Swatantrya Veer Savarkar Movie : ಇಂದು ‘ಸ್ವಾತಂತ್ರ್ಯ ವೀರ ಸಾವರ್ಕರ್ ‘ ಮರಾಠಿ ಚಲನಚಿತ್ರ ಪ್ರದರ್ಶಿತಗೊಳ್ಳಲು ಸಾಧ್ಯವಿಲ್ಲ !

  • ಸೆನ್ಸಾರ್ ಬೋರ್ಡಿನ ಹಿಂದುದ್ವೇಷ ಮತ್ತೊಮ್ಮೆ ಬಹಿರಂಗ !

  • ಹಿಂದಿ ಚಲನಚಿತ್ರಕ್ಕೆ ಮಾರ್ಚ್ ೨೧ ರಂದು ಮಧ್ಯಾಹ್ನ 1:30 ಗಂಟೆಗೆ ಸರಿಯಾಗಿ ದೊರೆತ ಅನುಮತಿ !

  • ಒಂದು ವಾರದ ಹಿಂದೆಯೇ ಅನುಮತಿ ಕೇಳಿದ್ದರು ಬೋರ್ಡಿನ ಅಧಿಕಾರಿ ಸೈಯದ್ ರಾಬಿ ಹಾಶಮಿ ಇವರಿಂದ ಮುಂದೂಡಿಕೆ !

ಮುಂಬಯಿ – ಜಗತ್ತಿನ ಕೋಟ್ಯಾಂತರ ಹಿಂದುಗಳು ಕಾತರರಾಗಿ ಕಾಯುತ್ತಿರುವ ‘ಸ್ವಾತಂತ್ರ್ಯ ವೀರ ಸಾವರ್ಕರ್ ‘ಚಲನಚಿತ್ರ ಮಾರ್ಚ್ ೨೨ ರಂದು ಪ್ರದರ್ಶನಗೊಳ್ಳಬೇಕಿತ್ತು ; ಆದರೆ ಹಿಂದಿ ಚಲನಚಿತ್ರ ಪ್ರದರ್ಶಿತಗೊಳಿಸಲು ಸೆನ್ಸಾರ್ ಬೋರ್ಡ್ ಕೊನೆಯ ಘಳಿಗೆಯಲ್ಲಿ ಅಂದರೆ ಮಾರ್ಚ್ ೨೧ ರ ಮಧ್ಯಾಹ್ನ 1:30ಕ್ಕೆ ಅನುಮತಿ ಪತ್ರ ನೀಡಿದೆ. ಹಿಂದಿ ಚಲನಚಿತ್ರಕ್ಕೆ ಅನುಮತಿ ನೀಡಿದ ನಂತರವೇ ಮರಾಠಿ ಚಿತ್ರಕ್ಕಾಗಿ ಅನುಮತಿ ಅರ್ಜಿ ಸಲ್ಲಿಸಬಹುದು. ವಿಶ್ವಸನೀಯ ಮೂಲಗಳು ‘ಸನಾತನ ಪ್ರಭಾತ’ ಗೆ ಈ ಮಾಹಿತಿ ನೀಡಿದ್ದಾರೆ. ಹಾಗಾಗಿ, ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಯ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರ ಇಂದು ಪ್ರದರ್ಶನಗೊಳ್ಳುತ್ತಿಲ್ಲ ಎಂಬುದು ಸಮಸ್ತ ಹಿಂದುಗಳಲ್ಲಿ ಆಕ್ರೋಶವನ್ನುಂಟುಮಾಡಿದೆ.

