ಫ್ರಾನ್ಸ್ ನಲ್ಲಿ ೧೫ ಸಾವಿರ ‘ಎಕ್ಸ್ ಮುಸ್ಲಿಂ’ ಹಾಗೂ ಅಮೇರಿಕಾದಲ್ಲಿ ಪ್ರತಿವರ್ಷ ೧ ಲಕ್ಷ ಮುಸಲ್ಮಾನರು ಇಸ್ಲಾಂವನ್ನು ತ್ಯಜಿಸುತ್ತಾರೆ !
(ಎಕ್ಸ್ ಮುಸ್ಲಿಂ ಎಂದರೆ ಇಸ್ಲಾಂ ತ್ಯಜಿಸುವವರು)
ವಾಷಿಂಗ್ಟನ್ (ಅಮೇರಿಕಾ) – ಜಗತ್ತಿನಲ್ಲಿ ಕ್ರೈಸ್ತರ ನಂತರ ಮುಸಲ್ಮಾನರ ಸಂಖ್ಯೆ ಎಲ್ಲಕ್ಕಿಂತ ಹೆಚ್ಚಾಗಿದೆ. ಇಂದು ಜಗತ್ತಿನಲ್ಲಿ ೧೮೦ ಕೋಟಿಗಿಂತಲೂ ಹೆಚ್ಚು ಜನರು ಇಸ್ಲಾಂಅನ್ನು ನಂಬುತ್ತಾರೆ. ಒಂದುಕಡೆ ಇದು ಹೆಚ್ಚಾಗಿ ಬೆಳೆಯುವ ಪಂಥವಾಗಿದ್ದರೆ ಇನ್ನೊಂದು ಕಡೆ ಅದನ್ನು ತ್ಯಜಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರ ಪಂಥದವರಿಗು ಕೂಡ ಅವರ ಅನುಯಾಯಿಗಳು ತ್ಯಜಿಸುತ್ತಿರುವುದು ಆಗಾಗಾ ಬೆಳಕಿಗೆ ಬಂದಿದೆ, ಆದರೂ ಇಸ್ಲಾಂ ಮತ್ತು ಇತರ ಪಂಥ ಇದರಲ್ಲಿ ಒಂದು ಮಹತ್ವಪೂರ್ಣ ವ್ಯತ್ಯಾಸವಿದೆ. ಇಸ್ಲಾಂ ತ್ಯಜಿಸುವ ಪ್ರಯತ್ನ ಮಾಡುವವರಿಗೆ ಹಿಂಸಚಾರವನ್ನು ಎದುರಿಸಬೇಕಾಗುತ್ತದೆ. ಇವರಿಗೆ ‘ಎಕ್ಸ್ ಮುಸ್ಲಿಂ’ ಎಂದು ಕರೆಯುತ್ತಾರೆ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಒಂದು ಚಳವಳಿಯ ರೂಪ ಪಡೆದುಕೊಂಡಿದೆ. ಈ ಚಳವಳಿಯಿಂದ ಹೊಸದಾಗಿ ಇಸ್ಲಾಂ ತ್ಯಜಿಸುವವರಿಗೆ ಒಂದು ಆಧಾರ ಕೂಡ ದೊರೆಯುತ್ತಿರುವುದು ಬೆಳಕಿಗೆ ಬಂದಿದೆ. ಯುರೋಪದಲ್ಲಿ ಎಲ್ಲಕ್ಕಿಂತ ಹೆಚ್ಚು ಮುಸಲ್ಮಾನ ಜನಸಂಖ್ಯೆ ಇರುವ ಫ್ರಾನ್ಸ್ ನಲ್ಲಿ ೧೫ ಸಾವಿರ ‘ಎಕ್ಸ್ ಮುಸ್ಲಿಂ ‘ಇದ್ದಾರೆ ಹಾಗೂ ಅಮೇರಿಕಾದಲ್ಲಿ ಪ್ರತಿ ವರ್ಷ ೧ ಲಕ್ಷ ಮುಸಲ್ಮಾನರು ಇಸ್ಲಾಂಅನ್ನು ತ್ಯಜಿಸುತ್ತಿದ್ದಾರೆ.
