|
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ವಿಭಾಗೀಯ ಪೀಠವು ‘ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸಾ ಶಿಕ್ಷಣ ಆಕ್ಟ್ 2004’ ಅಸಂವಿಧಾನಿಕ ಎಂದು ಘೋಷಿಸಿದೆ. ಇಂತಹ ಮದರಸಾ ಶಿಕ್ಷಣ ಬೋರ್ಡ್‌ಅನ್ನು ಸ್ಥಾಪಿಸುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಮೂಲಭೂತ ಶಿಕ್ಷಣ ವ್ಯವಸ್ಥೆಗೆ ಸೇರಿಸುವಂತೆ ಉತ್ತರ ಪ್ರದೇಶ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶ ನೀಡಿದೆ. ಅಂಶುಮನಸಿಂಗ್ ರಾಥೋಡ್ ಮತ್ತು ಇತರರು ಅರ್ಜಿ ಸಲ್ಲಿಸಿ ಈ ಕಾಯ್ದೆಯನ್ನು ಪ್ರಶ್ನಿಸಿದ್ದರು. ನ್ಯಾಯಮೂರ್ತಿ (ಅಮಿಕಸ್ ಕ್ಯೂರಿ) ಅಕ್ಬರ್ ಅಹ್ಮದ್ ಮತ್ತು ಇತರ ವಕೀಲರು ಅವರ ಪರವಾಗಿ ವಾದಿಸಿದರು. ಈ ವಿಚಾರಣೆಯ ನಂತರ ನ್ಯಾಯಮೂರ್ತಿ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರ ವಿಭಾಗೀಯ ಪೀಠವು ಈ ಮೇಲಿನ ತೀರ್ಪನ್ನು ನೀಡಿತು. ನ್ಯಾಯಾಲಯದ ಈ ನಿರ್ಧಾರಕ್ಕೆ ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಕಲ್ಯಾಣ, ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶ ಸರಕಾರವು 2023 ರ ಅಕ್ಟೋಬರ್‌ನಲ್ಲಿ ಮದರಸಾಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಈ ತಂಡವು ಮದರಸಾಗಳಿಗೆ ಬರುವ ವಿದೇಶಿ ಹಣದ ತನಿಖೆ ನಡೆಸುತ್ತಿದೆ.
‘UP Board Of Madarsa Education Act 2004’ Contrary to Constitution; Significant judgement by #AllahabadHighCourt
The Board declared as contrary to the secular principles of the State Constitution.
Order issued to integrate all students of Madrasas into the basic education… pic.twitter.com/8coeYHLvJT
— Sanatan Prabhat (@SanatanPrabhat) March 22, 2024
ಉತ್ತರ ಪ್ರದೇಶ ಮದರಸಾ ಬೋರ್ಡ್ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗುವ ಸಾಧ್ಯತೆ.
ಉತ್ತರಪ್ರದೇಶ ಮದರಸಾ ಬೋರ್ಡ್ ನ ಅಧ್ಯಕ್ಷ ಡಾ. ಇಫ್ತಿಖಾರ್ ಅಹಮದ್ ಅವರು ಈ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾವು ಇದರ ಸವಿವರ ತೀರ್ಪಿಗಾಗಿ ಕಾಯುತ್ತಿದ್ದೇವೆ. ಆ ಬಳಿಕ ನಮ್ಮ ವಕೀಲರು ಅದರ ಅಧ್ಯಯನ ಮಾಡಿ ಅಗತ್ಯವಿದ್ದರೆ ಈ ನಿರ್ಣಯವನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುತ್ತೇವೆ; ಏಕೆಂದರೆ ಇದು 2 ಲಕ್ಷ ಮಕ್ಕಳ ಭವಿಷ್ಯದ ವಿಷಯವಾಗಿದೆ ಎಂದವರು ಹೇಳಿದರು.
