ಸನಾತನ ಆಶ್ರಮಗಳ ಛಾಯಾಚಿತ್ರಾತ್ಮಕ ವೈಶಿಷ್ಟ್ಯಗಳು

ಸಾಧಕರಿಗೆ ಅನಾರೋಗ್ಯವಿದ್ದರೆ, ಆಶ್ರಮದ ಸಾಧಕರು – ವೈದ್ಯರು ಅವರ ಸೇವೆ ಮಾಡುತ್ತಾರೆ. ರೋಗಿಯು ಮನೆಗೆ ಹೋಗುವ ಅಗತ್ಯವಿರುವುದಿಲ್ಲ.
ದೇಹಾಭಿಮಾನವನ್ನು ಮರೆತು ಆನಂದದಿಂದ ಸೇವೆ ಮಾಡುವ ವಯೋವೃದ್ಧ ಮಹಿಳಾ ಸಾಧಕಿಯರು ಎಲ್ಲವನ್ನೂ ತ್ಯಾಗ ಮಾಡಿ ಬಂದಿರುವ ಸಾಧಕರು ಆಶ್ರಮದಲ್ಲಿ ಯಾವುದೇ ವೇತನವನ್ನು ಪಡೆಯದೆ ಆನಂದದಿಂದ ಸೇವೆಯನ್ನು ಮಾಡುತ್ತಿದ್ದಾರೆ.

ಸನಾತನದ ಆಶ್ರಮಗಳಲ್ಲಿ ವಿವಿಧ ಜಾತಿ, ಮತಗಳ ಸಾಧಕರು ತಮ್ಮ ಆಶ್ರಮ ಜೀವನವನ್ನು ಆನಂದದಿಂದ ಕಳೆಯುತ್ತಿದ್ದಾರೆ.  ಇಲ್ಲಿ ಆಧ್ಯಾತ್ಮಿಕ ಪ್ರಗತಿಗೆ ಪೂರಕ ವಾತಾವರಣವಿದೆ.  ಆಶ್ರಮದಲ್ಲಿದ್ದು ಸಾಧನೆಯನ್ನು ಮಾಡುವುದರಿಂದ, ಸಾಧಕರ ಸಾಧನೆಗೆ ಪೂರಕವಾದ ವ್ಯಾಪಕತ್ವ, ಮುಕ್ತತೆ, ತ್ಯಾಗ  ಮುಂತಾದ ವಿವಿಧ ಗುಣಗಳ ವಿಕಾಸವಾಗುತ್ತದೆ. ಇಲ್ಲಿನ ಕೆಲವು ಉದಾಹರಣೆಗಳನ್ನು ಛಾಯಾಚಿತ್ರಗಳ ಸ್ವರೂಪದಲ್ಲಿ ನೀಡಲಾಗಿದೆ.

ಅಹಂ ನಿರ್ಮೂಲನೆಗಾಗಿ ಫಲಕದಲ್ಲಿ ತಪ್ಪು ಬರೆಯುವ ಸಾಧಕ ದೋಷಗಳು ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಮುಖಾಂತರ ಉತ್ತಮ ಸಾಧಕರನ್ನು ತಯಾರು ಮಾಡಲಾಗುತ್ತದೆ.
ರಾಕ್‌ನಲ್ಲಿ ವ್ಯವಸ್ಥಿತವಾಗಿ ಜೋಡಿಸಿಟ್ಟ ತರಕಾರಿಗಳು ಪ್ರತಿಯೊಂದು ವಸ್ತುವನ್ನು ವ್ಯವಸ್ಥಿತವಾಗಿ ಅದರ ನಿಗದಿತ ಸ್ಥಾನದಲ್ಲಿ ಇಡಲಾಗುತ್ತದೆ.

ಸನಾತನದ ದೇವದ ಆಶ್ರಮದ ಬಗ್ಗೆ ಕೆಲವು ನ್ಯಾಯವಾದಿಗಳ  ಅಭಿಮತ

೧. ನ್ಯಾಯವಾದಿ  ಶ್ರೀರಾಮ ಠೋಸರ –ಆಶ್ರಮವು ಚೈತನ್ಯದಾಯಿಯಾಗಿದೆ. ಇಂದು ಸನಾತನ ಸಂಸ್ಥೆ ಹಾಗೂ ಸನಾತನ ಪ್ರಭಾತದ ಕಾರ್ಯವು ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ, ದೇವತೆ-ಧರ್ಮದ ಕಾರ್ಯವು ಹೇಗೆ ಆವಶ್ಯಕವಾಗಿದೆಯೋ, ಹಾಗೆಯೇ ನಡೆಯುತ್ತಿದೆ. ನಾವು ಯಥಾಶಕ್ತಿ ಈ ಕಾರ್ಯದಲ್ಲಿ ಜೊತೆಗಿರುವೆವು.

೨. ನ್ಯಾಯವಾದಿ ಸೌರಭ ಪಾಟೀಲ : ಆಶ್ರಮಕ್ಕೆ ಪ್ರವೇಶಿಸುವಾಗ ಸಕಾರಾತ್ಮಕ ಸ್ಪಂದನಗಳ ಅರಿವಾಯಿತು. ವಾತಾವರಣವು ಬಹಳ ಪ್ರಸನ್ನತೆಯಿಂದ ಕೂಡಿದೆ. ಆಶ್ರಮದಲ್ಲಿ ವಿವಿಧ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಉಪಕ್ರಮಗಳನ್ನು ನೋಡಿ ಬಹಳ ಸಂತೋಷವಾಯಿತು.

೩. ನ್ಯಾಯವಾದಿ ಸವಿತಾ ಪಿಂಗಳೆ :  ಅತ್ಯಂತ ಸುಂದರವಾದ ವ್ಯವಸ್ಥೆ, ಏಕಾಗ್ರ ಚಿಂತನೆಗೆ ಉತ್ತಮ ಸ್ಥಳವಾಗಿದೆ.

ಜೀವನದ ಆಧ್ಯಾತ್ಮೀಕರಣ ಮಾಡಲು ಕಲಿಸುವ ಸನಾತನ ಸಂಸ್ಥೆ

ಆಹಾರ, ವಿಹಾರ, ಉಡುಪು, ಕೇಶವಿನ್ಯಾಸ, ಅಲಂಕಾರ, ವಾಸ್ತು, ವಾಹನಗಳು ಮುಂತಾದ ಎಲ್ಲ ವಿಷಯಗಳನ್ನು ಸಾತ್ವಿಕವಾಗಿ ಹೇಗೆ ಮಾಡಬೇಕು ? ಅದರ ಹಿಂದಿರುವ ಆಧ್ಯಾತ್ಮಿಕ ಕಾರಣಗಳನ್ನು ಹೇಳಿ ‘ಜೀವನದ ಆಧ್ಯಾತ್ಮೀಕರಣ ಹೇಗೆ ಮಾಡಬೇಕು ?, ಈ ವಿಷಯದಲ್ಲಿ ಸನಾತನ ಸಂಸ್ಥೆಯು ಪ್ರಬೋಧನೆ ಮಾಡುತ್ತಿದೆ.

ಈ ಮೂಲಕ ನಮ್ಮಲ್ಲಿರುವ ದೇವತ್ವ ಜಾಗೃತವಾಗಲು ಹೇಗೆ ಸಹಾಯವಾಗುತ್ತದೆ ?, ಇದನ್ನು ಅತ್ಯಂತ ಸಹಜ, ಸುಲಭ ಭಾಷೆಯಲ್ಲಿ ಸನಾತನ ಸಂಸ್ಥೆಯು  ಕಲಿಸುತ್ತದೆ.