ಅಲಿಗಢದಲ್ಲಿ(ಉತ್ತರಪ್ರದೇಶ) ಹೋಳಿಯ ಮೊದಲು ೪ ಮಸೀದಿಗಳು ಬಂದ್ !

ಮಸೀದಿಯ ಮೇಲೆ ಬಣ್ಣ ಬಿದ್ದು ಆಗಬಹುದಾದ ವಿವಾದ ತಪ್ಪಿಸಲು ಮಸೀದಿ ಸಮಿತಿಯ ನಿರ್ಧಾರ !

ಅಲಿಗಢ (ಉತ್ತರಪ್ರದೇಶ) – ಇಲ್ಲಿ ಮಸೀದಿಗಳ ಮೇಲೆ ಹೋಳಿಯ ಬಣ್ಣ ಬೀಳಬಾರದು ಮತ್ತು ಆ ಮೂಲಕ ಯಾವುದೇ ವಿವಾದ ನಿರ್ಮಾಣವಾಗಬಾರದು, ಇದಕ್ಕಾಗಿ ಸೂಕ್ಷ ಪ್ರದೇಶದಲ್ಲಿರುವ ೪ ಮಸೀದಿಗಳನ್ನು ಕಪ್ಪು ಟಾರ್ಪಾಲಿನ್‌‌‌ನಿಂದ ಮುಚ್ಚಲಾಗಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಸೀದಿಯನ್ನು ಕಪ್ಪು ಟಾರ್ಪಾಲಿನ್ ನಿಂದ ಮುಚ್ಚುವ ನಿರ್ಧಾರವನ್ನು ಆಡಳಿತ ಮತ್ತು ಮಸೀದಿ ಸಮಿತಿ ಜಂಟಿಯಾಗಿ ತೆಗೆದುಕೊಂಡಿದೆ.

ಮಸೀದಿ ಸಮಿತಿಯ ಸದಸ್ಯ ಅಕಿಲ್ ಪೆಹೆಲ್ವಾನ್ ಮಾತನಾಡಿ, ಹೋಳಿ ಉತ್ಸವದಿಂದಾಗಿ ನಾವು ಈ ಮಸೀದಿಗಳನ್ನು ಮುಚ್ಚುತ್ತೇವೆ. ಕಳೆದ ೫-೬ ವರ್ಷಗಳಿಂದ ಈ ಮಸೀದಿಗಳನ್ನು ಹೋಳಿ ಸಮಯದಲ್ಲಿ ಮುಚ್ಚಲಾಗುತ್ತದೆ. ನಗರದಲ್ಲಿ ಹೋಳಿಯ ಮೊದಲು ಮುಚ್ಚಲಾಗುವಂತಹ ಅನೇಕ ಮಸೀದಿಗಳಿವೆ, ಈ ಕೆಲಸದಲ್ಲಿ ಆಡಳಿತ ನಮಗೆ ಸಹಾಯ ಮಾಡಿದೆ. ಆಡಳಿತದ ಉಪಸ್ಥಿತಿಯಲ್ಲಿ ನಾವು ಪೋಲೀಸರ ನೇತೃತ್ವದಲ್ಲಿ ಮಸೀದಿ ಮುಚ್ಚುತ್ತೇವೆ. ಇದರಿಂದ ಹೋಳಿ ಆಚರಿಸುವಾಗ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ.

ಸಂಪಾದಕೀಯ ನಿಲುವು

ವರ್ಷಕ್ಕೊಮ್ಮೆ ಸಣ್ಣಪುಟ್ಟ ಬಣ್ಣ ಎರಚಿದರೂ ಸಹಿಸದವರು ಹಿಂದೂಗಳ ಜೊತೆಗೆ ಸಹೋದರತೆಯಿಂದ ಇರುವರೇ ?

‘ಹಿಂದೂಗಳೇ ನಮಗೆ ಇಫ್ತಾರ್ ಔತಣಕೂಟ ಕೊಡಬೇಕು, ದೇವಸ್ಥಾನದಲ್ಲಿ ನಮಾಜ್ ಗಾಗಿ ಸ್ಥಳ ನೀಡಬೇಕು ಮತ್ತು ತಥಾಕಥಿತ ಸಹೋದರತ್ವ ಉಳಿಸಿಕೊಳ್ಳಬೇಕು‘, ಹೀಗೆ ಅವರಿಗೆ ಅನ್ನಿಸುತ್ತೆ, ಇದನ್ನು ಹಿಂದೂಗಳು ಯಾವಾಗ ಗಮನಿಸುವರು ?