ಮುಲಾಯಂ ಸಿಂಗ್ ಯಾದವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸಾ ಶಿಕ್ಷಣ ಕಾಯಿದೆ ಮಾಡಿದ್ದರು
ಡಿಸೆಂಬರ್ 6, 2004 ರಂದು, ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ, ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸಾ ಶಿಕ್ಷಣ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಈ ಬೋರ್ಡ್‌ನ ಅಡಿಯಲ್ಲಿ ತಹನಿಯಾ, ಫೌಕಾನಿಯಾ, ಅಲಿಯಾ (ಇಸ್ಲಾಮಿಕ್ ಶೈಕ್ಷಣಿಕ ಗುಣಮಟ್ಟ) ಶಿಕ್ಷಣ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದ ಮದರಸಾಗಳಿಗೆ ಮಾನ್ಯತೆ ನಿಡಲಾಗಿತ್ತು. ಅಲಿಯಾ ಮಟ್ಟದಲ್ಲಿ ಶಾಶ್ವತವಾಗಿ ಮಾನ್ಯತೆ ಪಡೆದ ಮದರಸಾಗಳಿಗೆ ರಾಜ್ಯ ಸರಕಾರವು ಕಾಲಕಾಲಕ್ಕೆ ಅನುದಾನ ನೀಡುತ್ತಿತ್ತು. ಸದ್ಯ, ಅಲಿಯಾ ಮಟ್ಟದಲ್ಲಿ ಶಾಶ್ವತವಾಗಿ ಮಾನ್ಯತೆ ಪಡೆದಿರುವ ಮದರಸಾಗಳ ಒಟ್ಟು ಸಂಖ್ಯೆ 560 ಆಗಿದೆ.
ಉತ್ತರ ಪ್ರದೇಶದಲ್ಲಿ 26 ಸಾವಿರ ಮದರಸಾಗಳು
ಉತ್ತರ ಪ್ರದೇಶದಲ್ಲಿ ಸುಮಾರು 26 ಸಾವಿರ ಮದರಸಾಗಳಿವೆ. ಇವುಗಳಲ್ಲಿ 12 ಸಾವಿರದ 800 ಮದರಸಾಗಳು ನೋಂದಣಿ ಬಳಿಕ ಮತ್ತೊಮ್ಮೆ ನವೀಕರಣಗೊಂಡಿಲ್ಲ. ಇನ್ನು, ನೋಂದಣಿಯೇ ಆಗದ ಇಂತಹ 8 ಸಾವಿರದ 500 ಮದರಸಾಗಳಿವೆ. 4 ಸಾವಿರದ 600 ಮದರಸಾಗಳು ನೋಂದಾಯಿತವಾಗಿದ್ದು, ಅವುಗಳ ಖರ್ಚನ್ನು ಆ ಮದರಸಾಗಳೇ ನೋಡಿಕೊಳ್ಳುತ್ತಿವೆ, ಆದರೆ 598 ಮದರಸಾಗಳು ಸರಕಾರದ ಅನುದಾನದಿಂದ ನಡೆಯುತ್ತಿದ್ದು, ಅವುಗಳಿಗೆ ಸರಕಾರ ಸಂಪೂರ್ಣ ಆರ್ಥಿಕ ನೆರವು ನೀಡುತ್ತಿದೆ.
ಸಂಪಾದಕೀಯ ನಿಲುವುಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ, ಅನ್ಯ ರಾಜ್ಯಗಳಲ್ಲೂ ಸಹ ಇಂತಹ ಮದರಸಾ ಬೋರ್ಡ್‌ಗಳನ್ನು ಸ್ಥಾಪಿಸಿ ಧರ್ಮದ ಆಧಾರದ ಮೇಲೆ ಶಿಕ್ಷಣ ನೀಡಲಾಗುತ್ತಿದ್ದು ಅವನ್ನು ಮುಚ್ಚಬೇಕು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಈ ಬಗ್ಗೆ ಕೇಂದ್ರ ಸರಕಾರ ಮುಂದಿನ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಅಭಿಪ್ರಾಯವಾಗಿದೆ ! |