ಜರ್ಮನಿಯ ಸಂಶೋಧನಾ ಹಡಗಿಗೆ ತನ್ನ ಬಂದರಿನಲ್ಲಿ ನಿಲ್ಲಲು ಶ್ರೀಲಂಕಾ ಅನುಮತಿ

ಚೀನಾ ಕೆಂಡಾಮಂಡಲ

ಸಾಂದರ್ಭಿಕ ಛಾಯಾಚಿತ್ರ

ಕೊಲಂಬೋ (ಶ್ರೀಲಂಕಾ) – ಶ್ರೀಲಂಕಾವು ಮತ್ತೊಮ್ಮೆ ತನ್ನ ಬಂದರಿನಲ್ಲಿ ಸಂಶೋಧನೆ ಮಾಡುವ ನೌಕೆಗಳನ್ನು ನಿಲ್ಲಿಸಲು ಅನುಮತಿ ನೀಡಿದೆ. ಜರ್ಮನಿಯ ಒಂದು ನೌಕೆಗೆ ಈಗ ಅನುಮತಿ ನೀಡಿದೆ. ಈ ಬಗ್ಗೆ ಚೀನಾವು ಶ್ರೀಲಂಕಾವನ್ನು ಟೀಕಿಸಿದೆ. ಶ್ರೀಲಂಕಾದ ಚೀನಾದ ರಾಯಭಾರಿಯು ಇದನ್ನು ಖಂಡಿಸುತ್ತಾ, ‘ಫೆಬ್ರವರಿಯಲ್ಲಿ ನಮ್ಮ ನೌಕೆಯನ್ನು ಶ್ರೀಲಂಕಾ ಬಂದರಿನಲ್ಲಿ ನಿಲ್ಲಿಸಲು ಅನುಮತಿಸಲಿಲ್ಲ, ಆದರೆ ಜರ್ಮನ್ ನೌಕೆಯನ್ನು ನಿಲ್ಲಿಸಲು ಏಕೆ ಅನುಮತಿ ಕೊಟ್ಟಿರಿ?‘ ಆ ಸಮಯದಲ್ಲಿ ಭಾರತವು ಆಕ್ಷೇಪಿಸಿದ ನಂತರ ಶ್ರೀಲಂಕಾವು ಸಂಶೋಧನೆಯ ಹೆಸರಿನಲ್ಲಿ ಬೇಹುಗಾರಿಕೆ ಮಾಡುವ ಚೀನಾ ನೌಕೆಗೆ ಅನುಮತಿ ನಿರಾಕರಿಸಿ ಸಂಶೋಧನೆ ಮಾಡುವ ಎಲ್ಲಾ ವಿದೇಶಿ ನೌಕೆಗಳ ಮೇಲೆ ನಿಷೇಧ ಹೇರಿತ್ತು.

ಸಂಪಾದಕೀಯ ನಿಲುವು

ಶ್ರೀಲಂಕಾ ಯಾವ ದೇಶಗಳ ನೌಕೆಗಳನ್ನು ಸಂಶೋಧನೆಗಾಗಿ ನಿಲ್ಲಲು ಅನುಮತಿಸಬೇಕು ಅಥವಾ ಅನುಮತಿಸಬಾರದು, ಇದು ಅವರ ವಿಷಯವಾಗಿದೆ; ಆದರೆ ಚೀನಾ ನಿರಂತರವಾಗಿ ಶ್ರೀಲಂಕಾದ ಆಂತರಿಕ ಸಮಸ್ಯೆಗಳತ್ತ ಗಮನ ನೀಡಿ ಅದನ್ನು ಕತ್ತಲೆಯಲ್ಲಿಡಲು ಪ್ರಯತ್ನ ಮಾಡುತ್ತಿದೆ. ಶ್ರೀಲಂಕಾವು ಚೀನಾದ ಒತ್ತಡಕ್ಕೆ ಮಣಿಯದಂತೆ ಭಾರತವು ಅದಕ್ಕೆ ಕಾಲಕಾಲಕ್ಕೆ ಸಹಾಯ ಮಾಡುವುದರಲ್ಲಿಯೇ ಎರಡೂ ದೇಶಗಳ ಹಿತಾಸಕ್ತಿಯಿದೆ.