೧. ೨೦೧೮ ರಲ್ಲಿ ಪ್ರಕಾಶಿತವಾಗಿರುವ ‘ಪ್ಯು ರಿಸರ್ಚ್ ಸೆಂಟರ್’ ನ ವರದಿಯಲ್ಲಿ, ಮುಸಲ್ಮಾನ ಕುಟುಂಬದಲ್ಲಿ ಬೆಳೆದಿರುವ ಅಮೇರಿಕಾ ಪ್ರೌಢರಲ್ಲಿ ಶೇಕಡಾ ೨೩ ರಷ್ಟು ಜನರು ತಮ್ಮನ್ನು ‘ಮುಸಲ್ಮಾನ ‘ಎಂದು ಪರಿಚಯ ತೋರಿಸುವುದಿಲ್ಲ ಎಂಬುದು ಕಂಡುಬಂದಿದೆ. ಇಸ್ಲಾ ತ್ಯಜಿಸುವವರಲ್ಲಿ ಶೇಕಡ ೭ ರಷ್ಟು ಜನರು, ಇಸ್ಲಾಂನ ಕಲಿಕೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ‘ಅಂಗ್ಲಿಕನ್ ಇಂಕ್’ ಈ ಸಂಸ್ಥೆಯ ವರದಿ ಪ್ರಕಾರ ಅಮೆರಿಕದಲ್ಲಿನ ಒಂದು ಸಮೀಕ್ಷೆಯಲ್ಲಿ, ಶೇ. ೫೫ ‘ಎಕ್ಸ್ ಮುಸ್ಲಿಂ’ ನಾಸ್ತಿಕರಾಗಿದ್ದಾರೆ, ಸುಮಾರು ಶೇಕಡಾ ೨೫ ರಷ್ಟು ಕ್ರೈಸ್ತರಾಗಿದ್ದಾರೆ ಹಾಗೂ ಇತರರು ಶೇಕಡಾ ೧೦ ರಷ್ಟರ ಧರ್ಮ ಅನಿಶ್ಚಿತವಾಗಿದೆ ಎಂಬುದು ವರದಿಯಿಂದ ಬೆಳಕಿಗೆ ಬಂದಿದೆ.
೨. ಮುಸಲ್ಮಾನ ಸಮಾಜದಲ್ಲಿ ಧರ್ಮ ತ್ಯಜಿಸುವುದು ಇದು ಅತ್ಯಂತ ನಿಷಿದ್ಧ ಕೃತ್ಯ ಎಂದು ಹೇಳುತ್ತಾರೆ; ಆದರೆ ಇದು ಬಹಿರಂಗವಾಗಿ ಜಾಹೀರಾಪಡಿಸುವುದರಲ್ಲಿ ಒಂದು ದೊಡ್ಡ ಸಂದೇಶ ಅಡಗಿದೆ. ಸಾಮಾನ್ಯವಾಗಿ ಇಸ್ಲಾಂ ದೇಶಗಳಲ್ಲಿ ಇಸ್ಲಾಂ ತ್ಯಜಿಸುವುದು ಅಕ್ರಮವಾಗಿದೆ; ಆದರೆ ಯುರೋಪ್ ಮತ್ತು ಅಮೆರಿಕಾದಂತಹ ದೇಶಗಳಲ್ಲಿ ಇದು ಕಾನೂನುರಿತ್ಯ ಇದೆ, ಇಲ್ಲಿ ಇಂತಹ ಮಾಜಿ ಮುಸಲ್ಮಾನರಿಗೆ ಬಹಳಷ್ಟು ಅಡಚಣೆಗಳು ಎದುರಿಸಬೇಕಾಗುತ್ತದೆ. ಬಿಬಿಸಿಯು ೨೦೧೫ ರಲ್ಲಿ ನಡೆಸಿರುವ ಪರಿಶೀಲನೆಯಲ್ಲಿ ಬ್ರಿಟನ್ ನಲ್ಲಿ ಇಸ್ಲಾಂ ತ್ಯಜಿಸುವವರು ಕಿರುಕುಳ ಸಹಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ‘ಎಕ್ಸ್ ಮುಸ್ಲಿಮರು’ ಸಮಾಜದ ಎದುರು ಬರುವುದು ಇದು ಇತರರಿಗೆ ಧೈರ್ಯ ನೀಡುತ್ತದೆ.
