ಸರಕಾರಿ ಹಣದಿಂದ ದೆಹಲಿ ವಕ್ಫ್ ಬೋರ್ಡ್ ಇಮಾಮ್‌ಗಳಿಗೆ ವೇತನ ನೀಡಿದ ಪ್ರಕರಣ
(ಇಮಾಮ್ ಎಂದರೆ ಮಸೀದಿಯಲ್ಲಿ ಪ್ರಾರ್ಥನೆ ನಡೆಸುವವನು)
ನವದೆಹಲಿ – ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇವರ ಸರಕಾರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ರುಕ್ಮಣಿ ಸಿಂಗ್ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ದೆಹಲಿ ಸರಕಾರ ಮತ್ತು ವಕ್ಫ್ ಬೋರ್ಡ್ ಇಮಾಮ್‌ಗಳು ಮತ್ತು ಮೌಜಿನ್‌ಗಳಿಗೆ (ಮಸೀದಿಗಳಲ್ಲಿ ಜನರನ್ನು ಆಜಾ಼ನ್ ಮೂಲಕ ಕರೆಯುವರು) ಒಟ್ಟು ನಿಧಿಯಿಂದ ಸಂಬಳವನ್ನು ನೀಡದಂತೆ ತಡೆಯಬೇಕೆಂದು ಕೋರಿದ್ದಾರೆ. ‘ಈ ಬೇಡಿಕೆಯನ್ನು ಸರಕಾರ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಈಗ ಜುಲೈನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.
ಅರ್ಜಿಯಲ್ಲಿ ಏನು ಹೇಳಿದೆ ?
ಸಿಂಗ್ ಇವರ ಅರ್ಜಿಯಲ್ಲಿ, ಇತರ ಧಾರ್ಮಿಕ ಸಮುದಾಯಗಳ ಅದೇ ವರ್ಗದ ವ್ಯಕ್ತಿಗಳ ಆರ್ಥಿಕ ಸ್ಥಿತಿಯನ್ನು ಪರಿಗಣಿಸದೆ ನಿರ್ದಿಷ್ಟ ಧಾರ್ಮಿಕ ಸಮುದಾಯದ ಕೆಲವು ವ್ಯಕ್ತಿಗಳಿಗೆ ಗೌರವಗಳನ್ನು ನೀಡುವ ದೆಹಲಿ ಸರಕಾರದ ಪದ್ದತಿಯು ರಾಜ್ಯದ ಜಾತ್ಯತೀತ ಸ್ವರೂಪವನ್ನು ನೇರವಾಗಿ ಉಲ್ಲಂಘಿಸುತ್ತದೆ. ಇದು ಭಾರತದ ಸಂವಿಧಾನದ 14, 15(1) ಮತ್ತು 27, 266 ಮತ್ತು 282 ಅನ್ನು ಉಲ್ಲಂಘಿಸುತ್ತದೆ. ಈ ಸಾರ್ವಜನಿಕ ಹಿತಾಸಕ್ತಿಯು ‘ಅಖಿಲ್ ಭಾರತೀಯ ಇಮಾಮ್ ಸಂಘನ್ ವಿರುದ್ಧ ಭಾರತ್ ಸಂಘ’ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಈ ಪಿಐಎಲ್ ಅನುಸರಿಸುತ್ತದೆ, ಇದು ಇಮಾಮ್‌ಗಳಿಗೆ ಪಾವತಿಸಲು ಸಂಪನ್ಮೂಲಗಳನ್ನು ಬಳಸುವುದು ವಕ್ಫ್ ಮಂಡಳಿಯ ಕರ್ತವ್ಯವಾಗಿದೆ ಎಂದು ಹೇಳಿದೆ. ಅವರು ತಮ್ಮ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇದರಿಂದ ಸರಕಾರದ ಕ್ರಮ ಸಾಂವಿಧಾನಿಕ ತತ್ವಗಳಿಗೆ ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ ಎಂಬುದು ಸ್ಪಷ್ಟವಾಗಿದೆ. ರಾಜ್ಯದ ಕ್ರೋಢೀಕೃತ ನಿಧಿಯಿಂದ ಯಾವುದೇ ಧರ್ಮದ ನಿರ್ದಿಷ್ಟ ಸಮುದಾಯಕ್ಕೆ ಹಣವನ್ನು ನೀಡಲಾಗುವುದಿಲ್ಲ.
ಸಂಪಾದಕೀಯ ನಿಲುವುಬಹುಸಂಖ್ಯಾತ ಹಿಂದೂಗಳಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಮುಸ್ಲಿಮರಿಗೆ ಖರ್ಚು ಮಾಡುವ ಹಕ್ಕನ್ನು ಆಮ್ ಆದ್ಮಿ ಪಕ್ಷಕ್ಕೆ ಯಾರು ಕೊಟ್ಟರು ? ಹಿಂದೂಗಳ ಹಣದಿಂದ ಪೋಷಣೆಯಾಗುತ್ತಿರುವ ಇವರೇ ಹಿಂದೂಗಳ ಮೇಲೆ ದಾಳಿ ಮಾಡಲು ಪ್ರಚೋದಿಸುತ್ತಿದ್ದಾರೆ ಎಂಬುದನ್ನು ಗಮನಿಸಿ ! |