ಅಯೋಧ್ಯೆ – ಇಡೀ ರಾಮನ ನಗರದಲ್ಲಿ ಹೋಳಿಯ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಭವ್ಯ ಶ್ರೀರಾಮ ಮಂದಿರದಲ್ಲಿ 495 ವರ್ಷಗಳ ನಂತರ ಭಗವಾನ್ ಶ್ರೀ ರಾಮಲಲ್ಲಾ ಹೋಳಿ ಆಡಿದ. ಈ ವೇಳೆ ದೇಶದ ಎಲ್ಲಾ ಕಡೆಗಳಿಂದ ಜನರು ದೇವಸ್ಥಾನಕ್ಕೆ ಆಗಮಿಸಿದ್ದರು.
श्री राम जन्मभूमि मंदिर में रंगोत्सव
Rangotsav at Shri Ram Janmabhoomi Mandir pic.twitter.com/nJgjb2QT7Z
— Shri Ram Janmbhoomi Teerth Kshetra (@ShriRamTeerth) March 25, 2024
1529 ರಲ್ಲಿ, ಮುಸ್ಲಿಂ ಆಕ್ರಮಣಕಾರ ಬಾಬರನು ಶ್ರೀರಾಮ ಮಂದಿರವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಿದನು. ಬಳಿಕ 495 ವರ್ಷಗಳ ನಂತರ ಅಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಯಿತು. ಇಂತಹ ಸುದೀರ್ಘ ಅವಧಿಯ ನಂತರ ಶ್ರೀರಾಮ ಮಂದಿರ ನಿರ್ಮಾಣದ ನಂತರ ಮೊದಲ ಬಾರಿಗೆ ಅಲ್ಲಿ ಹೋಳಿ ಆಡಲಾಯಿತು. ಇದರಿಂದಾಗಿ ದೇವಸ್ಥಾನ ಹಾಗೂ ಅಯೋಧ್ಯನಗರಿಯಲ್ಲಿ ವಿಶೇಷ ಸಂಭ್ರಮ ಕಾಣುತ್ತಿತ್ತು. ಹೋಳಿಯಂದು ಬೆಳಗ್ಗೆ ಮಠ, ಮಂದಿರಗಳಲ್ಲಿರುವ ದೇವರಿಗೆ ಗುಲಾಲ್ ಅರ್ಪಿಸಿ ಹೋಳಿ ಆಡಲು ಅನುಮತಿ ಪಡೆಯಲಾಯಿತು. ಶ್ರೀ ರಾಮಲಲ್ಲಾ ಮೂರ್ತಿಯನ್ನು ಹೂವಿನಿಂದ ಅಲಂಕರಿಸಲಾಗಿತ್ತು.
भगवान श्री राम लला के भव्य मंदिर में विराजमान होने के पश्चात प्रथम होलिकोत्सव पर प्रफुल्लित भगवान और उनके भक्त। pic.twitter.com/kohSaNGPiv
— Shri Ram Janmbhoomi Teerth Kshetra (@ShriRamTeerth) March 24, 2024
ಶ್ರೀರಾಮ ಮಂದಿರದಲ್ಲಿ ಅರ್ಚಕರು ಶ್ರೀ ರಾಮಲಲ್ಲಾ ಮೇಲೆ ಪುಷ್ಪವೃಷ್ಟಿ ಮಾಡಿದರು. ಇದಾದ ನಂತರ ಅವರಿಗೆ ಗುಲಾಲ್ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಅರ್ಚಕರು ಹೋಳಿಗೆ ಸಂಬಂಧಿಸಿದ ಹಾಡುಗಳನ್ನು ಹಾಡಿದರು.