ಅಮೇರಿಕಾ ಮತ್ತು ಯುರೋಪ್ ಇಲ್ಲಿ ಕಾರ್ಯನಿರತ ‘ಎಕ್ಸ್ ಮುಸ್ಲಿಂ’ ಚಳುವಳಿ !
೧. ೨೦೦೭ ರಲ್ಲಿ ಜರ್ಮನಿನಲ್ಲಿ ‘ಸೆಂಟ್ರಲ್ ಕೌನ್ಸಿಲ್ ಆಫ್ ಎಕ್ಸ್ ಮುಸ್ಲಿಂ’ ನ ಸ್ಥಾಪನೆ ಆಯಿತು. ‘ಎಕ್ಸ್ ಮುಸ್ಲಿಂ’ಗಾಗಿ ಇದು ಮೊದಲ ದೊಡ್ಡ ವೇದಿಕೆ ಆಗಿತ್ತು. ಅಂದಿನಿಂದ ಪಶ್ಚಿಮಾತ್ಯ ದೇಶಗಳಲ್ಲಿ ಇಂತಹ ಅನೇಕ ಗುಂಪುಗಳ ಉದಯವಾಯಿತು, ಅವರು ಇಸ್ಲಾಂ ತ್ಯಜಿಸುವವರಿಗೆ ಸಹಾಯ ಮಾಡುತ್ತವೆ.
೨. ಅಮೇರಿಕಾದ ‘ಎಕ್ಸ್ ಮುಸ್ಲಿಂ’ ಸಂಘಟನೆ ಹೀಗೆ ಮಾಡುವವರನ್ನು ಬೆಂಬಲಿಸುತ್ತದೆ. ಅವರು ಇಸ್ಲಾಂನ ವಿರುದ್ಧ ಬಲವಾಗಿ ವಾದ ಮಾಡುತ್ತಾರೆ ಮತ್ತು ಸ್ತ್ರೀಯರಿಗೆ ಅಸಮಾನತೆಯ ವರ್ತನೆ ಮತ್ತು ಬಹುಪತ್ನಿತ್ವದಂತಹ ತೊಂದರೆ ದಾಯಕ ಅಂಶಗಳನ್ನು ಬಹಿರಂಗಪಡಿಸುತ್ತದೆ.
೩. ಲಾಸ್ ಎಂಜೆಲ್ಸ್ ನಲ್ಲಿ ವಾಸಿಸುವ ವಫಾ ಸುಲ್ತಾನಳು ಇಂತಹದೇ ಒಂದು ಮಾಜಿ ಮುಸಲ್ಮಾನ ಆಗಿದ್ದಾರೆ, ಅವರು ಅರಬಿ ಭಾಷೆ ಮಾತನಾಡುವವರನ್ನು ಸಂಭೋಧಿಸುತ್ತದೆ. ಅವರನ್ನು ಇಸ್ಲಾಂನಲ್ಲಿ ಇರುವ ಕೊರತೆಗಳನ್ನು ಹೇಳಿ ಇಸ್ಲಾಂ ತ್ಯಜಿಸಲು ಹೇಳುತ್ತಾರೆ.
೪. ಫ್ರೆಂಚ್ ಪತ್ರಕರ್ತ ಜೈನಾಬ್ ಅಲ್-ರೀಜೈ ಈ ಪ್ರಸಿದ್ಧ ‘ಎಕ್ಸ್ ಮುಸ್ಲಿಂ’ ಆಗಿದ್ದು ಅವರು ಇಸ್ಲಾಂನ ಬಗ್ಗೆ ಕಟುವಾಗಿ ಟೇಕಿಸುತ್ತಾರೆ.