ಮೂಲಗಳ ಪ್ರಕಾರ, ಸೆನ್ಸಾರ್ ಬೋರ್ಡಿನ ಅಧಿಕಾರಿ ಸೈಯದ್ ರಾಬಿ ಹಾಶಮಿ ಅವರು ಈ ಚಲನಚಿತ್ರದ ನಿರ್ಮಾಪಕನಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ಅವರನ್ನು ಗೊಂದಲಗೊಳಿಸಿದ್ದರು ಹಾಗೂ ಕೊನೆಯ ಘಳಿಗೆಯಲ್ಲಿ ಹಿಂದಿ ಚಲನಚಿತ್ರಕ್ಕೆ ಅನುಮತಿ ನೀಡಿದರು. ವಿಶೇಷವೆಂದರೆ ಬ್ರಿಟನ್ ನಲ್ಲಿ ಈ ಚಿತ್ರಕ್ಕೆ ಕೂಡಲೇ ಅನುಮತಿ ಸಿಕ್ಕಿದೆ; ಆದರೆ ಭಾರತದಲ್ಲಿನ ಸೆನ್ಸಾರ್ ಬೋರ್ಡ್ ನಿಂದಾಗಿ ಇದರ ಪ್ರದರ್ಶನಕ್ಕೆ ಬಹಳಷ್ಟು ಅಡೆತಡೆಗಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟಾರೆ ಸೆನ್ಸಾರ್ ಬೋರ್ಡಿನ ಕಿರುಕುಳದಿಂದ ಅಥವಾ ಹಿಂದೂ ದ್ವೇಷದ ನಿಲುವಿನಿಂದಾಗಿ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರ ಪ್ರದರ್ಶನಕ್ಕೆ ಒಂದು ರೀತಿಯಲ್ಲಿ ಅನುಮತಿಯನ್ನೇ ನಿರಾಕರಿಸಲಾಗಿದೆ ಎಂದೇ ಹೇಳಬಹುದು.

ಸನಾತನ ಪ್ರಭಾತದ ಪ್ರತಿನಿಧಿ ಈ ವಿಷಯದ ಬಗ್ಗೆ ಸೆನ್ಸಾರ್ ಬೋರ್ಡಿನ ಪ್ರಾಂತೀಯ ಅಧಿಕಾರಿ ಮತ್ತು ಈ ಚಿತ್ರಕ್ಕೆ ಅನುಮತಿ ಪತ್ರ ನೀಡುವ ಸೈಯದ್ ರಾಬಿ ಹಾಶಮಿ ಅವರನ್ನು ಸಂಪರ್ಕಿಸಿದಾಗ ಅವರು, ‘ನಾವು ಕೇವಲ ಚಿತ್ರದ ಅರ್ಜಿದಾರರ ಜೊತೆಗೆ ಮಾತ್ರ ಮಾತನಾಡುತ್ತೇವೆ’ ಎಂದರು. ಇದೇ ಅಧಿಕಾರಿಗಳು ೨ ತಿಂಗಳ ಹಿಂದೆ ‘ಛತ್ರಪತಿ ಸಂಭಾಜಿ’ ಚಲನಚಿತ್ರ ಪ್ರದರ್ಶನಕ್ಕೆ ಬಹಳಷ್ಟು ಅಡಚಣೆ ನಿರ್ಮಾಣ ಮಾಡಿದ್ದರು. ಛತ್ರಪತಿ ಸಂಭಾಜಿ ಮಹಾರಾಜ್ ಅವರಿಗೆ ಇಸ್ಲಾಂ ಸ್ವೀಕರಿಸುವುದಕ್ಕಾಗಿ ಔರಂಗಜೇಬ ತೀವ್ರ ಹಿಂಸೆ ನೀಡಿದ್ದನು ಎಂಬುದಕ್ಕೆ ಸಾಕ್ಷಿ ನೀಡಿ ಎಂದು ಹಾಶಮಿ ಕೇಳಿದ್ದರು.(ಮುಸಲ್ಮಾನರು ಮೊದಲು ಇಸ್ಲಾಮ್ ಗೆ ಮಹತ್ವ ಕೊಡುತ್ತಾರೆ ಮತ್ತು ಆ ಬಳಿಕವೇ ಅವರ ಹುದ್ದೆ ನೋಡುತ್ತಾರೆ ಎಂಬುದು ಇಂತಹ ಘಟನೆಗಳಿಂದ ಗಮನಕ್ಕೆ ಬರುತ್ತದೆ ! ಇಂಥವರನ್ನು ಅಮಾನತುಗೊಳಿಸುವುದಕ್ಕಾಗಿ ಮಾಹಿತಿ ಮತ್ತು ಪ್ರಸಾರಣ ಸಚಿವ ಅನುರಾಗ ಠಾಕೂರ್ ಅವರು ನಿರ್ಣಯ ತೆಗೆದುಕೊಳ್ಳಬೇಕೆಂದು ಹಿಂದುಗಳ ಅಭಿಪ್ರಾಯವಾಗಿದೆ ! – ಸಂಪಾದಕರು)

