಸಂಸ್ಥೆ ಸ್ಥಾಪನೆಯ ದೃಷ್ಟಿಯಿಂದ ಸಹಾಯ ಬೇಕಾಗುವುದು. ಇದಕ್ಕಾಗಿ ಭಾರತ ಅತ್ಯುತ್ತಮ ಪರ್ಯಾಯವಾಗಿದೆ. ಇದಕ್ಕಾಗಿ ನಾನು ಕಳೆದ ವರ್ಷ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಜೊತೆಗೆ ಚರ್ಚಿಸಿದ್ದೇನೆ. ಅವರಿಂದ ನನಗೆ ಒಳ್ಳೆಯ ಅಭಿಪ್ರಾಯ ದೊರೆತಿದೆ.
೨. ಭಾರತವು ಸೊನ್ನೆಯನ್ನು ಕಂಡು ಹಿಡಿದು ಮುಂದುವರೆಯಿತು. ಅದು ಇಂದು ಪ್ರಗತಿಯ ಶಿಖರ ಏರಿದೆ. ಭಾರತ ಯಾವ ರೀತಿಯಲ್ಲಿ ಮುಂದೆ ಸಾಗುತ್ತಿದೆ, ಆ ಪದ್ಧತಿ ತಿಳಿದುಕೊಳ್ಳುವಂತಹದ್ದಾಗಿದೆ ನಾವು ಕೂಡ ಅದನ್ನು ನಮ್ಮ ದೇಶದಲ್ಲಿ ಅಳವಡಿಸಬಹುದು ಎಂದು ನಾನು ಹೇಳಬಹುದು. ಡಿಜಿಟಲ್ ಮೂಲಭೂತ ಸೌಲಭ್ಯದ ಬಗ್ಗೆ ಭಾರತ ಏನು ಮಾಡುತ್ತಿದೆ, ಅದನ್ನು ನಾವು ಅನುಕರಣೆ ಮಾಡುತ್ತಿದ್ದೇವೆ. ನಮಗೆ ಭಾರತದ ಜೊತೆಗೆ ಸ್ಪರ್ಧೆ ಮಾಡಲು ಖಂಡಿತವಾಗಿ ಹಿಡಿಸುವುದು ಎಂದು ಹೇಳಿದರು.