ನಿರ್ಮಾಪಕ -ನಿರ್ದೇಶಕ -ಲೇಖಕ ಮತ್ತು ನಟ ರಣದೀಪ ಹುಡಾ ಅವರು ತಮ್ಮ ಸರ್ವಸ್ವವನ್ನು ಅರ್ಪಿಸಿ ನಿರ್ಮಿಸಿರುವ ಚಿತ್ರ ಇದಾಗಿದೆ !

ರಣದೀಪ ಹುಡಾ ಅವರು, ಈ ಚಲನಚಿತ್ರದ ನಿರ್ಮಾಣಕ್ಕಾಗಿ ಭಗೀರಥ ಪ್ರಯತ್ನ ಮಾಡಿದ್ದಾರೆ. ಸಾವರ್ಕರ್ ಪಾತ್ರನಿರ್ವಹಿಸುವುದಕ್ಕಾಗಿ ೩೦ ಕೆ ಜಿ ತೂಕ ಇಳಿಸಿಕೊಂಡಿದ್ದಲ್ಲದೇ, ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ ಚಿತ್ರ ನಿರ್ಮಾಣಕ್ಕೆ ಹಣ ಒಟ್ಟುಗೂಡಿಸಿದರು, ಹಾಗೂ ಒಂದೇ ಚಿತ್ರದಲ್ಲಿ ನಿರ್ಮಾಪಕ, ನಿರ್ದೇಶಕ, ಲೇಖಕ ಮತ್ತು ನಟ ಹೀಗೆ ನಾಲ್ಕು ವಿಶೇಷ ಪಾತ್ರಗಳನ್ನು ನಿರ್ವಹಿಸಿದ್ದಾರೆ .

ಸಂಪಾದಕೀಯ ನಿಲುವು

ಹಿಂದೂ ದ್ವೇಷಿ ಮತ್ತು ಕಮ್ಯುನಿಸ್ಟರ್ ಕೇಂದ್ರವಾಗಿರುವ ಸೆನ್ಸಾರ್ ಬೋರ್ಡ್ ! ಇಂತಹವರನ್ನು ಮಟ್ಟ ಹಾಕುವುದಕ್ಕಾಗಿ ಹಿಂದೂಗಳು ಇಂತವರ ಮೇಲೆ ಒತ್ತಡ ನಿರ್ಮಾಣ ಮಾಡಬೇಕು !

ತಮ್ಮ ಜೀವನವನ್ನೇ ಪಣಕ್ಕಿಟ್ಟು ದೇಶದ ಸ್ವಾತಂತ್ರ್ಯಕ್ಕಾಗಿ ಅತುಲನಿಯ ಪರಾಕ್ರಮ ಮೆರೆದಿದ್ದ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಮೃತ್ಯುವಿನ ೫೭ ವರ್ಷಗಳ ನಂತರವೂ ಅವರ ಮೇಲೆ ಅನ್ಯಾಯ ನಡೆಯುತ್ತಲೇ ಇರುವುದು ಭಾರತದಲ್ಲಿನ ಬಹುಸಂಖ್ಯಾತ ಹಿಂದೂಗಳಿಗೆ ನಾಚಿಕೆಗೇಡಿನ ವಿಷಯವಾಗಿದೆ !

ಕೇಂದ್ರದಲ್ಲಿ ಭಾಜಪದ ಸರಕಾರ ಇರುವಾಗ ಮತ್ತು ಸೆನ್ಸಾರ್ ಬೋರ್ಡ್ ಅದರ ಅಧಿಕಾರದಲ್ಲಿರುವಾಗ ಹಿಂದುಗಳ ಚಲನಚಿತ್ರಗಳ ಬಗ್ಗೆ ಈ ರೀತಿಯ ಅನ್ಯಾಯ ಆಗಬಾರದೆಂದು ಹಿಂದುಗಳಿಗೆ ಅನಿಸುತ್ತಿದೆ !